ಆರದಿರಲಿ ಅರಿವಿನ ದೀಪ ಅರಳುತಿರಲಿ ಅನುಭಾವ ಪುಷ್ಟ ಕಾರ್ಯಕ್ರಮ

0
13

ಹಾವೇರಿ :

        ಬಸವಾದಿ ಶರಣರು ತಮ್ಮ ಅನುಭವಗಳ ಮೂಲಕ ಅರಿವಿನ ದೀಪವನ್ನು ಹಚ್ಚುವ ಕೆಲಸವನ್ನು ಮಾಡಿದರು ಎಂದು ಬಸವ ಶಾಂತಲಿಂಗಶ್ರೀಗಳು ಹೇಳಿದರು.

        ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ನಡೆದ ಆರದಿರಲಿ ಅರಿವಿನ ದೀಪ ಅರಳುತಿರಲಿ ಅನುಭಾವ ಪುಷ್ಟ ಕಾರ್ಯಕ್ರಮ ಹಾಗೂ ತಿಂಗಳ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

      ಶರಣರು ಲಿಂಗ, ಜಂಗಮ, ಪಾದೋದಕಗಳ ಕುರಿತು ಹಲವಾರುಚಿಂತನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹನ್ನೆರಡೇ ಶತಮಾನದಲ್ಲಿಯೇ ಶರಣರು ಸ್ತ್ರೀ ಸಮಾನತೆಗಾಗಿಅನುಭಾವ ಮಂಟಪದಲ್ಲಿ ಸ್ತ್ರೀಯರಿಗೆ ಅವಕಾಶ ಕಲ್ಪಿಸಿಕೊಟ್ಟು ಸ್ತ್ರೀ ಸಮಾನತೆಗಾಗಿ ಪ್ರಯತ್ನ ನಡೆಸಿದ್ದಾರೆ ಎಂದರು.

      ಮೊದಲು ನೀನು ಬೆಳಗು ನಂತರ ಸಮಾಜವನ್ನು ಬೆಳಗಿಸು ಎಂದು ಸಮಾಜದ ಎಲ್ಲಾ ವರ್ಗದವರನ್ನು, ಜಾತಿ, ಕುಲ, ಬೇಧ-ಬಾವ ಮಾಡದೇ ಸರ್ವರನ್ನು ಒಗ್ಗೂಡಿಸಿ ಸಮಾಜದ ಸ್ವಾಸ್ಥ್ಯಕಾಪಾಡುವ ಕೆಲಸವನ್ನು ಮಾಡಿದ್ದಾರೆಬಸವಾದಿ ಪ್ರಮಥರುತಮ್ಮ ವಚನಗಳಲ್ಲಿ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟಿದ್ದು, ಅದನ್ನು ಪ್ರತಿಯೊಬ್ಬರುಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜಕಲ್ಯಾಣ ಇಲಾಖೆಯಉಪನಿರ್ದೇಶಕಿ ಡಾ|| ಬಿ.ವಿ. ಚೈತ್ರಾ ಮಾತನಾಡಿ, ಶಾಲಾ-ಕಾಲೇಜುಗಳು ಹಾಗೂ ಆಧುನಿಕ ತಂತ್ರಜ್ಞಾನಗಳು ಪ್ರತಿಯೊಬ್ಬರಿಗೂಜ್ಞಾನವನ್ನು ನೀಡುವ ಕೆಲಸಗಳ ನಿರ್ವಹಿಸುತ್ತಿವೆಆದರೆ ಮಠಗಳು ಸಮಾಜವನ್ನು ವಿವೇಕವಂತರನ್ನಾಗಿಸುವ ಕೆಲಸವನ್ನು ಮಾಡುತ್ತಿವೆ. ಹೀಗಾಗಿ ಶರಣರುಇಂತಹ ಹಲವಾರು ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜವನ್ನುತಿದ್ದುವ, ವಿವೇಕವಂತರನ್ನಾಗಿರುವ ಕೆಲಸವನ್ನು ಮಾಡಬೇಕೆಂದರು.

      ಕಾರ್ಯಕ್ರಮದಲ್ಲಿಗದುಗಿನಡಾ|| ಸಿದ್ದಲಿಂಗ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಶ್ರೀಮತಿ ಇಂದಿರಾಕೊಪ್ಪದಉಪನ್ಯಾಸ ನೀಡಿದರು. ಶ್ರೀಮತಿ ರತ್ನಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ವಚನ ಸಂಗೀತವನ್ನು ಕು|| ವೈಷ್ಣವಿ ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here