ಡಿ.14ರಿಂದ ಅರಣ್ಯಾನಿ ಚಿತ್ರ ರಾಜ್ಯಾದ್ಯಂತ ತೆರೆಗೆ

0
21

ದಾವಣಗೆರೆ:

       ನಮ್ಮ ದಾವಣಗೆರೆಯ ಪೋರ ಮಯೂರ್ ಎಂ ನಾಯಕ ನಟನಾಗಿ ಅಭಿನಯಿಸಿರುವ `ಅರಣ್ಯಾನಿ’ ಚಿತ್ರ ಡಿ.14 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

       ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಭರತ್, ಶ್ರೀ ಗಂಗಾಧರೇಶ್ವರ ಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಅರಣ್ಯಾನಿ ಚಿತ್ರವು ಡಿ.14ರಿಂದ ರಾಜ್ಯದ ಸುಮಾರು 7ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಿದರು.

       ಪಿ.ರವಿಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ನಾಲ್ಕು ಹಾಡುಗಳಿವೆ. ಉತ್ತಮವಾದ ಸಂಗೀತ, ಸುಂದರವಾದ ಛಾಯಾಗ್ರಹಣ ಇದೆ. ಚಿತ್ರಕ್ಕೆ ಅಗತ್ಯವಾದ ಹೆಚ್ಚಿನ ಚಿತ್ರಿಕರಣ ರಾಜ್ಯದ ಸೋಮವಾರಪೇಟೆ, ಸಕಲೇಶಪುರ, ಬೆಂಗಳೂರು ಸುತ್ತಮುತ್ತ, ಕಾಡುಗಳಲ್ಲಿ ನಡೆಸಲಾಗಿದೆ. ಹೆಸರೆ ಸೂಚಿಸುವಂತೆ ಅರಣ್ಯಕ್ಕೆ ಸಂಬಂಧಿಸಿದ ಕಥೆ. ಕುತೂಹಲಕಾರಿಯಾಗಿ ಮೂಡಿ ಬಂದಿದೆ. 50 ದಿನ ಚಿತ್ರೀಕರಣ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

        ದಾವಣಗೆರೆಯ ಮಯೂರ ಎಂ. ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬಹುತೇಕ ಹೊಸಬರು ನಟಿಸಿದ್ದು, ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ನಟರಾದ ಎಂ.ಮಯೂರ್, ಅಂಜನ್, ಸಂತೋಷ್, ನಾಯಕಿ ತೇಜು  ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here