ಟಿಪ್ಪು ಜಯಂತಿಯನ್ನು ಭದ್ರತೆಯ ನಡುವೆ ಆಚರಿಸುತ್ತಿರುವುದು ನಮ್ಮ ದುರ್ದೈವ : ನಾಗಭೂಷಣ ಬಗ್ಗನಡು

0
15

ತಿಪಟೂರು:

        ಟಿಪ್ಪು ರಂತಹ ಮಹಾನ್‍ವ್ಯಕ್ತಿಯ ಜನ್ಮದಿನವನ್ನು ನಾವು ಪೋಲಿಸ್ ಭದ್ರತೆಯ ನಡುವೆ ಆಚರಿಸುತ್ತಿರುವುದು ನಮ್ಮ ದುರ್ದೈವವಾಗಿದೆ ಎಂದು ಡಾ. ನಾಗಭೂಷಣ ಬಗ್ಗನಡು ವಿಷಾಧಿಸಿದರು.

      ಇಂದು ನಗರದ ಮದೀನಾ ಶಾದಿಮಹಲ್‍ನಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಉಪನ್ಯಾಸ ನೀಡಿದ ಡಾ. ನಾಗಭೂಷಣ ಬಗ್ಗನಡು, ಸಹಾಯಕ ಪ್ರಾದ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ಯವಿದ್ಯಾನಿಲಯ, ಮಾತನಾಡುತ್ತಾ ಟಿಪ್ಪು ಸುಲ್ತಾನ್ ಒಬ್ಬ ಮಹಾನ್‍ದೇಶಪ್ರೇಮಿ, ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ, ಕ್ಷಿಪಣಿಯ ಜನಕ ಇಂತಹ ಮಹಾವೀರನನ್ನು ಟಿಪ್ಪು ಸುಲ್ತಾನ್ ನಮ್ಮ ಪರಮಾಧಿಕಾರವನ್ನು ಒಪ್ಪಿಕಪೊಳ್ಳಲಿಲ್ಲ ಎನ್ನುವ ಒಂದೇಒಂದು ಕಾರಣಕ್ಕೆ ಬ್ರೀಟೀಷರು ತಮ್ಮ ಇತಿಹಾಸದಲ್ಲಿ ಟಿಪ್ಪು ಒಬ್ಬ ಕ್ರೂರಿ, ಮತಾಂದ, ಧರ್ಮಬಂಜಕ, ದೇಶದ್ರೋಹಿ, ಕನ್ನಡ ವಿರೋಧಿ ಆಡಳಿತದಲ್ಲಿ ಪ್ರರ್ಶೀಯನ್ ಭಾಷೆಯನ್ನು ಹೆರಿದ್ದನು ಎಂದು ಆಂಗ್ಲರು ಬರೆದಿರುವ ಇತಿಹಾಸವನ್ನು ಓದುತ್ತಿದ್ದೇವೆ. ಆದರೆ ನಮ್ಮ ಜನಾಪದರು ಬರೆದಿರುವ ಜಾನಪದ ಸಾಹಿತ್ಯ ಲಾವಣಿಗಳಲ್ಲಿ ಟಿಪ್ಪು ಒಬ್ಬ ಅಪ್ಪಟ ದೇಶಪ್ರೇಮಿ ಎಂದು ಕರೆದಿದ್ದಾರೆ.

         ಟಿಪ್ಪು 1750ರ ನವೆಂಬರ್ 10ರಲ್ಲಿ ಹೈದರಾಲಿ ಮತ್ತು ಫಾತೀಮಾ ಫಕರ್ ಉನ್ನೀಸಾ ಮಗನಾಗಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಜನ್ಮತಾಳಿದನು. ಮಗನು ತನ್ನಂತೆಯೇ ನಿರಕ್ಷರ ಕುಕ್ಷಿಯಾಗುವುದು ಬೇಡವೆಂದು ಅವನಿಗೆ ಸೂಕ್ತವಾದ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸ, ಕುದುರೇ ಸವಾರಿ, ಹಲವಾರು ಭಾಷೆಗಳನ್ನು ಕಲಿಸಿದನು ಇದರ ಫಲವಾಗಿ ತನ್ನ ಯುದ್ದದಲ್ಲಿ ವಿಜಯಸಾಧಿಸಿದರು.

        ಇದನ್ನು ಮನಗಂಡ ಆಂಗ್ಲರು ಮರಾಠರು, ಹೈದರಾಬಾದ್ ನಿಜಾಮರು ಮತ್ತು ಮೈಸೂರಿನ ಒಡೆಯರನ್ನು ಸೇರಿಸಿ ಒಪ್ಪಂದವನ್ನು ಮಾಡಿಕೊಂಡು 2ನೇ ಆಂಗ್ಲೋಮೈಸೂರು ಯುದ್ದವನ್ನು ಮಾಡುವ ಸಂದರ್ಭದಲ್ಲಿ ಚಿತ್ತೂರಿನಲ್ಲಿ ಬೆನ್ನುಪಣಿ ರೋಗಕ್ಕೆ ತುತ್ತಾದ ಹೈದರಾಲಿಯು ಮರಣಹೊಂದಿದ ಸುದ್ದಿ ತಿಳಿದ ಟಿಪ್ಪುಸುಲ್ತಾನ್ ವಿಜಯದ ಹತ್ತಿರದಲ್ಲಿದ್ದ ಟಿಪ್ಪುವು ಯುದ್ದವನ್ನು ಮಂಗಳೂರು ಒಪ್ಪಂದದಲ್ಲಿ ಸಂದರ್ಭದಲ್ಲಿ ಸಹಾಯಕ ಸೈನ್ಯಪದ್ದತಿಗೆ ಒಪ್ಪಿ ಯುದ್ದದ ಖರ್ಚನ್ನು ಕೊಡುವದಾಗಿ ಹೇಳಿ ಒಪ್ಪಂದನ್ನು ಮಾಡಿಕೊಂಡು ಯುದ್ದವನ್ನು ನಿಲ್ಲಿಸಿದನು.

         ಇವುಗಳಲ್ಲಿ ಯುದ್ದ ಖರ್ಚನ್ನು ಕೊಡಲು ಹಣವಿಲ್ಲದ್ದರಿಂದ ತನ್ನ ಎರಡು ಮಕ್ಕಳನ್ನು ಅಡವಿಟ್ಟ ಮಹಾನ್ ದೇಶಪ್ರೇಮಿ. ಇವನು ಈ ಯುದ್ದದಲ್ಲಿ ಕಂಡುಹಿಡಿದಿದ್ದ ಕ್ಷಿಪಣಿಗಳು ಪಡೆದುಕೊಂಡು ಬ್ರಿಟೀಷ್ ವಿಜ್ಞಾನಿ ವಿಲಯಂ ಕಾಂಗ್ರೀವನು ರಾಕೇಟ್‍ಗಳನ್ನು ತರಿಸಿಕೊಂಡು ಅದರಮೇಲೆ ಸಂಶೋಧನೆ ನಡೆಸಿ ಮತ್ತೆ 3ನೇ ಆಂಗ್ಲೋ ಮೈಸೂರು ಯುದ್ದಲ್ಲಿ ಬಳಸಿದನು.

         ಆದರೆ ಯಾವುದಕ್ಕೂ ಹೆದರ ಟಿಪ್ಪು ಬ್ರೀಟೀಷರಿಗೆ ಸಿಂಹಸ್ವಪ್ನವಾಗಿ ಪ್ರಾನ್ಸ್‍ನ ನೆಪೋಲಿಯನ್ ಬೋನಾಪಾರ್ಟೆಯನ್ನು ಸಹಾಯಕ್ಕಾಗಿ ಕೇಳಿದಾಗ ಕಳುಹಿಸಿಕೊಡಲು ಒಪ್ಪಿದ ನೆಪೋಲಿಯನ್ ಇವೆಲ್ಲವನ್ನು ಮನಗಂಡ ಬ್ರಿಟೀಷರು ಟಿಪ್ಪುವನ್ನು ಸೋಲಿಸಲು ಸಾಧ್ಯವಾಗದೇ ತಮ್ಮ ಪ್ರಸಿದ್ಧವಾ ಒಡೆದು ಆಳುವ ನೀತಿಯನ್ನು ಬಳಸಿಕೊಂಡು ಟಿಪ್ಪುವಿನ ನಂಬಿಕಸ್ಥ ಸೇನಾಧಿಪತಿಯಾದ ಮೀರ್‍ಖಾಸಿಂಗೆ ಇಲ್ಲದ ಆಸೆ ಆಮೀಷಗಳನ್ನು ತೋರಿಸಿ ಅವನ ಮುಖಾಂತರ ಶ್ರೀರಂಗಪಟ್ಟಣದ ಕೋಟೆಯ ಒಳಗೆ ಪ್ರವೇಶಿಸಿ, ಆಯುಧಾಗಾರದಲ್ಲಿದ್ದ ಮದ್ದುಗುಂಡುಗಳಿಗೆ ಎಣ್ಣೆ, ಸಗಣೀನೀರನ್ನು ಸಿಂಪಡಿಸಿ ಉಪಯೋಗಕ್ಕೆ ಬಾರದಂತೆಮಾಡಿ ನಾಲ್ಕನೇ ಆಂಗ್ಲೋಮೈಸೂರು ಯುದ್ದದಲ್ಲಿ 1799 ರ ಮೇ 5ನೇ ರಂದು ರಣಭೂಮಿಯಲ್ಲೇ ಹೋರಾಡುತ್ತಾ ವೀರಮರಣವನ್ನಪ್ಪಿದನು ಆದರೆ ಇಂದು ಇದನ್ನು ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯುವೆಂದರು.

         ಉಪವಿಭಾಗಾಧಿಕಾರಿ ಕುಮಾರಿ ಪೂವಿತ ಮಾತನಾಡುತ್ತಾ ಟಿಪ್ಪುವನ್ನು ನಾವೆಲ್ಲರೂ ಆದರ್ಶವಾಗಿಟ್ಟುಕೊಳ್ಳಬೇಕು, ಅವರು ಸರ್ವಧರ್ಮ ಸಮನ್ವಯಿಯಾಗಿದ್ದು, ಹಲವಾರು ಮಠಮಾನ್ಯಗಳಿಗೆ ಧಾನದತ್ತಿಗಳನ್ನು ನೀಡಿದ್ದಾರೆ ಅವುಗಳಲ್ಲಿ ಶೃಂಗೇರಿ, ನಂಜನಗೂಡಿನ ನಂಜುಂಡೇಶ್ವರ, ಶ್ರೀರಂಗಪಟ್ಟಣದ ರಂಗನಾಥ ಮತ್ತು ಕೊಲ್ಲೂರಿನ ಮೂಕಾಂಬಿಕೆಗೆ ಇಂದು ಸಹಾ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಸಲಾಂ ಪೂಜೆ ನಡೆಯುತ್ತಿದೆ. ಇದು ಟಿಪ್ಪುವಿನ ಧರ್ಮಸಹಿಷ್ಣುವಾಗಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮಾಡಿದ ಇಂದು ನಾವೆಲ್ಲರೂ ಮೆಚ್ಚುತ್ತಿರುವ ಮೈಸೂರು ರೇಷ್ಮೆಯನ್ನು ಪರಿಚಯಿಸಿದ್ದು ಟಿಪ್ಪು ಸುಲ್ತಾನ್, ಕ್ಷಿಪಣಿಯ ಜನಕನೂ ಆಗಿದ್ದಾನೆಂದರು.

ವಿಶೇಷವಾಗಿ ಗನಸೆಳೆದ ವಿದ್ಯಾರ್ಥಿನಿ : ನೂರ್ ಪಾತೀಮಾ

          ಟಿಪ್ಪುವಿನ ಜೀವನಸಾಧನೆಯನ್ನು ಒಪ್ಪವಾಗಿ ಒಪ್ಪಿಸಿದ ನೂರ್ ಪಾತೀಮಾ ಟಿಪ್ಪು ಮತ್ತು ಹೈದರಾಲಿಯು ಕ್ಷಿಪಣಿಯನ್ನು ಪ್ರಯೋಗಿಸುತ್ತಿರುವ ಚಿತ್ರನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾವು ತನ್ನ ಕಟ್ಟಡದಲ್ಲಿ ಪ್ರದರ್ಶಿಸುತ್ತಿರುವುದು ನಮ್ಮ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಟಿಪ್ಪು ಒಬ್ಬ ಪರಿಸರ ಪ್ರೇಮಿಯಾಗಿದ್ದು ಇಂದು ಬೆಂಗಳೂರಿನಲ್ಲಿ ಕಾಣುತ್ತಿರುವ ಜೈವಿಕ ಉದ್ಯಾನವನ ಲಾಲ್‍ಬಾಗ್ ಎಷ್ಟು ಪ್ರಸಿದ್ದವಾಗಿದೆ. ಅಂದು ಚೀನಾದಿಂದ ಆಮದಾಗುತ್ತಿದ್ದ ರೇಷ್ಮೆಯನ್ನು ನಿಲ್ಲಿಸಿ ಕರ್ನಾಟಕದಲ್ಲೇ ರೇಷ್ಮೆಯನ್ನು ಬೆಳೆಯುವಂತಾಗಿದ್ದು ಇಂದು ರೇಷ್ಮೇ ಎಂದರೆ ಮೈಸೂರು ನೆನಪಾಗುವಂತೆ ಮಾಡಿದ ಕೀರ್ತಿ ಟಿಪ್ಪುಸುಲ್ತಾನ್‍ಗೆ ಸಲ್ಲುತ್ತದೆ. ಟಿಪ್ಪು ವಿಶೇಷವಾಗಿ ತಿಪಟೂರು ತಾಲ್ಲೂಕಿನ ರಂಗಾಪುರ ಸುಕ್ಷೇತ್ರದ ಮಹಾಮಹಿಮರಾದ ಪರದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀರಂಗನಾಥನ ಭಕ್ತನಾಗಿದ್ದು ಹಲವಾರು ದಾನದತ್ತಿಗಳನ್ನು ನೀಡಿದ್ದಾನೆ ಎಂದು ತಿಳಿಸಿರು.

          ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಎನ್.ಎಂ.ಸುರೇಶ್, ನಗರಸಭಾಧ್ಯಕ್ಷ ಟಿ.ಎನ್.ಪ್ರಕಾಶ್, ಉಪಾಧ್ಯಕ್ಷೆ ಜಹರಾ ಜಬೀನ್, ಸದಸ್ಯರಾದ ಪೌಸಿಯಾ ಖಾನಂ, ಮಾಜಿ ಸದಸ್ಯರುಗಳು, ತಹಸೀಲ್ದಾರ್ ಡಾ.ಮಂಜುನಾಥ್, ತಾ.ಪಂ ಈ.ಓ ಎಸ್.ಕೆ.ಷಡಕ್ಷರಿ ವಿವಿಧ ಇಲಾಖೆಯ ಅಧಿಕಾರಿಗಳು, ಮೌಲ್ವಿಗಳು, ಮುಸಲ್ಮಾನ ಮುಖಂಡರುಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here