ಕಸಾಪುರ ವಯಾ ಬ್ರಹ್ಮದೇವರಹಳ್ಳಿ ರಸ್ತೆಗೆ ಹಾಕಲಾಗಿರುವ ಡಾಂಬರು ರಸ್ತೆ ದುರಸ್ಥಿ ಕಳಪೆ ಸಾರ್ವಜನಿಕರಿಂದ ಆರೋಪ

ಮಿಡಗೇಶಿ

      ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದೇಶದ ,ರಾಜ್ಯದ ,ಜಿಲ್ಲೆಯ ತಾಲ್ಲೂಕು ಸೇರಿದಂತೆ ಹೋಬಳಿ ಗ್ರಾಮ ಪಂಚಾಯ್ತಿವರೆಗಿನ ಎಲ್ಲಾ ಜನಸಾಮಾನ್ಯ ರೈತಾಪಿ ವರ್ಗದವರ ಅನುಕೂಲಕರಕ್ಕೆ ಉಪಯೋಗವಾಗಲೆಂದು ಸಾರಿಗೆ ವ್ಯವಸ್ಥೆಗೂ ಅನುಕೂಲಕರಲೆಂಬ ಸದುದ್ದೇಶಗಳಿಂದ ರಾಜ್ಯದ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸುವುದಕ್ಕಾಗಿಯೇ ಲೋಕೋಪಯೋಗಿ ಇಲಾಖೆ (ಪಿ.ಡಬ್ಲೂ.ಡಿ )ಯ ಮೂಲಕ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಮಂಜೂರು ಮಾಡುತ್ತಲೇ ಬರುತ್ತಿದೆಯಾದರು ಬಿಡುಗಡೆಯಾದಂತಹ ಹಣ ಸದುಪಯೋಗವಾಗಿದೆಯೇ ಅಥವಾ ದುರುಪಯೋಗವಾಗುತ್ತಿದೆಯೇ ಎಂಬುದನ್ನು ಯಾವುದೇ ಉನ್ನತ ಮಟ್ಟದ ಅಧಿಕಾರಿಗಳಾಗಲೀ ಯಾವುದೇ ಚುನಾಯಿತ ಜನಪ್ರತಿನಿಧಿಗಳಾಗಲೀ ಗಮನಿಸದೇ ನಿರ್ಲಕ್ಷ್ಯತೋರುತ್ತಿರುವುದರಿಂದ ಕೆಲವೇ ಕೆಲವು ಪಟ್ಟಬದ್ದಾ ಹಿತಾಶಕ್ತಿಗಳು ಹಾಗೂ ಕಳಪೆ ಕಾಮಗಾರಿಮಾಡಿ ಹಣವನ್ನು ನುಂಗಿ ನೀರುಕುಡಿಯುತ್ತಿರುವರ ಪಾಲಾಗುತ್ತಿದೆ ಎಂಬುದು ಮಧುಗಿರಿ ತಾಲ್ಲೂಕಿನ ಪ್ರಜ್ಞಾವಂತ ನಾಗರೀಕರ ಎಚ್ಚರಿಕೆಯ ಮಾತುಗಲಾಗಿವೆ.

     ಉದಾ; ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಕಸಾಪುರ ಗ್ರಾಮದಿಂದ ಬ್ರಹ್ಮದೇವರಹಳ್ಳಿ ಗ್ರಾಮಕ್ಕೆ ಹಾದುಹೋಗುವ ರಸ್ತೆಗೆ ಇತ್ತೀಚಿಗೆ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ನಾಲ್ಕಾರು ಕಿಲೋಮೀಟರ್ ದೂರದ ಅಂತರದಲ್ಲಿನ ರಸ್ತೆಗೆ ಪ್ರತಿಷ್ಟೆಯ ಕಂಪನಿ ಎಂದೇ ಹೆಸರುವಾಸಿಯಾಗಿರುವ ‘ಎಸ್.ಡಿ.ಎಲ್.ಆರ್’ 

       ಕಂಪನಿಯವರು ಲಕ್ಷಾಂತರ ರೂಪಾಯಿಗಳ ವೆಚ್ಚದ ಡಾಂಬರು ಹಾಕಿರುವುದು ಸರಿಯಷ್ಟೇ, ಸದರಿ ಡಾಂಬರು ಕಳಪೆ ಗುಣಮಟ್ಟದ್ದಾಗಿದ್ದು ನಾಯಿಯ ನಾಲಗೆಯ ದಪ್ಪದಷ್ಟು ಅಳವಡಿಸಲಾಗಿದೆ. ಹಾಗೂ ಕಸಾಪುರ ಗ್ರಾಮದಿಂದ ಬ್ರಹ್ಮದೇವರಹಳ್ಳಿ ಗ್ರಾಮಕ್ಕೆ ಹಾದುಬರುವ ತಿರುವಿನಲ್ಲಿನ ಚರಂಡಿ ಚಪ್ಪೆಡಿಗಳು ಸದರಿ ಕಂಪನಿಯ ಟಿಪ್ಪರ್ ಲಾರಿಗಳು ಅತಿಬಾರದ ಸರಕನ್ನು ಹೊತ್ತೊಯ್ದು ಬರುವ ಸಮಯದಲ್ಲಿ ಚಪ್ಪಡಿಗಳು ಮುರಿದು ಬಿದ್ದು ಚರಂಡಿಯಲ್ಲಿನ ನೀರು ಹೋಗದಂತೆ ಅಡ್ಡಿಯಾಗಿರುತ್ತದೆ.

       ಡಾಂಬರು ಮಾಡಿರುವ ಅಂತರದಲ್ಲಿ ಏಳು ಮೋರಿಗಳು ಬಹಳ ಹಿಂದಿನಿಂದಲೂ ಇದ್ದು ಸದರಿ ಮೋರಿಗಳಿಗೆ ಮೆಲ್ಛಾವಣಿಯಾಗಿ ಚಪ್ಪಡಿಕಲ್ಲುಗಲನ್ನು ಅಳವಡಿಸಲಾಗಿತ್ತು, ಸದರಿ ಚಪ್ಪಡಿ ಕಲ್ಲುಗಳು ಶಿಥಿಲವಾಗಿರುತ್ತವೆಯೇ ಎಂಬುದನ್ನು ಸಹಾ ಗಮನಿಸದೇ ಗುತ್ತಗೆದಾರರು ಡಾಂಬರು ಹಾಕಿರುತ್ತಾರೆ. ಈಗಾಗಲೇ ಎರಡು ಮೋರಿಚಪ್ಪಡಿಗಳು ಮುರಿದುಬಿದ್ದಿದ್ದು ದಾರಿಹೋಕರಿಗೆ, ದನ,ಕರು,ಕುರಿ,ಮೇಕೆ ಇತ್ಯಾದಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿರುತ್ತದೆ. ಗುಂಡಿಬಿದ್ದಿರುವ ಕಡೆ ಗುತ್ತಗೆದಾರರು ಎಷ್ಟರಮಟ್ಟಿನ ಗುಣಮಟ್ಟದ ಡಾಂಬರುಹಾಕಲಾಗಿದೆ ಎಂಬುದನ್ನು ಕಾಣಬಹುದಾಗಿದೆ.

       ಕಸಾಪುರದ ಹೋಟೆಲ್ ಲಕ್ಷ್ಮಮ್ಮ, ನಾಗಪ್ಪ ನವರ ಹೊಲದಿಂದ ಪ್ರಾರಂಭಗೊಂಡು ಬ್ರಹ್ಮದೇವರಹಳ್ಳಿಯ ನರಸಿಂಹಯ್ಯನವರ ಮನೆಯವರೆಗೂ ಡಾಂಬರ್ ರಸ್ತೆ, ಅಲ್ಪಸ್ವಲ್ಪ ದೂರದಲ್ಲಿ ಅಂದರೆ ಬ್ರಹ್ಮದೇವರಹಳ್ಳಿ ಕಾವಲ್ ನಾಗದೇವತೆ ದೇವಾಲಯದ ಸಮೀಪ, ಬ್ರಹ್ಮದೆವರಹಳ್ಳಿಯ ಸಮೀಪ ಸಿ.ಸಿ ರಸ್ತೆಯನ್ನು ಮಾಡಲಾಗಿರುತ್ತದೆ. ಓಬಳಪ್ಪ, ಲಕ್ಷ್ಮಮ್ಮನವರ ಜಮೀನಿನ ಬಳಿಯ ಮೋರಿಯ ಚಪ್ಪಡಿ ಮುರಿದು ಬಿದ್ದಿರುತ್ತದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವಮೋರಿಗಳ ಚಪ್ಪಡಿಗಳು ಮುರಿದು ಬಿಳಲಿವೆಯೋ ಕಾದದುನೋಡಬೇಕಾಗಿದೆ. ಸದರಿ ರಸ್ತೆಗೆ ಯಾವ ಯೋಜನೆಯಡಿ ಯಾವ ಗುತ್ತಿಗೆರದಾರರು ಎಷ್ಟು ಹಣ ಖರ್ಚುಮಾಡಿ ಕಾಮಗಾರಿಮಾಡಿರುತ್ತಾರೆ ಎಂಬುದರ ಬಗ್ಗೆ ಯಾವುದೇ ನಾಮಫಲಕವನ್ನು ಅಳವಾಡಿಸಲಾಗಿರುವುದಿಲ್ಲ, ಆದ್ದರಿಂದ ಸಂಬಂಧಿಸಿದ ಇಲಾಖೆಯವರು ಗಮನಿಸುವರೇ ? ಕಾದುನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap