ಸಹಕಾರದ ಮೂಲತತ್ವವೇ ನಂಬಿಕೆ : ಶ್ರೀಗಳು

ಚಿಕ್ಕನಾಯಕನಹಳ್ಳಿ

       ಸಹಕಾರದ ಮೂಲತತ್ವವೇ ನಂಬಿಕೆ. ನಂಬಿಕೆಯಿಂದಲೇ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

      ಪಟ್ಟಣದ ಸರ್ಕಾರಿ ನೌಕರರ ಸಂಘದ ಮೊದಲನೇ ಮಹಡಿಯ ಕಚೇರಿಯಲ್ಲಿ ಪ್ರಾರಂಭಗೊಂಡ ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಹಕರು ನಂಬಿಕೆ ಇಟ್ಟು ಸಹಕಾರ ಸಂಘಗಳಿಗೆ ಹಣವನ್ನು ಇಡುತ್ತಾರೆ. ಅವರು ನೀಡಿರುವ ಹಣವನ್ನು ಸುರಕ್ಷಿತವಾಗಿ ಕಾಪಾಡಬೇಕು. ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಅದರ ಜವಾಬ್ದಾರಿ ಹೊರಬೇಕು, ಸಂಘವನ್ನು ಉತ್ತಮವಾಗಿ ಬೆಳೆಸಿಕೊಂಡು ಹೋಗಬೇಕು ಎಂದರು.

      ಸಂಘದ ಪ್ರವರ್ತಕರು ಇತರೆ ಅಭಿವೃದ್ಧಿ ಹೊಂದಿರುವ ಬ್ಯಾಂಕ್‍ಗಳ ವಹಿವಾಟನ್ನು ಪರಿಗಣಿಸಿ, ಯಾವ ರೀತಿ ವರ್ಷಾನುಗಟ್ಟಲೆ ಬ್ಯಾಂಕ್ ನಡೆಸಿ, ವ್ಯವಹಾರ ಮಾಡಿ ಅಭಿವೃದ್ಧಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ ಎಂದ ಅವರು, ಆರಂಭವಾಗುತ್ತಿರುವ ಬ್ಯಾಂಕ್ ಸಮಾಜದ್ದಾಗಿದೆ ಇಲ್ಲಿ ಸಂಬಂಧಿಕರನ್ನು ಸೇರಿಸಬೇಡಿ, ಕೆಲವು ಸಂಘಗಳಲ್ಲಿ ಒಬ್ಬರೇ ಹತ್ತಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರೆಯುತ್ತಿರುತ್ತಾರೆ ಇದು ತಪ್ಪಬೇಕು, ಮೂರು ಅಥವಾ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗಿ ಎಲ್ಲರಿಗೂ ಸಮಪಾಲು, ಸಮಬಾಳು ದೊರಕುವಂತಾಗಬೇಕು ಎಂದ ಅವರು, ಬ್ಯಾಂಕ್ ಅಭಿವೃದ್ದಿಯತ್ತ ಮುಂದುವರೆಯಲಿ, ಜೊತೆಗೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಸ್ವಂತ ಕಟ್ಟಡದಲ್ಲಿ ಆರಂಭವಾಗಬೇಕು.

        ಕೋಟಿಗಟ್ಟಲೆ ವಹಿವಾಟು ನಡೆಯುವಂತಾಗಬೇಕು ಎಂದು ಆಶಿಸಿದ ಅವರು, ಹಾಲುಮತ ಸಮಾಜದವರೇ ಸಹಕಾರ ಸಂಘವನ್ನು ಉತ್ತಮ ಮಟ್ಟದಲ್ಲಿ ಬೆಳೆಸಿದವರು, 100ಕ್ಕೂ ಅಧಿಕ ಸಂಘಗಳಿದ್ದು 30ಕ್ಕೂ ಅಧಿಕ ಸಂಘಗಳನ್ನು ಉದ್ಘಾಟನೆ ಮಾಡಿದ್ದೇನೆ ಅವುಗಳೆಲ್ಲವೂ ಉತ್ತಮ ಮಟ್ಟದಲ್ಲಿ ಅಭಿವೃದ್ಧಿಯಾಗಿ ಬೆಳವಣಿಗೆ ಕಾಣುತ್ತಿವೆ ಎಂದರು.

         ಕಾರ್ಯಕ್ರಮದಲ್ಲಿ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ಸಿ.ಎಸ್.ರಮೇಶ್, ಕನಕ ಸೇವಾ ಟ್ರಸ್ಟ್‍ನ ಅಧ್ಯಕ್ಷ ಸಿ.ಟಿ.ಮುದ್ದುಕುಮಾರ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಕಾರ್ಯಾಧ್ಯಕ್ಷ ಸಿ.ಡಿ.ಸುರೇಶ್, ಕ.ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ಪುರಸಭಾ ಸದಸ್ಯರಾದ ಸಿ.ಬಿ.ತಿಪ್ಪೇಸ್ವಾಮಿ, ಪೂರ್ಣಿಮ, ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಮಿಲಿಟರಿಶಿವಣ್ಣ, ಬಸವರಾಜು ಪಲ್ಲಕ್ಕಿ ಮತ್ತಿತರರು ಉಪಸ್ಥಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap