ಬಿಜೆಪಿ ಕಾರ್ಯಕರ್ತರಿಂದ ಬೈಕ್ ಜಾಥಾ

0
4

ಎಂ ಎನ್.ಕೋಟೆ :

      ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿ ಮುಖಾಂತರ ಬಿಜೆಪಿಗೆ ಮತ ಯಾಚಿಸಿದರು.ಅಳಿಲಘಟ್ಟ,ಬಂಡನಹಳ್ಳಿ,ಭೋಗಸಂದ್ರ ,ಗ್ಯಾರೇಹಳ್ಳಿ,ಬೆಟ್ಟದಹಳ್ಳಿ ಗ್ರಾಮಗಳಲ್ಲಿ ಬೈಕ್ ರಾಲಿ ನಡೆಸಿ ಮಾತನಾಡಿದ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಅ.ನ.ಲಿಂಗಪ್ಪ ದೇಶದಲ್ಲಿ ನರೇಂದ್ರ ಮೋಧಿ ಅಲೆ ಇದ್ದು ನಮ್ಮ ತಾಲ್ಲೂಕಿನದ್ಯಂತ ಉತ್ತಮ.ಪ್ರತಿಕ್ರಿಯಿ.ಸಿಗುತ್ತಿದ್ದು ಯುವಕರಿಂದ ಹಿಡಿದು ಹಿರಿಯರ ವರೆಗೂ ಬಿಜೆಪಿ ನರೇಂದ್ರ ಮೋಧಿಯವರ ಅಲೆ ಇದೆ.

       ಕಳೆದ 5ವರ್ಷದಲ್ಲಿ ಯಾವುದೇ ರೀತಿ ಭ್ರಷ್ಠಚಾರವಿಲ್ಲದೆ ಅಧಿಕಾರವನ್ನು ಯಶಸ್ವಿಯಾಗಿ ನಮ್ಮ ಕೇಂದ್ರ ಸರ್ಕಾರ ಮಾಡಿದೆ.ಮೋಧಿಯವರು ಈ ದೇಶದ ರಕ್ಷಣೆ ವಿಚಾರದಲ್ಲಿ ಸಾಕಷ್ವು.ಕೆಲಸ ಮಾಡಿದ್ದಾರೆ.ಮೋಧಿಯವರು ನೀಡಿರುವ ಪ್ರತಿಯೊಂದು ಯೋಜನೆಗಳು ಎಲ್ಲ ಸಮುದಾಯದವರಿಗೂ ಸಿಕ್ಕಿದೆ.ಆದ್ದರಿಂದ ಎಲ್ಲರು ಸಹ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

        ಕಾರ್ಯಕ್ರಮದಲ್ಲಿ ಮುಖಂಡರಾದ ಪುಟ್ಟರಾಜು,ಸ್ವಾಮಿ,ಎಂ ಎನ್ ಭೀಮಶೆಟ್ಟಿ,ಗೋವಿಂದರಾಜು,ಕೆಂಪರಾಜು,ಸಿದ್ದರಾಮಣ್ಣ , ನಾಗಣ್ಣ,ಹಾಗೂ ಕಾರ್ಯಕರ್ತರು ಭಾಗವಹಿಸದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here