ಬಿರು ಬಿಸಿಲಿನ ಮಧ್ಯೆಯೂ ಮತದಾನ

ಹಾವೇರಿ :

   2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಹನುಮನಹಳ್ಳಿಯಲ್ಲಿ ಬಿರು ಬಿಸಿಲಿನ ಮಧ್ಯೆಯೂ ಮತದಾನ ಬಹುತೇಕ ಯಶಸ್ವಿಯಾಗಿ ನಡೆಯಿತು.

    ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 179ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಪ್ರಕ್ರಿಯೆ ನಿಧಾನವಾಗಿ ಶುರುವಾಯಿತು. ನಂತರ ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಿದ ಪರಿಣಾಮ ಮಂದಗತಿಯಲ್ಲಿ ಪ್ರಗತಿಯಲ್ಲಿತ್ತು, ಸಾಯಂಕಾಲದ ವೇಳೆಗೆ ಬಹುತೇಕ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ಯಶಸ್ವಿಯಾದರು.

ಒಟ್ಟು ಮತದಾನ:

    ಹನುಮನಹಳ್ಳಿ ಗ್ರಾಮದಲ್ಲಿ ಒಟ್ಟು 860 ಮತದಾರರಿದ್ದು ಇವರ ಪೈಕಿ 713 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಾಗಾಗಿ ಶೇಕಡಾ 82.90 ರಷ್ಟು ಮತದಾನ ದಾಖಲಾಗಿದೆ.ಬಿಸಿಲಲ್ಲಿ ಮತದಾನ: ಬಿರು ಬಿಸಿಲಿನ ಮಧ್ಯೆ ಹಲವಾರು ಜನ ಮತದಾರರು ಹರುಷದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಕೆಲ ಕಾರ್ಯಕರ್ತರು ಕೈ ಹಿಡಿದು ಕರೆ ತಂದು ಹಾಗೂ ದ್ವಿಚಕ್ರ ವಾಹನದಲ್ಲಿ ವೃದ್ಧರು, ಅಂಗವಿಕಲರನ್ನು ಕರೆ ತಂದು ಮತದಾನಮಾಡಿಸಲಾಯಿತು.

       ಒಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆ ಅಂತೂ ಪ್ರಜಾಪ್ರಭುತ್ವದ ಸಾರ್ವತ್ರಿಕ ಹಬ್ಬದಂತಿದ್ದು ಎಲ್ಲ ಮತದಾರರನ್ನು ಚುನಾವಣೆಗೆ ತಮ್ಮ ಹಕ್ಕು ಚಲಾಯಿಸುವಂತೆ ಪ್ರೇರೇಪಿಸಿದೆ ಎಂದು ಹೇಳಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap