ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ

0
13

ಎಂ ಎನ್ ಕೋಟೆ :

           ತೀವ್ರ ಕುತೂಹಲ ಮೂಡಿಸಿದ್ದ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಎಂ ವಿ ಶಿವಕುಮಾರ್ ಆಯ್ಕೆಯಾದರು. ಜೆಡಿಎಸ್ ನಿಂದ ಕೆಂಪಮ್ಮ ಪರಮೇಶ್ ಹಾಗೂ ಬಿಜೆಪಿಯಿಂದ ಎಂ ವಿ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ಚುನಾವಣೆ ಅಧಿಕಾರಿಗಳು ಚುನಾವಣೆಯನ್ನು ನಡೆಸಿದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ವಿ ಶಿವಕುಮಾರ್ 11 ಹಾಗೂ ಜೆಡಿಎಸ್ ಅಭ್ಯರ್ಥಿ ಕೆಂಪಮ್ಮ 08 ಮತಗಳನ್ನು ಪಡೆದು ಪರಾಜಿತಗೊಂಡರು. ಉಪಾಧ್ಯಕ್ಷರಾಗಿ ಎಂ ಹೊಸಹಳ್ಳಿ ಗ್ರಾಮದ ಹೆಚ್ ಪಿ ಸುಧಾಮಣಿ ಅವಿರೋಧವಾಗಿ ಆಯ್ಕೆಯಾದರು.

           ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಚಿಂತನೆಯನ್ನು ನಡೆಸಿದ್ದು ನಮ್ಮ ಸದಸ್ಯರ ಸಹಕಾರ ಪಡೆದು ನಮ್ಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ. ವಿಶೇಷವಾಗಿ ನಮ್ಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚು ಆಧ್ಯತೆಯನ್ನು ನೀಡುತ್ತೇನೆ. ನಮ್ಮ ಹೊಸ ಗ್ರಾಮ ಪಂಚಾಯಿತಿಯ ಕಟ್ಟಡ ಇನ್ನ 6ತಿಂಗಳಿನಲ್ಲಿ ಮುಗಿಯುತ್ತದೆ ಅದಷ್ವು ಬೇಗನೆ ಪೂರ್ಣಗೊಳಿಸುತ್ತೇನೆ ಎಂದರು. ವಸತಿ ಯೋಜನೆಯಲ್ಲಿ ಆರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ನನ್ನನ್ನು ಆಯ್ಕೆ ಮಾಡಿದ ನಮ್ಮ ಸದಸ್ಯರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ.ಎಮಧೃಊ.

          ಕೊನೆಯಗಳಿಗೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸುತ್ತಲೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು.
ಜೆಡಿಎಸ್ ಗೆಲುವು ಸಾಧಿಸುತ್ತದೆ ಎಂಬ ಮಾತುಗಳಿಂದ ಜೆಡಿಎಸ್ ಕಾರ್ಯಕರ್ತರು ಪಂಚಾಯಿತಿ ಹೊರಗಡೆ ಖುಷಿಯಿಂದ ಕಾಯುತ್ತಿದ್ದರು. ಆದರೆ ಸೋಲು ಅನುಭವಿಸುತ್ತಲೆ ಜೆಡಿಎಸ್ ಕಾರ್ಯಕರ್ತರಿಗೆ ತೀವ್ರ ಮುಖಭಂಗವಾಯಿತ್ತು.

           ಜೆಡಿಎಸ್ ಗೆ 12 ಮತಗಳಿದ್ದು ಬಿಜೆಪಿಗೆ 7 ಮತಗಳು ಇದ್ದವು ಒಟ್ಟಾರೆ ಜೆಡಿಎಸ್ ಗೆಲ್ಲುವು ಸಾಧಿಸುತ್ತದೆ ಎಂಬ ಸುದ್ದಿ ತಿಳಿದ ಕಾರ್ಯಕರ್ತರು ವಿಜಿಯೋತ್ಸವ ಆಚಾರಿಸಲು ಸಿದ್ದರಾಗಿದ್ದರು. ಯಾವಾಗ ಫಲಿತಾಂಶ ಹೊರ ಬೀಳುತ್ತಳೆ ಜೆಡಿಎಸ್ ಕಾರ್ಯಕರ್ತರಿಗೆ ತೀವ್ರ ಮುಖಭಂಗವಾಯಿತ್ತು. ಕೊನೆಯ ಗಳಿಗೆ ಯಲ್ಲಿ ಬಿಜೆಪಿಗೆ ಗೆಲುವು ಸಿಕಿರುವುದರಿಂದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು. ಜೆಡಿಎಸ್ ಗೆ ತೀವ್ರ ಮುಖಭಂಗವಾಯಿತ್ತು ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಲಗ್ಗೆ ಇಟ್ಟಿದೆ. ಕಳೆದ ಭಾರಿ ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದು ಈ ಭಾರಿ ಸೋಲು ಅನುಭವಿಸಿದೆ.

         ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್ ಜಿ ಬಿ ಮೋಹನ್ ಕುಮಾರ್ ಚುನಾವಣೆಯನು ನಡೆಸಿದರು. ಶಿರಸ್ತೆಧಾರ್ ಗೋವಿಂದರೆಡ್ಡಿ , ನಾರಾಯಣ್ ಇದ್ದರು.

         ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜಗನ್ನಾಥ್ , ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಅ.ನ. ಲಿಂಗಪ್ಪ , ರಾಜಶೇಖರಯ್ಯ , ಸದಸ್ಯರಾದ ದೊಡ್ಡಕೆಂಪಯ್ಯ , ಷಣ್ಮುಖರಾಧ್ಯ , ನೇತ್ರಾವತಿ , ಲಕ್ಷ್ಮೀದೇವಮ್ಮ , ದೀಪಿಕಾ , ಗಂಗಾಧರಯ್ಯ , ಸತೀಶ್ , ಹಾಗೂ ಯುವ ಮೋರ್ಚಾ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ಸೋಮಾಲಾಪು ಸೋಮಣ್ಣ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗಯ್ಯ , ಮಾಜಿ ಉಪಾಧ್ಯಕ್ಷ ಎಂ ಎನ್ ಭೀಮಶೆಟ್ಟಿ , ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here