ಶಿರಾ ಭಾಗಕ್ಕೆ ಬಿ.ಜೆ.ಪಿ. ಬರ ಅಧ್ಯಯನ ತಂಡ ಭೇಟಿ

ಶಿರಾ:

        ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿಯನ್ನು ನೀಡದೆ ಅವೈಜ್ಞಾನಿಕವಾದ ವರದಿಯನ್ನು ನೀಡಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈಸರ್ಗಿಕ ರಾಜ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದರು.
ಶಿರಾ ತಾಲ್ಲೂಕಿನನಲ್ಲಿ ಅಗತ್ಯಕ್ಕೆ ತಕ್ಕಂತೆ ಮಳೆ ಬಾರದ ಪರಿಣಾಮ ರೈತರು ಉತ್ತಮ ಬೆಳೆ ಕಾಣದೆ ಬರದ ಸ್ಥಿತಿಯನ್ನು

         ಅನುಭವಿಸುತ್ತಿರುವುದನ್ನು ಮನಗಂಡು ಮಂಗಳವಾರದಂದು ಬಿ.ಜೆ.ಪಿ. ಪಕ್ಷದ ಅನೇಕ ಪ್ರಮುಖರು ಬರ ಅಧ್ಯಯನಕ್ಕೆಂದು ತಾಲ್ಲೂಕಿಯ ಯರಗುಂಟೆ ಗ್ರಾಮದ ಮಾಗೋಡು ಗ್ರಾಮ ಪಂಚಾಯ್ತಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

         ರಾಜ್ಯ ಸರ್ಕಾರವು ಕೇಂದ್ರಕ್ಕೆ ಬರ ಅಧ್ಯಯನ ಕುರಿಂತೆ ಅವೈಜ್ಞಾನಿಕ ವರದಿ ನೀಡಿದ್ದು 2 ಸಾವಿರ ಕೋಟಿ ರೂ ಬಿಡುಗಡೆ ಮಾಡಲು ವರದಿ ಸಲ್ಲಿಸಿದ್ದಾರೆ. ಹಣ ಬಿಡುಗಡೆ ಮಾಡುವಂತೆ ಬೇಡಬೇಕಿತ್ತು ಆದರೆ ಆ ಕೆಲಸವನ್ನು ರಾಜ್ಯ ಮಾಡಿಲ್ಲ. ರೈತರಿಗೆ ಬೆಳೆ ನಷ್ಟ ಪರಿಹಾರದ ಫಸಲ್‍ಭೀಮಾ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ವಾಣಿಜ್ಯ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾ ಬಗ್ಗೆ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಿಲ್ಲ ಇದಕ್ಕೆ ಕೇಂದ್ರ ಸಮ್ಮತಿಸಬೇಕಿದೆ ಎಂದರು.

        ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಶಾಸಕಿ ಪೂರ್ಣಿಮಾ, ಮಾಜಿ ಶಾಸಕ ಬಿ.ಸುರೇಶ್‍ಗೌಡ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಮಾಲಿ ಮರಿಯಪ್ಪ, ಬಿ.ಗೋವಿಂದಪ್ಪ, ರಂಗನಾಥಗೌಡ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap