ರೈತರ ಹಿತ ಕಾಪಾಡದ ಬಿಜೆಪಿಯ ಸಾಧನೆ : ಸಂಸದ ಉಗ್ರಪ್ಪ ಆರೋಪ

ಹಗರಿಬೊಮ್ಮನಹಳ್ಳಿ:
       ದೇಶದ ರೈತಯರ ಹಿತ ಕಾಪಾಡದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಆಡಳಿತದ 39ಸಾವಿರ ರೂ.ಗಳ ರಫಲ್ ಹಗರಣ ಸೇರಿದಂತೆ ಅನೇಕ ಜನವಿರೋಧಿ ನೀತಿಗಳನ್ನು ಜಾರಿಗೆ ತಂದ ಬಿಜೆಪಿಯು ಶೃಈರಾಮ ಮಂದಿರ ಹಾಗೂ ಜಾತಿಗಳಮೀಸಲಾತಿಗಳ ಸದ್ದು ಮಾಡಿ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ದೂರಿದರು.
     
        ತಾಲೂಕಿನ ಹಂಪಸಾಗರದ ಉಘಮಠದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ  ಹಮ್ಮಿಕೊಂಡಿದ್ದ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮುಜರಾಯಿ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಪಿ.ಟಿ.ಪರಮೇಶ್ವರ ನಾಯ್ಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
 
        ಸಂಸತ್ತಿನಲ್ಲಿ 25ದಿನಗಳ ಕಾಲ ನಡೆದ ಅಧಿವೇಶನದಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದೇ ಒಂದು ದಿನ ಬಂದು ಕೂಡಲಿಲ್ಲ, ದೇಶದ ರೈತರ ಸಮಸ್ಯೆಗಳ ಬಗ್ಗೆ ಚಿಂತನೆಮಾಡಲಿಲ್ಲ. ನನ್ನ ಕರ್ತವ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿದಿದ್ದೇನೆ. ಅದರಂತೆ ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಸಲ್ಲಿಸಬೇಕೆಂದು ವಿನಂತಿಸಿಕೊಂಡಿದ್ದೇನೆ ಆದರೂ ಇದಾವುದನ್ನು ಕೆಳಿಸಿಕೊಳ್ಳುದ ಅವರು, ಕೈಗಾರಿಕೆಗಳ ಸಾಲಮನ್ನಾಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾತಿನಿಂದ ಕೇಂದ್ರ ಆಡಳಿತವನ್ನು ಮಾತುಗಳಿಂದ ತಿವಿದರು.
 
        ದೇಶದ ಜನರಿಗೆ ಬಿಜೆಪಿಯವರ ಭರವಸೆಗಳು ನೀರಸೆಯನ್ನು ತಂದೊಡ್ಡಿ ಪೊಳ್ಳು ಭರವಸೆಗಳೆಂದು ತೀರ್ಮಾನ ತೆಗದುಕೊಂಡಿದ್ದಾರೆ. ಆಗಾಗಿ ಮುಂದಿನ 2019ರ ಸಂಸತ್ ಚುಣಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅಧಿಕಾರಕ್ಕೆ ತರುವ ಮೂಲಕ ಬಿಜೆಪಿಗೆ ತಕ್ಕ ಪಾಠಕಲಿಸಲಿದ್ದಾರೆ ಎಂದರು.
   
         ನಂತರ ಮುಜರಾಯಿ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಹಡಗಲಿ ಕ್ಷೇತ್ರದಲ್ಲಿ ನನ್ನನ್ನು ಎರಡನೇಬಾರಿ ಗೆಲ್ಲಿಸುವ ಮೂಲಕ ಐತಿಹಾಸಿಕ ಸೃಷ್ಠಿಮಾಡಿದ ನಿಮಗೆ ಅಭಿನಂದನೆ ಹೇಳುತ್ತೇನೆ. ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಏನೆಲ್ಲ ತಂತ್ರಗಳು ನಡೆದವು. ಯಾವುದೇ ತಂತ್ರಗಳು ನನ್ನ ವಿರೋಧಿಗಳಿಗೆ ಫಲಿಸಲಿಲ್ಲ ಇದು ನಿಮ್ಮ ತೀರ್ಮಾನ ಈ ಗೆಲುವು ಕೂಡ ನಿಮ್ಮದೆ ಎಂದರು.
         ರಾಜ್ಯದಲ್ಲಿ ಸಮಿಶ್ರ ಸರ್ಕಾರ ರೈತರ 48ಸಾವಿರ ಕೋಟಿ ರೂ.ಗಳ ಸಾಲಮನ್ನಾಮಾಡುವ ಮೂಲಕ ರೈತರ ಋಣ ತೀರಿಸುತ್ತಿದೆ. ಆದರೆ, ದೇಶದ ಜನತೆಯ ಹಿತ ಕಾಪಾಡಬೇಕಿದ್ದ ನರೇಂದ್ರ ಮೋದಿ 5ವರ್ಷಗಳ ಕಾಲ ಬರೀ ಮೋಜುಮಾಡುವಲ್ಲಿಯೇ ಕಾಲ ಹರಣಮಾಡಿದರು. ಅವರು ರೈತರ, ಮಹಿಳೆಯರ ಮತ್ತು ಯುವಜನತೆಯನ್ನು ಕಡೆಗಣಿಸಿದರು.
     
        ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಹೇಳಿದರು ಮಾತಿನಂತೆ ನಡೆದುಕೊಳ್ಳಲಿಲ್ಲ. ಮತ್ತೇ ಅಂತಹ ಬಿಜೆಪಿ ಆಡಳಿತ ದೇಶಕ್ಕೆ ಬೇಕಾ ಎಂದ ಅವರು, ಇತ್ತೀಚಿಗೆ ನಡೆದ ಸಂಸತ್ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಲಾಗಿದೆ ಅದರಂತೆ ಮುಂದೆ ಬರಲಿರುವ ಚುನಾವಣೆಯಲ್ಲಿ ಇದೇ ಉಗ್ರಪ್ಪನವರನ್ನು 50ಸಾವಿರ ಮತಗಳ ಅಂತರದಿಂದ ಕ್ಷೇತ್ರದಲ್ಲಿ ಮುನ್ನೆಡೆಯಾಗಲಿ ಎಂದು ಆಶಿಸಿದರು. ಉಗ್ರಪ್ಪನವರ ಅನುದಾನದಲ್ಲಿ 40ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ದೇಗುಲ ಮತ್ತು ರಸ್ತೆಗಳಿಗೆ ಅನುದಾನ ನೀಡಿ ಸ್ಪಂದಿಸಿದ್ದಾರೆ ಎಂದರು. ಇಂತಹ ವ್ಯಕ್ತಿ ಬಳ್ಳಾರಿ ಜಿಲ್ಲೆಗೆ ಬೇಕೇಬೇಕು ಎಂದರು.
 
          ಈ ಸಂದರ್ಭದಲ್ಲಿ ಹಡಗಲಿ ಮಾಜಿ ಶಾಸಕ ವಿ.ಬಿ.ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಹಡಗಲಿ ಬ್ಲಾಕ್ ಅಧ್ಯಕ್ಷ ಪರಮೇಶ್ವರಪ್ಪ, ಒಬಿಸಿ ಜಿಲ್ಲಾಧ್ಯಕ್ಷ ಸೊನ್ನದ ಮಹೇಶ, ಹ.ಬೊ.ಹಳ್ಳಿ ಎ.ಪಿ.ಎಂ.ಸಿ ಅಧ್ಯಕ್ಷ ದೊಡ್ಡಬಸಪ್ಪ, ತಾ.ಪಂ.ಮಾಜಿ ಸದಸ್ಯೆ ಎ.ಪಾಲಕ್ಷಮ್ಮ, ಮುಖಂಡರಾದ ಹನುಮಜ್ಜ, ಕೆ.ಸುಭಾಸ್, ಜೆ.ಆನಂದ, ಬಿಡಿ ಕೊಟ್ರಪ್ಪ, ವಕೀಲ ಎ.ಷಣ್ಮುಖನಗೌಡ, ಅಟವಾಳಿಗಿ ಕೊಟ್ರೇಶಪ್ಪ, ಬೀರಪ್ಪ, ಮೂಗಪ್ಪ, ಬಿ.ಎಂ.ಗುರುವಯ್ಯ, ಎಂ.ಹನುಮಂತಪ್ಪ, ಎಲ್.ಬುಡನ್ ಸಾಬ್, ಬಾಬಣ್ಣ, ಸೋಗಿ ನಾಗರಾಜ್, ಬಿ.ನಿಂಗಪ್ಪ, ಸಿದ್ದಲಿಂಗಪ್ಪ, ನಿಂಗಣ್ಣ, ಕೊಟ್ರೇಶ್, ರೇಖಾನಾಯ್ಕ, ನಾಗಪ್ಪ, ಈ.ಮಂಜುನಾಥ ಹಾಗೂ ಮಹಾದೇವ ಗುಳೇದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಕಾಂಗ್ರೆಸ್ ಇಟ್ಟಿಗಿ ಬ್ಲಾಕ್ ಅಧ್ಯಕ್ಷ ಹಾಗೂ ವಕೀಲ ಐಗೋಳ ಚಿದಾನಂದ ಸ್ವಾಗತಿಸಿ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap