ಸಂವಿಧಾನದ ಆಶಯವೇ ಬಿಜೆಪಿಗೆ ಅರ್ಥವಾಗಿಲ್ಲ

0
4

ಚಿತ್ರದುರ್ಗ:

       ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕೋಮುವಾದಿ ಬಿಜೆಪಿ.ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಎಂದು ನಟ, ಮಾಜಿ ವಿಧಾನಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

      ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಸಿ ಹಸಿ ಸುಳ್ಳಿನ ಸರದಾರ ಮಾತಿನ ಮೋಡಿಗಾರ ಪ್ರಧಾನಿ ನರೇಂದ್ರಮೋದಿಯನ್ನು ಈ ಚುನಾವಣೆಲ್ಲಿ ಕಿತ್ತುಹಾಕಬೇಕಿದೆ. ದೇಶವನ್ನು ಉಳಿಸಿರುವುದೇ ಕಾಂಗ್ರೆಸ್. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಪದದ ಅರ್ಥವೇ ಬಿಜೆಪಿ.ಗೆ ಗೊತ್ತಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ ಹಿಂದುಳಿದವರಿಗೆ ಸ್ಪರ್ಧಿಸಲು ಒಂದು ಕ್ಷೇತ್ರದಲ್ಲಿಯೂ ಮೋದಿ ಅವಕಾಶ ಕೊಟ್ಟಿಲ್ಲ. ಶ್ರೀಮಂತರ ಪರವಾಗಿರುವ ಮೋದಿಯಿಂದ ದೇಶದ ಬಡವರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಎಂದು ಟೀಕಿಸಿದರು.

        ಚುನಾವಣೆಯಲ್ಲಿ ಆಯಾ ಪಕ್ಷದವರು ತಮ್ಮ ಸಾಧನೆಗಳನ್ನು ಹೇಳಿಕೊಂಡು ಮತ ಕೇಳಲಿ. ಅದನ್ನು ಬಿಟ್ಟು ಪರಸ್ಪರರ ವ್ಯಕ್ತಿಗತ ನಿಂದನೆ, ಅಶ್ಲೀಲ ಪದಗಳ ಬಳಕೆ, ಅಸಂಸ್ಕøತಿ ನಡುವಳಿಕೆಗಳನ್ನು ಖಂಡಿಸುತ್ತೇವೆ. ಅರ್ಹತೆ ಮೇಲೆ ಯಾರು ಬೇಕಾದರೂ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲಿ ನಮ್ಮದೇನು ಅಭ್ಯಂತರವಿಲ್ಲ.

       ವಂಶಕ್ಕಾಗಿ ರಾಜಕಾರಣ ಮಾಡುವುದು ಸರಿಯಲ್ಲ. ರೈತರ ಎಪ್ಪತ್ತೆರಡು ಸಾವಿರ ಕೋಟಿ ರೂ.ಸಾಲ ಒಂದೇ ಸಲ ಮನ್ನ ಮಾಡಿದ್ದು, ಕಾಂಗ್ರೆಸ್ ಇದೆಲ್ಲಾ ಸಾಧನೆಯಲ್ಲವೇನು ಎಂದು ಬಿಜೆಪಿ.ಯನ್ನು ಪ್ರಶ್ನಿಸಿದರು.

        ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ನಕಲು ಮಾಡಿ ಸುಣ್ಣ ಬಣ್ಣ ಬಳಿದು ಹೊರಗೆ ಬಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಮನುವಾದಿ ಸಂಸ್ಕøತಿಯ ನರೇಂದ್ರಮೋದಿಯನ್ನು ಸೋಲಿಸಬೇಕಾದರೆ ಇದೇ ತಿಂಗಳ ಹದಿನೆಂಟರಂದು ನಡೆಯುವ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ವಿನಂತಿಸಿದರು.

         ಐದು ವರ್ಷಗಳ ಕಾಲ ಸುಮ್ಮನಿದ್ದ ಬಿಜೆಪಿ.ಯವರು ಚುನಾವಣೆ ಸಮಯದಲ್ಲಿ ಮಾತ್ರ ರಾಮ ರಾಮ ಎಂದು ಜಪ ಮಾಡುತ್ತಿದ್ದಾರೆ. ಅವರದೇ ಅಧಿಕಾರವಿದ್ದಾಗ ಏಕೆ ರಾಮಮಂದಿರ ಕಟ್ಟಲಿಲ್ಲ. ರಾಮಮಂದಿರ ಕಟ್ಟಲು ಬೇಡ ಎಂದವರು ಯಾರು? ಈಗ ಏಕೆ ರಾಜ್ಯದಲ್ಲಿ ಐಟಿ ಧಾಳಿ ನಡೆಯುತ್ತಿದೆ. ಜಿ.ಎಸ್.ಟಿ.ವಿರೋಧಿಸಿದವರು ಏಕೆ ಜಾರಿಗೆ ತಂದಿದ್ದಾರೆ. ಐದು ವರ್ಷದಲ್ಲಿ ಮೋದಿ ಕೇವಲ 19 ದಿನ ಮಾತ್ರ ಸಂಸತ್‍ನಲ್ಲಿ ಕೂತಿದ್ದಾರೆ. 106 ಬಾರಿ ವಿದೇಶಕ್ಕೆ ಹೋಗಿದ್ದಾರೆ. ಎರಡು ಸಾವಿರ ಕೋಟಿ ರೂ.ವಿಮಾನಯಾನಕ್ಕೆ ಖರ್ಚಾಗಿದೆ. ಇದೆಲ್ಲಾ ಯಾರ ದುಡ್ಡು ಎಂದು ದೇಶದ ಜನ ಕೇಳಬೇಕು ಎಂದು ಜಾಗೃತಿಗೊಳಿಸಿದರು.

         ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ ಇಂದಿರಾಗಾಂಧಿ ಕಾಲದ ತುರ್ತು ಪರಿಸ್ಥಿತಿಗಿಂತಲೂ ದೇಶದ ಈಗಿನ ಸ್ಥಿತಿ ಘೋರವಾಗಿದೆ ಎನ್ನುವುದಕ್ಕೆ ಹಿಟ್ಲರ್ ಧೋರಣೆಯ ಪ್ರಧಾನಿ ಮೋದಿಯೇ ಕಾರಣ. ಬಡವರನ್ನು ಕಡೆಗಣಿಸಿರುವ ಮೋದಿ ಬಂಡವಾಳಶಾಹಿ, ಕಾರ್ಪೊರೇಟರ್‍ಗಳ ಪರವಾಗಿದ್ದಾರೆ. ಸುಳ್ಳುಗಳ ಸರದಾರನ ಮುಖವಾಡ ಮಾತ್ರ ಬಡಪರ ಕಡೆಗಿದೆ. ಎಸ್.ಬಿ.ಐ.-ಎಸ್.ಬಿ.ಎಂ.ಬ್ಯಾಂಕ್‍ಗಳನ್ನು ವಿಲೀನಗೊಳಿಸಿರುವುದರಿಂದ ಬಹುತ್ವ ಭಾರತದ ಅನನ್ಯತೆ, ವಿಶೇಷತೆ, ಬಹುಭಾಷೆಯ ಸಂಸ್ಕತಿ, ಏಕಧರ್ಮ ನಾಶವಾಗುತ್ತಿದೆ. ವ್ಯವಸ್ಥೆಗಳನ್ನು ಅದ್ವಾನದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿರವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸುವಂತೆ ಮತದಾರರನ್ನು ಕೋರಿದರು.

      ದೇಶದದಲ್ಲಿ ತುರ್ತು ಪರಿಸ್ಥಿತಿಯಿದ್ದಾಗ ದೇಶದ ಬಹುತ್ವ ನಾಶವಾಗಿರಲಿಲ್ಲ. ನಾಲ್ಕುವರೆ ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ಮೋದಿಯಿಂದ ರಾಷ್ಟ್ರೀಕರಣ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ. ಇಪ್ಪತ್ತು ಅಂಶಗಳ ಕಾರ್ಯಕ್ರಮ, ಭೂಸುಧಾರಣೆ, ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ಇವುಗಳೆಲ್ಲಾ ಕಾಂಗ್ರೆಸ್ ಕೊಡುಗೆ ಎನ್ನುವುದನ್ನು ಜನ ಮರೆಯಬಾರದು. ಅಘೋಷಿತ ತುರ್ತು ಪರಿಸ್ಥಿತಿ ಈಗ ದೇಶದಲ್ಲಿರುವುದರಿಂದ ಪ್ರಜಾಪ್ರಭುತ್ವದ ಮೂಲಭೂತ ಆಶಯ ನಾಶವಾಗುತ್ತಿದೆ. ವ್ಯಕ್ತಿಯ ವ್ಯಕ್ತಿತ್ವ ಚಾರಿತ್ರ್ಯ ನೋಡಿ ಓಟು ಕೊಡಿ ಎಂದು ಮನವಿ ಮಾಡಿದರು.

        2014 ರವರೆಗೆ ದೇಶದಲ್ಲಿ ಉದ್ಯೋಗ ನೀತಿ ಪಾಲಿಸಿಯಾಗಿತ್ತು. ಮೋದಿ ಪ್ರಧಾನಿಯಾದ ಮೇಲೆ ಉದ್ಯೋಗ ನೀತಿ ರದ್ದಾಯಿತು. ನಮ್ಮನ್ನು ಪ್ರತಿನಿಧಿಸುವ ರಾಜಕಾರಣಿಗಳು ಕೇಂದ್ರದಲ್ಲಿ ಪ್ರಶ್ನಿಸುತ್ತಿಲ್ಲ. ಮನುವಾದಿ ಬಡವರ ವಿರೋಧಿ ಮೋದಿಯನ್ನು ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಈ ಚುನಾವಣೆಯಲ್ಲಿ ಸರಳ ಸಜ್ಜನ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದರು.

         ರುದ್ರಪ್ಪ ಅನಗವಾಡಿ ಮಾತನಾಡಿ ಸಮಾನತೆ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷ ಮೋದಿ ನಡೆಯನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಪ್ರಜ್ಞಾವಂತ ಮತದಾರರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ನೀಡಬೇಕು. ಹಿಂದಿ, ಇಂಗ್ಲಿಷ್ ಭಾಷೆ ಮಾತ್ರ ಎಲ್ಲಾ ಕಡೆ ಇರಬೇಕು ಎನ್ನುವ ದಬ್ಬಾಳಿಕೆ ಹೇರಲಾಗುತ್ತಿದೆ. ದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಆರಿಸಬೇಕಾದರೆ ಜನಪರವಾಗಿರುವ ಕಾಂಗ್ರೆಸ್‍ನ್ನು ಅಧಿಕಾರ ತರಬೇಕು.

         ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ಮಾಡುತ್ತ ಮನೆಮುರುಕ ಕೆಲಸ ಮಾಡುತ್ತಿರುವ ಮೋದಿ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಮಾಧ್ಯಮದ ಎದುರು ಬರಲಿಲ್ಲ. ಬದಲಾಗಿ ವಿದೇಶಗಳಲ್ಲಿ ಮಾಧ್ಯಮ ಗೋಷ್ಟಿ ನಡೆಸಿದ್ದಾರೆ ಇದೆಂತ ದುರಂತ ಎಂದು ಪ್ರಶ್ನಿಸಿದರು.

         ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ನೇರ್ಲಗುಂಟೆ ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್, ಎ.ಪಿ.ಎಂ.ಸಿ.ಉಪಾಧ್ಯಕ್ಷ ಜಯಣ್ಣ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here