ಬಿಜೆಪಿಯ ಮಾಸ್ಟರ್ ಪ್ಲಾನ್ ಮಾಹಿತಿ ಸ್ಪೋಟ..!!!

0
12

ಬೆಂಗಳೂರು

          ಮುಂಬರುವ ವಿಧಾನನಮಂಡಲ ಅಧಿವೇಶನಕ್ಕೂ ಮುನ್ನ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಬಿಜೆಪಿಯ ಮಾಸ್ಟರ್ ಪ್ಲಾನ್ ಒಂದರ ಮಾಹಿತಿ ಇಂದು ಸ್ಪೋಟಗೊಂಡಿದೆ.

          ಕಾಂಗ್ರೆಸ್ ಪಕ್ಷದ ಶಾಸಕರನ್ನು ತಲಾ ಇಪ್ಪತ್ತರಿಂದ ಇಪ್ಪತ್ತೈದು ಕೋಟಿ ರೂ ನೀಡುವ ಹಾಗೂ ಮಂತ್ರಿಗಿರಿ ನೀಡುವ ಕುರಿತು ಆಶ್ವಾಸನೆ ನೀಡಿರುವ ಕುರಿತು ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿಯೊಂದಿಗೆ ನಡೆಸಿದ ಆಡಿಯೋ ಸಂಭಾಷಣೆ ಇಂದು ಬಹಿರಂಗಗೊಂಡಿದೆ.

             ಗುಪ್ತಚರ ಇಲಾಖೆಯ ಮೂಲಕ ಈ ಆಡಿಯೋ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ತಲುಪಿದ್ದು ಇದರ ಬೆನ್ನಲ್ಲೇ ಕೈ ಪಾಳೆಯದ ವರಿಷ್ಟರ ಜತೆ ಮಾತುಕತೆ ನಡೆಸಿರುವ ಅವರು, ನಿಮ್ಮ ಪಕ್ಷದ ನಾಯಕರು ಹಾಗೂ ಶಾಸಕರ ಮೇಲೆ ಕಣ್ಣಿಡಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

           ಆನಂದ್‍ಸಿಂಗ್, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಬಿಜೆಪಿಗೆ ಬರಲು ಸಜ್ಜಾಗಿದ್ದು ಇದಕ್ಕೆ ಪೂರಕವಾಗಿ ಮುಂದಿನ ಹೆಜ್ಜೆಯನ್ನು ಇಡಬೇಕಿದೆ ಎಂದು ಈ ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿಯ ಜತೆ ಮಾತುಕತೆ ನಡೆಸಿದ ವಿವರಗಳು ಈ ಆಡಿಯೋದಲ್ಲಿ ಇವೆ.

             ಬಿಜೆಪಿಯ ಪ್ರಮುಖ ನಾಯಕರು ಸೇರಿ ಸರ್ಕಾರವನ್ನು ಉರುಳಿಸುವ,ಆ ಮೂಲಕ ಅಧಿಕಾರಕ್ಕೆ ಬರುವ ತಂತ್ರ ಹೆಣೆದಿದ್ದು ಇದಕ್ಕೆ ಪೂರಕವಾಗಿ ಈ ಮಾತುಕತೆ ನಡೆದಿದೆ.ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಕುಮಾರಸ್ವಾಮಿ ಅವರು ಕೈ ಪಾಳೆಯದ ವರಿಷ್ಟರಿಗೆ ಸೂಚನೆ ನೀಡಿದ್ದಾರೆ.

              ಈ ಅಧಿವೇಶನದ ಒಳಗಾಗಿಯೇ ಸರ್ಕಾರವನ್ನು ಉರುಳಿಸುವ ಸನ್ನಾಹ ನಡೆಯುತ್ತಿದ್ದು ನಿಮ್ಮ ಪಕ್ಷದ ಕೆಲ ನಾಯಕರು,ಸಚಿವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂದೂ ಕುಮಾರಸ್ವಾಮಿ ಅವರು ವಿವರ ನೀಡಿರುವುದಾಗಿ ಮೂಲಗಳು ಸ್ಪಷ್ಟ ಪಡಿಸಿವೆ.

           ಕಾಂಗ್ರೆಸ್ ಪಕ್ಷದ ಶಾಸಕರು ಬರಲು ಸಜ್ಜಾಗಿದ್ದು ಇದಕ್ಕೆ ಪೂರಕವಾಗಿ ತಮಗೆ ಮಂತ್ರಿಗಿರಿ ಹಾಗೂ ಇಪ್ಪತ್ತರಿಂದ ಇಪ್ಪತ್ತೈದು ಕೋಟಿ ರೂಪಾಯಿ ನೀಡಬೇಕು ಎಂದು ಹೇಳುತ್ತಿದ್ದಾರೆ ಎಂದು ಈ ಆಡಿಯೋ ಸಂಭಾಷಣೆಯಲ್ಲಿ ದಾಖಲಾಗಿದೆ.

            ಆ ಮೂಲಕ ರಾಜ್ಯ ರಾಜಕೀಯದಲ್ಲಿ ಪುನ; ಹೈಡ್ರಾಮಾ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಬಿಗಿಯಾಗಿಟ್ಟುಕೊಳ್ಳಲು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತ ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದೆ ಎಮದು ಮೂಲಗಳು ಹೇಳಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here