ನಗರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ.

0
5

ಹೊಸಪೇಟೆ :

       ನಗರದಲ್ಲಿ ಬಿಜೆಪಿ ಮಂಡಲ ವತಿಯಿಂದ ಬಳ್ಳಾರಿ ಲೋಕಸಭಾ ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಅವರ ಪರವಾಗಿ ಪ್ರಚಾರ ನಡೆಸಿದರು.

       ಯುವ ಮುಖಂಡ ಪತ್ತಿಕೊಂಡ ಕಿಶೋರ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ವಡಕರಾಯ ದೇವಸ್ಥಾನದಿಂದ ಪ್ರಚಾರ ಆರಂಭಿಸಿ, ಬಳಿಕ ಮೇನ್ ಬಜಾರ್, ಪಾದಗಟ್ಟಿ ಆಂಜನೇಯ ದೇವಸ್ಥಾನ, ಜುಮ್ಮಾ ಮಸೀದಿ, ರಾಮ ಟಾಕೀಸ್ ವೃತ್ತದ ವರೆಗೆ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.

       ಈ ಸಂಧರ್ಭದಲ್ಲಿ ಮುಂಡಲ ಅಧ್ಯಕ್ಷ ಅನಂತಸ್ವಾಮಿ, ಮುಖಂಡರಾದ ರಾಣಿ ಸಂಯುಕ್ತಾ, ಕವಿರಾಜ ಅರಸ್, ಪಂತರ ಜಯಂತ, ಅನಿಲ್ ಜೋಶಿ, ದೇವರಮನೆ ಶ್ರೀನಿವಾಸ ಸೇರಿದಂತೆ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here