ಜ.20ಕ್ಕೆ ಬಿಜೆಪಿ ಸ್ಲಂ ಮೋರ್ಚಾ ಕಾರ್ಯಾಗಾರ

0
5

ಚಿತ್ರದುರ್ಗ:

        ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಜ.20 ರಂದು ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ.ಸ್ಲಂ ಮೋರ್ಚಾ ಕಾರ್ಯಕರ್ತರ ಕಾರ್ಯಾಗಾರ ನಡೆಸಲಾಗುವುದೆಂದು ರಾಜ್ಯ ಬಿಜೆಪಿ.ಸ್ಲಂ ಮೋರ್ಚ ಅಧ್ಯಕ್ಷ ಅಂರ್ಬಕರ್ ತಿಳಿಸಿದರು.

         ಬಿಜೆಪಿ.ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸುಮಾರು 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೂ ಸ್ಲಂ ನಿವಾಸಿಗಳನ್ನು ಕೇವಲ ಚುನಾವಣೆಯಲ್ಲಿ ಮತಪಡೆಯುವುದಕ್ಕಾಗಿ ಬಳಸಿಕೊಂಡಿದೆಯೇ ವಿನಃ ಅವರಿಗೆ ಯಾವುದೆ ಮೂಲ ಸೌಕರ್ಯವನ್ನು ಕಲ್ಪಿಸದೆ ಕತ್ತಲೆಯಲ್ಲಿಯೇ ನಿಕೃಷ್ಟವಾಗಿ ಬದುವಂತೆ ಮಾಡಿದೆ. ಇದರ ವಿರುದ್ದ ಬಿಜೆಪಿ.ಸ್ಲಂ ಮೋರ್ಚ ಕಾರ್ಯಕರ್ತರು ಎಚ್ಚೆತ್ತುಕೊಂಡು ಸ್ಲಂ ಪ್ರದೇಶಗಳಿಗೆ ಹೋಗಿ ಅಲ್ಲಿನ ಕೊಳಗೇರಿಗಳ ಸಮಸ್ಯೆಗಳನ್ನು ಆಲಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎನ್ನುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

          ಸ್ಲಂ ಮತಗಳಿಂದಲೇ ಸುಮಾರು ಇಪ್ಪತ್ತೈದು ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದಾರೆ. ದಿನೇಶ್‍ಗುಂಡುರಾವ್, ರಾಮಲಿಂಗಾರೆಡ್ಡಿ ಇನ್ನು ಅನೇಕರು ಸ್ಲಂ ಮತಗಳಿಂದ ಗೆದ್ದು ಬರುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಅವರತ್ತ ತಿರುಗಿಯೂ ನೋಡಿಲ್ಲ. ಜಿಲ್ಲೆಯಲ್ಲಿ 72 ಸ್ಲಂಗಳಿವೆ. ಆದರೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಜಿಲ್ಲೆಯಲ್ಲಿ ಕೇವಲ ಹದಿನಾರು ಸ್ಲಂಗಳಿವೆ ಎಂದು ತಪ್ಪು ಲೆಕ್ಕ ನೀಡುತ್ತಿವೆ. ಉಳಿದ ಸ್ಲಂಗಳನ್ನು ಕೊಳಗೇರಿ ಪ್ರದೇಶದ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

        ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೊಳಗೇರಿ ಪದವನ್ನು ನಿರ್ಮೂಲನೆ ಮಾಡುವ ಆಸೆಯಿಟ್ಟುಕೊಂಡಿದ್ದರು. ಆದರೆ ಮತದಾರರು ಬಹುಮತ ನೀಡದ ಕಾರಣ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಮುಂದೆ ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನಿಜವಾಗಿಯೂ ಸ್ಲಂ ನಿವಾಸಿಗಳಿಗೆ ಅಗತ್ಯ ಮೂಲಸೌಲಭ್ಯ ನೀಡಿ ಅವರ ಜೀವನ ಮಟ್ಟವನ್ನೇ ಸುಧಾರಿಸಲಾಗುವುದು ಎಂದು ಭರವಸೆ ನೀಡಿದರು.

        ಮೋದಿ ಸರ್ಕಾರ 2020 ರೊಳಗೆ ಸ್ಲಂ ನಿವಾಸಿಗಳಿಗೆ ಎರಡು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ನಿಜವಾಗಿಯೂ ಅರ್ಹ ಕೊಳಗೇರಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಬಹುದಾಗಿದೆ ಎಂದು ಮನವಿ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here