ಹಲುವಾಗಲು ತಾಪಂ ಉಪ ಚುನಾವಣೆ: ಬಿಜೆಪಿ ಗೆಲುವು

0
6
ಹರಪನಹಳ್ಳಿ
       
         ತಾಲ್ಲೂಕಿನ ಹಲವಾಗಲು ತಾಲ್ಲೂಕು ಪಂಚಾಯ್ತಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹುಲಿಕಟ್ಟಿ ಕೇಶವಗೌಡ  ಜಯಗಳಿಸಿದ್ದು, ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆ ಆದಂತಾಗಿದೆ.
          ಜ.2ರಂದು ನಡೆದು ಮತದಾನದಲ್ಲಿ ಶೇ.68ರಷ್ಟು ಮತದಾನವಾಗಿತ್ತು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಅವರಿಗೆ 3060 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಕೇಶವಗೌಡ ಅವರು 3194 ಮತಗಳನ್ನು ಪಡೆದು 134 ಮತಗಳ ಅಂತರದಲ್ಲಿ ವಿಜೇತರಾಗಿದ್ದಾರೆ. ಒಟ್ಟು 6351 ಮತಗಳು ಚಲಾವಣೆಗೊಂಡಿದ್ದು, ಅದರಲ್ಲಿ 97 ಮತಗಳು ನೋಟಾಗೆ ಬಿದ್ದಿವೆ.
         ಬಿಜೆಪಿ ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ರಾಜಕೀಯಕ್ಕೆ ಇಳಿದಿದ್ದವು. ಶುಕ್ರವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸೋಲನ್ನೊಪ್ಪುವ ಮೂಲಕ ಹಲವಾಗಲು ಬಿಜೆಪಿ ಭದ್ರಕೋಟೆ ಎಂದು ಸಾಬೀತುಪಡಿಸಿದೆ.
         ಈ ಹಿಂದೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಗಣೇಶ ಅವರು ಸ್ಪರ್ಧಿಸಿ ಜಯಗಳಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಣೇಶ ಅವರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿದ್ದರಿಂದ ಮುಜುಗರ ಬೇಡ ಎಂದು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಈ ಉಪ ಚುನಾವಣೆ ನಿಗದಿಯಾಗಿತ್ತು.
         ವಿಜಯೋತ್ಸವ: ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದಂತೆ ಪಟ್ಟಣದಲ್ಲಿ ಹಾಗೂ ಹಲವಾಗಲು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.
           ಬಿಜೆಪಿ ಅಭ್ಯರ್ಥಿ ಕೇಶವಗೌಡ ಅವರು ಚುನಾವಣಾಧಿಕಾರಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸುವಾಗ   ಬಿಜೆಪಿ ಮುಖಂಡರಾದ ಎಂ.ಪಿ.ನಾಯ್ಕ, ಎಂ.ಬಿ.ಅಧಿಕಾರ, ಕೆ.ಲಿಂಗಾನಂದ, ವೀರಭದ್ರಪ್ಪ, ರಾಘವೇಂದ್ರಶೆಟ್ಟಿ, ಎಚ್.ಟಿ. ಗಿರೀಶಪ್ಪ, ಎಂ.ದ್ಯಾಮಣ್ಣ, ಸಂತೋಷ ಮತ್ತಿತರರು ಅಭಿನಂದಿಸಿದರು.
         ಮತಎಣಿಕೆ ಸಂದರ್ಭದಲ್ಲಿ ತಹಶೀಲ್ದಾರ ಎಸ್.ರವಿ, ಚುನಾವಣಾಧಿಕಾರಿ ದೇವೇಂದ್ರಪ್ಪ, ಸಹಾಯಕ ಚುನಾವಣಾಧಿಕಾರಿ ಜಯಮಾಲತೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಗಣೇಶ, ಹಲುವಾಗಲು ಲಿಂಗರಾಜು, ವೀರಭದ್ರಪ್ಪ ಮತ್ತಿತರರಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here