ಪ್ರೆಷರ್ ಕುಕ್ಕರ್ ತಯಾರಿಕಾ ಕಂಪೆನಿಯಲ್ಲಿ ಬಾಯ್ಲರ್ ಸ್ಫೋಟ

ಬೆಂಗಳೂರು

         ನಗರದ ಹೊರವಲಯದ ಕನಕಪುರದ ಹಾರೋಹಳ್ಳಿಯಲ್ಲಿ ಪ್ರೆಷರ್ ಕುಕ್ಕರ್ ತಯಾರಿಕಾ ಕಂಪೆನಿಯೊಂದರಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ ಮಹಿಳೆ ಸೇರಿದಂತೆ 13 ಮಂದಿ ಕಾರ್ಮಿಕರು ಗಾಯಗೊಂಡಿದ್ದು ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

        ಸ್ಫೋಟದಲ್ಲಿ ಗಾಯಗೊಂಡಿರುವ ಹಾರೋಹಳ್ಳಿಯ ಲತಾ, ವರ್ಷಾ, ವಿನೋದ್, ಸಿದ್ದಲಿಂಗಯ್ಯ ಅವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

         ಹಾರೋಹಳ್ಳಿಯ ಸ್ಟೌವ್ ಕ್ರಾಫ್ಟ್ ಕಂಪೆನಿಯ ಆರ್‍ಸಿ ಯೂನಿಟ್ ಕೊಠಡಿಯಲ್ಲಿದ್ದ ಅಲ್ಯುಮಿನಿಯಮ್ ಕರಗಿಸುವ ಬಾಯ್ಲರ್ ಕೆಟ್ಟಿದ್ದು ಅದನ್ನು ಸರಿಪಡಿಸಿ, ಮತ್ತೆ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ಏಕಾಏಕಿ ಅಲ್ಯುಮಿನಿಯಮ್ ಕರಗಿಸುವ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಭಾರೀ ಅನಾಹುತವೇ ಸಂಭವಿಸಿದೆ.

         ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರ ಸ್ಥಿತಿ ಚಿಂತಾನಕವಾಗಿದ್ದು, ಉಳಿದಂತೆ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಆಸ್ಪತ್ರೆಯ ಮುಂದೆ ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾರ್ಮಿಕರು ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದರು.ಹಾರೋಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‍ಬುಕ್‍ನಿಂದ ಪತ್ತೆ

      ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳತೊಡಗಿದ್ದಾರೆ.

        ಇತ್ತೀಚಿಗೆ ಹೆಬ್ಬಾಳದ ಬಳಿ ನಡುರಸ್ತೆಯಲ್ಲಿ ಓಮ್ನಿ ವ್ಯಾನ್‍ನಲ್ಲಿ ಬಂದು ಮಹಿಳೆಯೊಬ್ಬರನ್ನು ಬಲವಂತವಾಗಿ ಕರೆದೊಯ್ದಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಹಿಳೆ ವ್ಯಾನ್ ಹತ್ತಲು ನಿರಾಕರಿಸಿದಾಗ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ.ಈ ವೇಳೆ ಮಹಿಳೆಯೊಬ್ಬರು ಆಕೆಯನ್ನು ರಕ್ಷಿಸಲು ಹೋಗಿದ್ದಾರೆ.ಸಹಾಯಕ್ಕೆ ಬಂದ ಮಹಿಳೆಗೂ ಬೈದು ಪರಾರಿಯಾಗಿದ್ದಾರೆ.

        ಮಹಿಳೆಯು ಓಮ್ನಿ ಕಾರ್ ಹಾಗೂ ಮಹಿಳೆಯ ಫೋಟೋ ತೆಗೆದು ಸಿಟಿ ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಗೆ ಟ್ಯಾಗ್ ಮಾಡಿ, ನಗರದಲ್ಲಿ ಈ ರೀತಿಯಾದರೆ ಹೇಗೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಪೋಸ್ಟ್ ಮಾಡಿದ್ದರು.
ಮಹಿಳೆಯ ಟ್ಯಾಗ್‍ಗೆ ಕೂಡಲೇ ಸ್ಪಂದಿಸಿರುವ ಸಿಟಿ ಪೊಲೀಸರು ಓಮ್ಮಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap