ಕಾಂಗ್ರೆಸ್ ಕಚೇರಿಯಲ್ಲಿ ರಕ್ತದಾನ

0
8

ಚಿತ್ರದುರ್ಗ:

       ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿರವರ ಪುಣ್ಯದಿನ ಹಾಗೂ ಉಕ್ಕಿನ ಮನುಷ್ಯ ಸರ್ದಾರ್‍ವಲ್ಲಭಾಯಿ ಪಟೇಲ್‍ರವರ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

     ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಅಶ್ರಫ್‍ಆಲಿ ಮಾತನಾಡಿ ಇಂದಿರಾಗಾಂಧಿರವರು ದೇಶದ ಪ್ರಧಾನಿಯಾಗಿದ್ದಾಗ ಹಂತಕರ ಗುಂಡಿಗೆ ಬಲಿಯಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ತತ್ವ ಸಿದ್ದಾಂತ, ಮಾರ್ಗದರ್ಶನದ ಮೇಲೆ ಎಲ್ಲರೂ ನಡೆಯಬೇಕಾಗಿರುವುದರಿಂದ ಸೇವಾದಳದಿಂದ ರಕ್ತದಾನ ಮಾಡುವ ಮೂಲಕ ಇಂದಿರಾಗಾಂಧಿರವರನ್ನು ಸ್ಮರಣೆ ಮಾಡಲಾಯಿತು ಎಂದು ಹೇಳಿದರು.

       ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅತ್ಯವಶ್ಯಕವಾಗಿರುವುದರಿಂದ ಅಮೂಲ್ಯವಾದ ಜೀವ ಉಳಿಸುವುದಕ್ಕಾಗಿ ಸೇವಾದಳದ ಹದಿನೈದು ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ ಪಕ್ಷ ಸಂಘಟನೆಯನ್ನೇ ಉದ್ದೇಶವಾಗಿಟ್ಟುಕೊಂಡಿರುವ ಸೇವಾದಳ ಶಿಸ್ತಿಗೆ ಹೆಸರುವಾಸಿಯಾದುದು ಎಂದರು.

         ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಕೆ.ಪಿ.ಸಂಪತ್‍ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಆರ್.ಕೆ.ನಾಯ್ಡು, ಎಂ.ಕೆ.ತಾಜ್‍ಪೀರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜಿ.ಮನೋಹರ್. ನ್ಯಾಯವಾದಿ ರವಿ, ಸೇವಾದಳದ ಮಹಿಳಾ ಸಂಘಟಕಿ ಇಂದಿರಾ, ನೇತ್ರಾವತಿ, ಮಜೀದ್, ಸೈಫುಲ್ಲಾ, ರಾಮಾಂಜನೇಯ, ನವಾಬ್, ಬಷೀರ್ ಅಹಮದ್, ವೆಂಕಟೇಶ್, ಮನ್ಸೂರ್, ಹರ್ಷಿದಾಭಾನು, ರೇಷ್ಮಭಾನು ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here