ಟ್ರಾಕ್ಟರ್ ತನ್ನಿ ನಾನೇ ಮರಳು ತುಂಬಿಸುತ್ತೇನೆ: ಎಂಪಿಆರ್

0
8

ದಾವಣಗೆರೆ:

      ಜಿಲ್ಲೆಯ ಹೊನ್ನಾಳಿ ತಾಲೂಕಿನ ಜನರಿಗೆ ಮರಳು ದೊರೆಯದ ಕಾರಣ ನ.12ರಂದು ಎತ್ತಿನ ಗಾಡಿ, ಟ್ರ್ಯಾಕ್ಟರ್ ತನ್ನಿ, ನಾನೇ ಮುಂದೆ ನಿಂತು ಮರಳು ಹೊಡೆಸುತ್ತೇನೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

       ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮರಳು ಆಭಾವ ಅಧಿಕವಾಗಿದೆ. ಆದ್ದರಿಂದ ಜನರು ಮನೆ ಕಟ್ಟಿಕೊಳ್ಳು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನ.12ರ ಬೆಳಗ್ಗೆ 11 ಮರಳು ಹೊಡೆಸುತ್ತೇನೆ. ತಾಕತ್ತಿದ್ದರೆ ಜಿಲ್ಲಾಡಳಿತ ಮರಳು ಹೊಡೆಯುವುದನ್ನು ತಡೆಯಲಿ ಎಂದು ಸವಾಲು ಹಾಕಿದರು. ತಾಲೂಕಿನಲ್ಲಿ 11 ಮರಳಿನ ಬ್ಲಾಕ್‍ಗಳಿದ್ದರೂ ಮರಳಿನ ಕ್ಷಾಮ ಉಂಟಾಗಿದೆ. ಹಿಂದಿನ ಸರ್ಕಾರದಲ್ಲಿ ಹಜಾರು ಮಾಡಲಾಗಿತ್ತು. ಹೆಚ್ಚಿನ ದರ ನಿಗದಿಪಡಿಸಿ, ಹರಾಡು ಮಾಡಲಾಗಿದೆ. ಆದರೂ, ಮರಳು ಸಿಗದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

        ಜನರಿಗೆ ಮರಳು ಕೊಡಿಸಲು ಹೊಳೆಯಲ್ಲೇ ನಾನು ಮಲಗಿರುತ್ತೇನೆ. ಯಾರೇ ಬರಲಿ ಬಗ್ಗುವುದಿಲ್ಲ. ಪೆÇಲೀಸರ ದೌರ್ಜನ್ಯ ದಿನದಿನಕ್ಕೂ ಹೆಚ್ಚಾಗುತ್ತಿದೆ. ಪೊಲೀಸ್ ಸಾಮ್ರಾಜ್ಯ ಇಲ್ಲಿ ನಡೆಯುವುದಿಲ್ಲ. ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಸಹ ಯಾರೊಬ್ಬರ ಮಾತನ್ನೂ ಕೇಳುತ್ತಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರೇನು ಸತ್ಯ ಹರಿಶ್ಚಂದ್ರರಾ? ಡಿಸಿ, ಎಸ್ಪಿಗಳು ಬರುತ್ತಾರೆ, ಹೋಗುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

        ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ.ಆರ್.ಮಹೇಶ, ಸುರೇಂದ್ರ ನಾಯಕ, ಅರಕೆರೆ ನಾಗರಾಜ, ನರಸಗೊಂಡನಹಳ್ಳಿ ರಘು, ರಂಗಪ್ಪ ಇನ್ನಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here