ರಾಜ್ಯ ಸರಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಕೊಡುಗೆ

ಬೆಂಗಳೂರು: 

       ರಾಜ್ಯ ಸರಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಕೊಡುಗೆ ಸಿಕ್ಕಿದೆ. ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು 2019 ಪರಿಷ್ಕೃತ ವೇತನ ಶ್ರೇಣಿಯಲ್ಲಿ ಏರಿಕೆ ಮಾಡಲಾದೆ. 2018 ಜು.1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಶೇ.1.75ರಿಂದ 3.75ಕ್ಕೆ ಏರಿಕೆ ಮಾಡಿ ಸರಕಾರ ಆದೇಶ ಹೊರಡಿಸಿದೆ. 

     ಸರಕಾರದ ಮತ್ತು ಜಿಲ್ಲಾ ಪಂಚಾಯಾತ್‌ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾಚಧಿ ವರ್ಕ್‌ಚಾರ್ಜ್‌ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಪೂರ್ಣಾವಧಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ. 

      ಇದಲ್ಲದೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೂಲಕ ನಿವೃತ್ತಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿ ಭತ್ಯೆಯನ್ನೂ 2018ರ ಜು.1ರಿಂದ ಪೂರ್ವಾನ್ವಯ ಆಗುವಂತೆ ಶೇ.1.75 ರಿಂದ 3.75ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. 2006ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ 2016 ಜ.೧ರ ಪೂರ್ವದಲ್ಲಿ ನಿವೃತ್ತರಾದವರಿಗೂ ಈ ಆದೇಶ ಅನ್ವಯವಾಗುತ್ತದೆ. ಈ ದಿನಾಂಕದ ಬಳಿಕ ನಿವೃತ್ತರಾದವರಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರಕಾರ ಹೇಳಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap