ಹಾವನ್ನು ಆಡಿಸಿ ರಂಜಿಸಿದ ಬಸ್ ಚಾಲಕ

0
8

ಹಾನಗಲ್ಲ :

      ಭಾರತ ಬಂದ್‍ಗೆ ಹಾನಗಲ್ಲಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದನ್ನು ಬಿಟ್ಟರೆ ಉಳಿದೆಲ್ಲ ಯಥಾಸ್ಥಿತಿಯಲ್ಲಿ ನಡೆದಿದ್ದು ಕಂಡು ಬಂದಿದ್ದು, ಬಸ್‍ಡಿಪೋದಲ್ಲಿ ಉರಗಪ್ರೇಮಿ ಬಸ್ ಚಾಲಕ ಕೃಷ್ಣ ರೆಡ್ಡಿ ಹಾವನ್ನು ಆಡಿಸಿ ರಂಜಿಸಿದ್ದು ವಿಶೇಷವಾಗಿತ್ತು. 

      ಮಂಗಳವಾರ ಹಾನಗಲ್ಲಿನಲ್ಲಿ ವ್ಯಾಪಾರ ವಹಿವಾಟುಗಳು ಯಥಾಸ್ಥಿತಿಯಲ್ಲಿದ್ದರೂ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿಲ್ಲ. ಪದವಿಪೂರ್ವ ಕಾಲೇಜುಗಳ ಪೂರ್ವ ತಯಾರಿ ಪರೀಕ್ಷೆ ಮುಂದೂಡಿದ್ದರಿಂದ ಪರೀಕ್ಷೆಗಳು ನಡೆಯಲಿಲ್ಲ. ಉಳಿದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ವರ್ಗಗಳು ನಡೆದವು. ಕೆಲವು ಖಾಸಗಿ ಶಾಲೆಗಳು ಬಂದ್ ಕಾರಣದಿಂದಾಗಿ ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆಗಳನ್ನು ನಡೆಸಲಿಲ್ಲ.

       ಹಾನಗಲ್ಲ 86 ಕ್ಕೂ ಅಧಿಕ ಬಸ್‍ಗಳು ರಸ್ತೆಗಿಳಿಯದೆ ಬಸ್‍ ಡಿಪೋದಲ್ಲಿ ನಿಂತಿದ್ದವು. ಈ ಸಂದರ್ಭದಲ್ಲಿ ಉರಗಪ್ರೇಮಿಯಾಗಿರುವ ಬಸ್‍ಚಾಲಕ ಕೃಷ್ಣ ರೆಡ್ಡಿ ಆಕಸ್ಮಿಕವಾಗಿ ಸಿಕ್ಕ ಹಾವೊಂದನ್ನು ಹಿಡಿದು ಕೆಲಕಾಲ ಬಸ್‍ಡಿಪೋದಲ್ಲಿ ಚಾಲಕರು ನಿರ್ವಾಹಕರ ನಡುವೆ ಆಟವಾಡಿಸಿದ್ದು ಕಂಡುಬಂದಿತು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here