ಜಯಚಂದ್ರ ಪುತ್ರನಿಂದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ

0
2

ಹುಳಿಯಾರು

      ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ಅವರು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರ ಪರ ಹುಳಿಯಾರಿನಲ್ಲಿ ಪ್ರಚಾರ ಮಾಡಿದರು.

      ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವ ಕಾರಣ ಜೆಡಿಎಸ್ ಪಾಲಿಗೆ ಈ ಕ್ಷೇತ್ರ ಒಲಿದಿದ್ದು, ಮೈತ್ರಿ ಧರ್ಮ ಪಾಲನೆಗಾಗಿ ಈ ಚುನಾವಣೆಯಲ್ಲಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರಿಗೆ ಮತ ಹಾಕುವಂತೆ ಪ್ರಚಾರ ಮಾಡಲಾಗುತ್ತಿದೆ ಎಂದರಲ್ಲದೆ ಕ್ಷೇತ್ರದ ಎಲ್ಲ ಕಡೆಗಳಲ್ಲಿ ದೇವೇಗೌಡರ ಪರ ಒಲವಿದ್ದು, ರಾಜ್ಯ ಮತ್ತು ರಾಷ್ಟ್ರದ ಪ್ರಗತಿಯ ದೃಷ್ಠಿಯಿಂದ ಹಿರಿಯ ರಾಜಕೀಯ ಮುತ್ಸದ್ಧಿಯನ್ನು ಗೆಲ್ಲಿಸಿಕೊಳ್ಳಬೇಕೆಂದು ಅಲೆ ಜಿಲ್ಲೆಯಲ್ಲಿದೆ ಹಾಗಾಗಿ ಈ ಬಾರಿ ತುಮಕೂರು ಕ್ಷೇತ್ರದಿಂದ ದೇವೇಗೌಡರ ಗೆಲುವು ನಿಶ್ಚಿತ ಎಂದು ತಿಳಿಸಿದರು.

        ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸಲು ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಮಹಾ ಘಟಬಂಧನ್ ರಚಿಸಿವೆ. ನರೇಂದ್ರ ಮೋದಿ ಈ ಹಿಂದೆ ಚುನಾವಣೆ ವೇಳೆ ನೀಡಿದ ಭರವಸೆಗಳು ಹುಸಿಯಾಗಿದ್ದು, ಕಪ್ಪು ಹಣ ವಾಪಾಸ್, ನಿರುದ್ಯೋಗ ಸಮಸ್ಯೆ ಬಗೆಹರಿದಿಲ್ಲ. ನೋಟು ಅಮಾನ್ಯೀಕರಣದಿಂದ ದೇಶದ ಜನತೆಗೆ ತೊಂದರೆಯಾಗಿದೆ ಎಂದು ದೂರಿದರು.

        ತಾಪಂ ಸದಸ್ಯ ಏಜೆಂಟ್ ಕುಮಾರ್ ಅವರು ಮಾತನಾಡಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಈ ಕ್ಷೇತ್ರದಲ್ಲಿ 4 ಬಾರಿ ಸಂಸದರಾಗಿದ್ದರೂ ಕೂಡ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆಂದರೆ ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ ಎಂದರ್ಥ. ಹಾಗಾಗಿ ದೇವೇಗೌಡರು ಗೆದ್ದರೆ ನೀರಾವರಿ ಸೌಲಭ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಾಗುತ್ತದೆಂದು ಮತದಾರರು ಜೆಡಿಎಸ್ ಪರ ಮತ ಹಾಕಲು ಮನಸ್ಸು ಮಾಡಿದ್ದಾರೆ ಎಂದರು.

         ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಪಪಂ ಸದಸ್ಯ ಧನುಷ್ ರಂಗನಾಥ್, ಎಚ್.ಆರ್.ವೆಂಕಟೇಶ್, ರಾಘವೇಂದ್ರ, ಜೆಡಿಎಸ್ ಮುಖಂಡರಾದ ಏಜಾಸ್, ಗಣೇಶ್, ತಿಮ್ಮರಾಜು, ಶಂಕರ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here