ಸ್ಕೂಟರ್ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು

0
10

ಬೆಂಗಳೂರು

      ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ದಂಪತಿ ಮೃತಪಟ್ಟರೆ ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರು ಗಾಯಗೊಂಡಿರುವ ದುರ್ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.ಮೃತಪಟ್ಟವರನ್ನು ಪಿಳ್ಳಗಾನಹಳ್ಳಿಯ ಬಾಲನ್(63) ಮತ್ತವರ ಪತ್ನಿ ಭಾಗ್ಯಮ್ಮ(58)ಎಂದು ಗುರುತಿಸಲಾಗಿದೆ,ಅಪಘಾತದಲ್ಲಿ ಗಾಯಗೊಂಡಿರುವ ಬನ್ನೇರುಘಟ್ಟದ ವಾಲ್ಮೀಕಿ ಸಹಾನಿ ಹಾಗೂ ಜಯರಾಮ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

       ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಬಾಲನ್ ಭಾಗ್ಯಮ್ಮ ದಂಪತಿಯು ಸಂಜೆ 5ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಸ್ಕೂಟರ್‍ನಲ್ಲಿ ಬನ್ನೇರುಘಟ್ಟ ಕಗ್ಗಲಿಪುರ ರಸ್ತೆಯ ವಿಎನ್‍ಆರ್ ಬಂಡೆ ಬಳಿ ಬರುತ್ತಿದ್ದು ಅವರ ಹಿಂಭಾಗವೇ ಬೈಕ್‍ನಲ್ಲಿ ವಾಲ್ಮೀಕಿ ಸಹಾನಿ ಹಾಗೂ ಜಯರಾಮ್ ಬರುತ್ತಿದ್ದರು.ಈ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರು ಸ್ಕೂಟರ್ ಹಾಗೂ ಬೈಕ್‍ಗೆ ಡಿಕ್ಕಿ ಹೊಡೆದಿದೆ.

      ಡಿಕ್ಕಿಯ ರಭಸಕ್ಕೆ ಸ್ಕೂಟರ್‍ನಲ್ಲಿದ್ದ ಬಾಲನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಗಾಯಗೊಂಡ ಭಾಗ್ಯಮ್ಮ ಅವರು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಬೈಕ್‍ನಲ್ಲಿ ವಾಲ್ಮೀಕಿ ಸಹಾನಿ ಹಾಗೂ ಜಯರಾಮ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಕಾರು ಡಿಕ್ಕಿಯ ರಭಸಕ್ಕೆ ಆಕ್ಸಿಸ್ ಬೈಕ್ ಎರಡು ತುಂಡಾಗಿದ್ದು ಅಪಘಾತಕ್ಕೆ ಕಾರ್ ಚಾಲಕನ ಅತೀ ವೇಗವೇ ಕಾರಣವಾಗಿದೆ ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಕಾರು ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here