ಕಾರು ವಂಚಕನ ಬಂಧನ

ಬೆಂಗಳೂರು

         ಬದಲಾವಣೆ(ಎಕ್ಸ್‍ಚೇಂಜ್)ಗಾಗಿ ಬರುತ್ತಿದ್ದ ಕಾರುಗಳ ಮಾಲೀಕರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದಾಗಿ ನಂಬಿಸಿ ಟ್ರಯಲ್ ನೋಡುವುದಾಗಿ ಕಾರು ಪಡೆದು ಮಾರಾಟ ಮಾಡಿ ವಂಚಿಸಿ ಜೂಜಾಡುತ್ತಾ ಮೋಜು ಮೋಜು ಮಾಡುತ್ತಿದ್ದ ಡಿಪೆಮಾ ಪದವೀಧರನೊಬ್ಬ ವಿದ್ಯಾರಣ್ಯಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

         ಎಂ.ಎಸ್. ಪಾಳ್ಯದ ಬಸವಲಿಂಗಪ್ಪ ಲೇಔಟ್‍ನ ಶ್ರೀನಾಥ್ (29) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 15 ಲಕ್ಷ ರೂ. ಮೌಲ್ಯದ ಹುಂಡೈ ವೆರ್ನಾ, ಹೊಂಡಾ ಅಮೇಜ್,  ಪ್ಲೇಯರ್ ಸೇರಿ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯು ಕಾರು ಮಾರಾಟ ಮಾಡಿ ಹಣ ಪಡೆದು ಗೋವಾಕ್ಕೆ ಪರಾರಿಯಾಗಿ ಕೆಸಿನೋಗಳಲ್ಲಿ ಜೂಜಾಟವಾಡಿ ಮೋಜು ಮಾಡುತ್ತಿದ್ದ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

      ಆರೋಪಿಯು ಯಲಹಂಕ ಕಾರ್ ಶೋ ರೂಂನಲ್ಲಿ ಮಾರಾಟದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಕಾರು ಬದಲಾವಣೆಗೆ ಬರುತ್ತಿದ್ದ ಮಾಲೀಕರನ್ನು ಸಂಪರ್ಕಿಸಿ ಹೊರಗಡೆ ತಮ್ಮ ಕಾರುಗಳಿಗೆ ಉತ್ತಮ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸುತ್ತಿದ್ದ.ಮಾಲೀಕರ ಕಾರನ್ನು ಪಡೆದು ಮಾರಾಟ ಮಾಡಿ ಹಣವನ್ನು ನೀಡದೆ, ಮಾರಾಟ ಮಾಡಿ ಗೋವಾಕ್ಕೆ ಪರಾರಿಯಾಗಿ ಅಲ್ಲಿನ ಕೆಸಿನೋಗಳಲ್ಲಿ ಜೂಜಾಟವಾಡಿ ಮೋಜು ಮಾಡುತ್ತಿದ್ದನು. 

       ಶ್ರೀನಾಥ್‍ನ ಕೃತ್ಯ ತಿಳಿದ ಕೂಡಲೇ ಆತನನ್ನು ಮಾರಾಟ ಪ್ರತಿನಿಧಿ ಕೆಲಸದಿಂದ ತೆಗೆಯಲಾಗಿತ್ತು ಆರೋಪಿಯು ಇಲ್ಲಿಯವರೆಗೆ ಸುಮಾರು 15 ಕಾರುಗಳನ್ನು ಇದೇ ರೀತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಆರೋಪಿಯು ದೋಚಿದ್ದು, ಅದರಲ್ಲಿ 12 ಕಾರುಗಳ ಮಾರಾಟದ ಹಣವನ್ನು ಮಾಲೀಕರಿಗೆ ನೀಡಿ, ಪ್ರಕರಣದಿಂದ ಪಾರಾಗಿದ್ದ. .

      ಉಳಿದ ಮೂರು ಕಾರುಗಳ ಮಾರಾಟದ ಹಣವನ್ನು ಹಿಂತಿರುಗಿಸದೆ, ಮೋಜು ಮಾಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಆಧರಿಸಿ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‍ಪೆಕ್ಟರ್ ರಾಮಮೂರ್ತಿ, ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap