ಮುಖ್ಯಮಂತ್ರಿಗಳ ಆಗಮನ

0
6

ಹಾವೇರಿ :

       ತಾಲೂಕಿನ ನರಸೀಪುರ(ಕಂಚಾರಗಟ್ಟಿ)ದ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕøತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವ ದಿ,14 ಮತ್ತು 15 ರಂದು ಜರುಗಲಿವೆ ಎಂದು ಬಸವ ಕಲ್ಯಾಣ ಶಾಸಕ ಬಿ ನಾರಾಯಣರಾವ್ ಹೇಳಿದರು.

         ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ  ಅವರು  ದಿ, 14 ರಂದು ಬೆಳಿಗ್ಗೆ 8 ಘಂಟೆಗೆ ಧರ್ಮ ಧ್ವಜಾರೋಹಣ ಜರುಗಲಿದೆ. 11-30 ಘಂಟೆಗೆ ಲಿಂಗನಾಯಕನಹಳ್ಳಿಯ ಶ್ರೀ ಮ.ನಿ.ಪ್ರ ಚನ್ನವೀರ ಶಿವಯೋಗಿಗಳ ದಿವ್ಯ ಸಾನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಸಂಸ್ಕøತಿಕ ಮತ್ತು ಜಾನಪದ ಕಲಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.

       ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿರುವರು.ಅಧ್ಯಕ್ಷತೆಯನ್ನು  ಬಸವಕಲ್ಯಾಣ ಶಾಸಕ ಬಿ ನಾರಾಯಣರಾವ ವಹಿಸುವರು.ಸಮ್ಮುಖವನ್ನು ಜಿಲ್ಲೆಯ ಹಾಗೂ ರಾಜ್ಯದ ಮಠಗಳ ಮಹಾಸ್ವಾಮಿಗಳು ವಹಿಸುವರು.ಮುಖ್ಯ ಅಥಿತಿಗಳಾಗಿ ನಾಡಿನ ಮಾಜಿ – ಹಾಲಿ ಸಚಿವರು ಹಾಗೂ ಶಾಸಕರು ಭಾಗವಹಿಸುವರು. ದಿ,15 ರಂದು ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕøತಿ ಉತ್ಸವ ಪರಮಪೂಜ್ಯ ಡಾ|| ಶಿವಮೂರ್ತಿ ಮುರಘಾ ಶರಣರ ದಿವ್ಯ ಸಾನಿಧ್ಯದಲ್ಲಿ ಜರುಗುವುದು.

         ಈ ಸಂಸ್ಕøತಿ ಉತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿಯವರು ಉದ್ಘಾಟಿಸುವರು. ದಿವ್ಯ ಉಪಸ್ಥಿತಿ ಗುರುಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು ಹಾಗೂ ಅಧ್ಯಕ್ಷತೆಯನ್ನು ಶಾಸಕ ನೆಹರೂ ಓಲೇಕಾರ ವಹಿಸುವರು.

         ಪ್ರಮುಖ ಮಠಗಳ ಮಹಾಸ್ವಾಮಿಗಳು ಹಾಗೂ ನಾಡಿನ ಜನಪ್ರತಿನಿಧಿಗಳು ಭಾಗವಹಿಸವರು. ಈ ಎಲ್ಲ ಕಾರ್ಯಕ್ರಮಗಳಿಗೆ ನಾಡಿನ ಹಾಗೂ ವಿವಿಧ ರಾಜ್ಯಗಳ ಭಕ್ತಾಧಿಗಳು, ಸಾರ್ವಜನಿಕರು ಆಗಮಿಸುವಂತೆ ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ ನಾರಾಯಣರಾವ್ ಕೋರಿದರು. ಈ ಸಂದರ್ಭದಲ್ಲಿ ಗುರುಪೀಠದ ಬಸವರಾಜ ಸಪ್ಪನಗೋಳ.ಕೃಷ್ಣಮೂರ್ತಿ ವಡ್ನಿಕೊಪ್ಪ.ಬಸವರಾಜ ಕಳಸದ.ಗಣೇಶ ಬಿಷ್ಟಣ್ಣವನ.ರಾಜು ಕೊಲ್ಲೇರ.ಮಂಜುನಾಥ ಭೋವಿ ಅನೇಕರು ಪಾಲ್ಗೊಂಡಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here