ಚುನಾವಣಾ ಬಂದೋಬಸ್ತಿಗೆ 5 ಕೇಂದ್ರ ಪ್ಯಾರ ಮಿಲ್ಟ್ರಿ ಪಡೆ:ಎಸ್ಪಿ

0
15

ಬಳ್ಳಾರಿ

        ಈ ತಿಂಗಳ 23ರಂದು ನಡೆಯುವ ಮತದಾನಕ್ಕಾಗಿ ಜಿಲ್ಲೆಯಲ್ಲಿ 5 ಕೇಂದ್ರ ಪ್ಯಾರ ಮಿಲಟರಿ ಪಡೆ, 9ಕೆ.ಎಸ್.ಆರ್.ಪಿ, 27 ಡಿಎಆರ್ ಸೇರಿದಂತೆ ಒಟ್ಟಾರೆ 900 ಶಸ್ತ್ರ ಸಜ್ಜಿತ ಪೊಲೀಸ್ ಪಡೆ ಬಂದೋಬಸ್ತಿಗಾಗಿ ಕಾರ್ಯನಿರ್ವಹಿಸಲಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.ಅವರಿಂದು ಸುದ್ದಿಗೋಷ್ಠಿ ನಡೆಸಿ ಚುನಾವಣೆಗೆ 3 ಹಂತದಲ್ಲಿ ಬಂದೋಬಸ್ತು ವ್ಯವಸ್ಥೆ ಮಾಡಿಕೊಂಡಿದೆ.

        ಜಿಲ್ಲೆಯ 1289 ಸ್ಥಳಗಳಲ್ಲಿ 463 ಸೂಕ್ಷ್ಮ ಮತಗಟ್ಟೆಗಳು ಸೇರಿ 2150 ಮತಗಟ್ಟೆ ಸ್ಥಾಪಿಸುತ್ತಿದೆ ಎಂದರು.ಜಿಲ್ಲೆಯ 34 ಠಾಣೆಗಳ ಜೊತೆ ಇತರೆ ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಜಿಲ್ಲೆಯ ಎಸ್ಪಿ, ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 29 ಸಿಪಿಐ, 36 ಪಿಎಸ್‍ಐ, 154 ಎ.ಎಸ್.ಐ, 1639 ಹೆಡ್ ಕಾನ್ಸಟೇಬಲ್ ಮತ್ತು ಪೇದೆಗಳು ಹಾಗೂ 1419 ಹೋಮ್ ಗಾಡ್ರ್ಸ್ ಗಳನ್ನು ಮತದಾನ ಕಾರ್ಯಕ್ಕೆ ನೇಮಕ ಮಾಡಿದೆ.ಜಿಲ್ಲೆಯಲ್ಲಿ 11 ಅಂತರ್ ರಾಜ್ಯ, 11 ಅಂತರ್ ಜಿಲ್ಲೆ ಸೇರಿದಂತೆ 36 ಚೆಕ್ ಪೋಸ್ಟ್ ಗಳು ಸಿ.ಸಿ.ಟಿವಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ.

         ಇದರ ಜೊತೆಗೆ ಶಾಂತಿಯುತ ಮತದಾನಕ್ಕಾಗಿ ಜಿಲ್ಲೆಯಲ್ಲಿ 1804 ರೌಡಿ ಶೀಟರ್ ಗಳ ಗುರುತಿಸಿ ಮುಚ್ಚಳಿಕೆ ಬರೆಸಿಕೊಂಡಿದೆ. 137 ಕಮ್ಯಾನಿಯಲ್ ಗುಂಡಾ, 492 ಕ್ರಿಮಿನಲ್ ಗಳು 16 ಜನ ವಿವಿಧ ಹಂತದಲ್ಲಿ ಗಲಾಟೆ ಮಾಡಿದವರು ಸೇರಿ ಒಟ್ಟಾರೆ 2547 ಜನರಿಂದ ಮುಚ್ಚಳಿಕೆ ಬರೆಸಿಕೊಂಡಿದೆ. ಇದಲ್ಲದೆ 42 ಜನರನ್ನು ಗಡಿಪಾರಿಗೆ ಶಿಫಾರಸ್ಸು ಮಾಡಿದೆ. 1445 ಶಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ಮತದಾನದ ಜಾಗೃತಿಗೆ ಕಳೆದ 20 ದಿನಗಳಿಂದ 50 ಕಡೆಗಳಲ್ಲಿ ರೂಟ್ ಮಾರ್ಚ್ ಮಾಡಿ ಜಾಗೃತಿ ಮೂಡಿಸಿದೆಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here