ನೇಕಾರರ ಅಭ್ಯುದಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. : ಆಯುಕ್ತ ರವಿ ಪ್ರಶಂಸೆ.

ಚಳ್ಳಕೆರೆ

         ರಾಜ್ಯದಲ್ಲಿ ಉಣ್ಣೆ ಕೈಮಗ್ಗ ನೇಕಾರಿಕೆಯನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ರೂಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ. ಪ್ರಾಥಮಿಕ ಉಣ್ಣೆ ಕೈಮಗ್ಗ ಸಂಘಗಗಳ ಆರ್ಥಿಕ ಚೇತರಿಕೆಗೆ ಒತ್ತು ಕೊಡಲು ನಿರ್ಧರಿಸಲಾಗಿದೆ. ಆಧುನಿಕತೆಯ ಅಂಶಗಳನ್ನು ಸಹ ಉಣ್ಣೆ ಕೈಮಗ್ಗದ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ರಾಜ್ಯ ಜವಳಿ ಅಭಿವೃದ್ಧಿ ಆಯುಕ್ತರು, ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಆರ್.ರವಿ ತಿಳಿಸಿದರು.

       ರಾಜ್ಯದಲ್ಲಿ ಚಳ್ಳಕೆರೆಯ ಉಣ್ಣೆ ಉತ್ಪಾದನಾ ಘಟಕ ತನ್ನದೇಯಾದ ವಿಶೇಷ ಕಾರ್ಯಚಟುವಟಿಕೆಗಳ ಮೂಲಕ ಖ್ಯಾತಿಯಾಗಿದ್ದು, ಕೈಮಗ್ಗ ನೇಕಾರರ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ. ಈ ಘಟಕ ಮತ್ತಷ್ಟು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪರಿಶ್ರಮವನ್ನು ವಹಿಸಬೇಕು. ಘಟಕದ ಸರ್ವತೋಮುಖ ಬೆಳವಣಿಗೆಗೆ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

       ಅವರು, ಶನಿವಾರ ಇಲ್ಲಿನ ಎ.ಜಿ.ರಸ್ತೆಯಲ್ಲಿರುವ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಾರಾಟ ಮಂಡಳಿ ನಿಯಮಿತ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಣ್ಣೆ ಕೈಮಗ್ಗೆ ಮಾರಾಟ ಮಳಿಗೆಗೆ ಬೇಟಿ ನೀಡಿ ಮಾತನಾಡಿದರು. ಕಳೆದ ಕೆಲವು ವರ್ಷಗಳಿಂದ ಜನರ ಮಾನಸದಿಂದ ದೂರವಾಗುತ್ತಿದ್ದ ಉಣ್ಣೆ ಕೈಮಗ್ಗ ನೇಕಾರಿಕೆಗೆ ಹೊಸ ಸ್ಪರ್ಶವನ್ನು ಕೊಟ್ಟ ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಕೈಮಗ್ಗ ನೇಕಾರಿಗೆ ಹಲವಾರು ರೀತಿಯ ಉತ್ತೇಜನವನ್ನು ನೀಡಲಾಗಿದೆ. ಪ್ರಸ್ತುತ ಉಣ್ಣೆ ಕೈಮಗ್ಗ ನೇಕಾರಿಕೆಯನ್ನು ಲಾಭದಾಯಕವಾಗುವ ದೃಷ್ಠಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಉಣ್ಣೆ ರಗ್ಗು, ಶಾಲು ಮುಂತಾದವುಗ¼ನ್ನು ಉತ್ಪಾದಿಸಲು ಸೂಚನೆ ನೀಡಲಾಗಿದ್ದು, ಯೋಜನೆ ಸಿದ್ದಗೊಳಿಸುವಂತೆ ತಿಳಿಸಲಾಗಿದೆ ಎಂದರು.

        ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಾರಾಟ ಮಂಡಳಿ ನಿಯಮಿತ ರಾಜ್ಯಾಧ್ಯಕ್ಷ ಎನ್.ಜಯರಾಂ ಮಾತನಾಡಿ, ಉಣ್ಣೆ ಕೈಮಗ್ಗ ನೇಕಾರಿಗೆ ಇತ್ತೀಚಿನ ದಿನಗಳಲ್ಲಿ ನಷ್ಟದತ್ತವಾಲುತ್ತಿದೆ ಎಂಬ ಮನೋಭಾವನೆ ನೇಕಾರರಲ್ಲಿ ಬೆಳೆಯುತ್ತಿದೆ. ಆದರೆ, ಮಹಾಮಂಡಳಿ ಈಗಾಗಲೇ ಅನೇಕ ಉಪಯುಕ್ತ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವನ್ನು ತಂದು ನೇಕಾರರು ನೆಮ್ಮದಿ ಜೀವನ ನಡೆಸುವಂತಹ ವಾತಾವರಣವನ್ನು ನಿರ್ಮಿಸಿದೆ.

           ಉಣ್ಣೆ ಮತ್ತು ಉಣ್ಣೆ ನೂಲು ಪಡೆಯಲು ಬೇರೆ ಬೇರೆ ನಗರಗಳಿಗೆ ಭೇಟಿ ನೀಡಬೇಕಾಗಿದ್ದ ನೇಕಾರರಿಗೆ ಚಳ್ಳಕೆರೆಯ ಉಣ್ಣೆ ಕೈಮಗ್ಗ ಸಹಕಾರ ಸಂಘದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ನೇಕಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಇತ್ತೀಚೆಗೆ ತಾನೇ ಉಣ್ಣೆ ದಾರ ತೆಗೆಯುವ ಹೊಸ ತಾಂತ್ರಿಕತೆಯಿಂದ ಕೂಡಿದ ಯಂತ್ರವನ್ನು ಖರೀದಿಸಿದ್ದು, ಅದು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ. ರಾಜ್ಯದ ನೇಕಾರರ ಹಿತದೃಷ್ಠಿಯಿಂದ ಅನೇಕ ಮಾದರಿ ಯೋಜನೆಗಳನ್ನು ಸಹ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಉಣ್ಣೆ ಕೈಮಗ್ಗ ಮಾರಾಟ ಸಂಕೀರಣ ಕಟ್ಟಡ ಮತ್ತು ಮಾರುಕಟ್ಟೆ ಕಟ್ಟಡಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಆಯುಕ್ತರನ್ನು ಮನವಿ ಮಾಡಿದರು.

          ಕಾರ್ಯಕ್ರಮದಲ್ಲಿ ಪಾತಲಿಂಗಪ್ಪ ಮಾಹಿತಿ ನೀಡಿ, ಕಳೆದ ಸುಮಾರು 15 ವರ್ಷಗಳಿಂದ ಮಹಾಮಂಡಳಿ ನೇಕಾರರ ಸಮುದಾಯಕ್ಕೆ ಉಪಯುಕ್ತವಾಗುವಂತಹ ಯೋಜನೆ ರೂಪಿಸಿದೆ. ಕಳೆದ ಎರಡು ತಿಂಗಳ ಹಿಂದೆ ಹೊಸ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎನ್.ಜಯರಾಮ್, ಮಾಜಿ ಅಧ್ಯಕ್ಷ ಸೂರನಹಳ್ಳಿ ಕೆ.ಜಗದೀಶ್ ಮಾರ್ಗದರ್ಶನದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

           ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ಮಹಾಮಂಡಳಿಯ ನಿರ್ದೇಶಕರಾದ ಕೆ.ಎಸ್.ಜಗನ್ನಾಥ, ಪಿ.ನಂಜುಡಪ್ಪ, ಚಂದ್ರಣ್ಣ, ಗೋವಿಂದಪ್ಪ, ಶೇಖರಪ್ಪ, ಡಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಅಜ್ಜಪ್ಪ, ಈ. ಪರಶುರಾಮಗೌಡ, ಪಿ.ಮಂಜುನಾಥ, ನಿರ್ಮಿತಿ ಕೇಂದ್ರ ಇಂಜಿನಿಯರ್ ಮುದ್ದಪ್ಪ, ಸಹ ಕಾರ್ಯದರ್ಶಿ ಗಂಗಾಧರ, ಜವಳಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್, ಜೆ.ಡಿ.ಯೋಗೇಶ್, ಜಿಲ್ಲಾ ಉಪನಿರ್ದೇಶಕ ನೆಗ್ಲೂರ್, ಜೆ.ಡಿ.ಪರಪ್ಪ ಮುಂತಾದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap