ಸಿಂದಗಿ ಮಠದಲ್ಲಿ ಲಿಂ. ಸಿದ್ದಲಿಂಗ ಶ್ರೀಗಳ ಶ್ರದ್ಧಾಂಜಲಿ ಸಭೆ

0
12

ಹಾವೇರಿ :

          ಗದುಗಿನ ತೋಂಟದಾರ್ಯ ಮಠದ ಲಿಂ. ಸಿದ್ಧಲಿಂಗ ಸ್ವಾಮೀಜಿಯ ಸಮಾಜಮುಖಿ ಕಾರ್ಯಗಳು ಮತ್ತು ಕನ್ನಡ ಭಾಷೆಯ ಉಳಿಸುವುದಕ್ಕಾಗಿ ಮಾಡಿದ ಹೋರಾಟಗಳನ್ನು ಮುಂದುವರೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದ್ದು, ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ತಮ್ಮಲ್ಲೆರ ಸಹಾಯ ಸಹಕಾರ ಬೇಕಾಗಿದೆ ಎಂದು ಗದುಗಿನ ತೋಂಟಾದಾರ್ಯ ಮಠದ ನೂತನ ಪೀಠಾಧಿಪತಿ ಜಗದ್ಗುರು ಡಾ|| ತೋಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

       ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿದ್ದ ಲಿಂ. ಸಿದ್ದಲಿಂಗ ಶ್ರೀಗಳ ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

       ವ್ಯಕ್ತಿಯಲ್ಲಿನ ಪ್ರತಿಭೆಯನ್ನು ಗುರುತಿಸುವ ಮೌಲಿಕ ಗುಣವನ್ನು ಹೊಂದಿದ್ದ ಶ್ರೀಗಳು ಕನ್ನಡ ನಾಡಿಗೆ ಹಲವಾರು ಲೇಖಕರನ್ನು ನೀಡಿದ್ದಾರೆ. ಲಿಂಗಾಯತ ಪ್ರಗತಿಶೀಲ ಅಧ್ಯಯನ ಸಂಸ್ಥೆ ಮೂಲಕ ನೂರಾರು ಕನ್ನಡದ ಪುಸ್ತಕಗಳನ್ನು ಪ್ರಕಟಿಸಿ ವಚನ ಸಾಹಿತ್ಯ ಮತ್ತು ಬಸವ ತತ್ವಗಳ ಪ್ರಚಾರದ ಪರಂಪರೆಯ ಆಸ್ಮಿತೆಗೆ ಸಾಕ್ಷಿಯಾಗಿದ್ದರು ಎಂದು ಹೇಳಿದರು.

        ಇದೇ ಸಂದರ್ಭದಲ್ಲಿ ಸಿಂದಗಿಮಠದ ಲಿಂ.ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆ ದರ್ಶನ ಪಡೆದರು. ಮಠದಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು.

       ಸಮಾರಂಭದಲ್ಲಿ ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ಮೊಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಬೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ನವಲಗುಂದದ ಬಸವಲಿಂಗ ಸ್ವಾಮೀಜಿ, ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಬೆಳಗಾವಿಯ ಶಿವಬಸವ ದೇವರು, ತೋಂಟದಾರ್ಯಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಶಿವಬಸಯ್ಯ ಆರಾದ್ಯಮಠ. ಸಿಂದಗಿಮಠ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ, ಅಂಕಲಗಿ ಶಾಸ್ತ್ರೀಜಿ, ಜಿ.ಎಸ್ ಭಟ್, ಎಂ.ಎಸ್ ಹಿರೇಮಠ ವೈದಿಕ ಪಾಠಶಾಲೆಯ ನೂರಾರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here