ಫಲಾನುಭವಿಗಳ ಆಯ್ಕೆ ಗೊಂದಲ: ಸಭೆ ಮುಂದಕ್ಕೆ

ಹರಪನಹಳ್ಳಿ:

        ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿ ಶನಿವಾರ ನಿಗದಿಯಾಗಿದ್ದ ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಮುಂದುಡಲ್ಪಟ್ಟಿತ್ತು.

      19 ಸದಸ್ಯರನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಯಲ್ಲಿ ಕೆಲವೊಂದು ಸದಸ್ಯರು ಸಾಮಾನ್ಯ ಸಭೆಗೆ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸಿದರು. ಹೀಗಾಗಿ ಎಲ್ಲ ಸದಸ್ಯರು ಪಂಚಾಯಿತಿಗೆ ಬಾರದಿರುವುದರಿಂದ ಕೋರಂ ಕೊರತೆ ಉಂಟಾಗಿ ಸಭೆ ಮುಂದುಡಲಾಯಿತು.
ಸದಸ್ಯ ಸಣ್ಣ ನಿಂಗಪ್ಪ ಮಾತನಾಡಿ, ಬಸವ ವಸತಿ ಯೋಜನೆ ಅಡಿ ಗ್ರಾಮ ಪಂಚಾಯಿತಿಗೆ ಒಟ್ಟು 86 ಮನೆಗಳು ಮಂಜೂರಾಗಿವೆ.

       ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳಲ್ಲಿ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಫಲಾನುಭವಿಗಳ ಸಂಖ್ಯೆ ಅಧಿಕವಿದ್ದು, ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಿತ್ತು. ಆದರೆ ಮಾಜಿ ಅಧ್ಯಕ್ಷೆಯ ಪತಿ ಹಾಗೂ ಅವರ ಬೆಂಬಲಿಗರು ಏಕಾಏಕಿ ಗೊಂದಲ ಸೃಷ್ಟಿಸಿ ಸದಸ್ಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.

       ನಿಯಮ ಮೀರಿ ಮನೆ ಹಂಚಿಕೆ: ಬಸವ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ನಿಯಮ ಗಾಳಿಗೆ ತೂರಿ ತಮ್ಮ ಹಿಂಬಾಲಕರಿಗೆ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಅಧ್ಯಕ್ಷೆ ಐ.ಎಂ.ಚೈತ್ರಾ ಹಾಗೂ ಕೆಲವೊಂದು ಸದಸ್ಯರು ಈ ಸಂದರ್ಭದಲ್ಲಿ ಆರೋಪಿಸಿದರು.

        ಕೆಲವೊಂದು ಸದಸ್ಯರು ಮಾಡುವ ಆರೋಪಗಳು ನಿರಾದಾರವಾಗಿದೆ. ಮನೆ ಹಂಚಿಕೆ ಕುರಿತಂತೆ ಫಲಾನುಭವಿಗಳ ಆಯ್ಕೆ ಮಾಡಿಲ್ಲ ಹಾಗೂ ಡಾಟಾ ಎಂಟ್ರಿ ಆಗಿಲ್ಲ. ಎರಡು ಸಭೆಗೆ ಅಡ್ಡಿಪಡಿಸಿರುವುದು ಅಭಿವೃದ್ಧಿ ಕೆಲಸಕ್ಕೆ ಅಡಚಣೆ ಆಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಮನೆಹಂಚಿಕೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ರಮೇಶ್ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap