ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸಮ್ಮಿಶ್ರ ಪಕ್ಷದ ಚುನಾವಣಾ ಸಮಾವೇಶ

0
2

ಕೊರಟಗೆರೆ

       ಪ್ರಧಾನ ಮಂತ್ರಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಹಾಗೂ ಕಾಂಗ್ರೆಸ್ ಮುಕ್ತ ಭಾರತಎಂದು ಹೇಳುವ ಪ್ರಧಾನಮಂತ್ರಿಗೆ ಯಾವ ನೈತಿಕತೆ ಇದೆಯೇ ಇದೇ ಮೋದಿಯ ವಿರುದ್ದರಫೆಲ್‍ಯುದ್ದವಿಮಾನ ಹಗರಣದ ಬಗ್ಗೆ ರಾಹುಲ್‍ಗಾಂಧಿ ಪ್ರಸ್ತಾಪ ಮಾಡಿದಾಗಇದನ್ನು ಲೆಕ್ಕಿಸದೇ ನನ್ನ 60 ವರ್ಷ ರಾಜಕೀಯ ಜೀವನದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಯುದ್ದ ವಿಮಾನ ಖರೀದಿ ವಿಚಾರವನ್ನು ಅಧಿವೇಶನಕ್ಕೆ ತರದೇ ಮುಂಜೂರಾತಿ ನೀಡಿದ ಭ್ರಷ್ಟ ಪ್ರಧಾನಿಯಿಂದ ನಾವು ನೀತಿ ಪಾಠ ಕೇಳುವ ಪರಿಸ್ಥಿತಿ ಬಂದಿದೆಎಂದು ಮಾಜಿ ಪ್ರಧಾನ ಮಂತ್ರಿ ದೇವೆಗೌಡರವರು ಮೋದಿ ವಿರುದ್ದ ಲೇವಡಿ ಮಾಡಿದರು.

       ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜಿನಲ್ಲಿ ಕಾಂಗ್ರೆಸ್ ಮತ್ತುಜೆಡಿಎಸ್‍ನ ಸಮ್ಮಿಶ್ರ ಪಕ್ಷದಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಭ್ರಷ್ಟಾಚಾರ ಮುಕ್ತ ಎಂದು ಪ್ರತಿಬಿಂಬಿಸಿಕೊಳ್ಳುವ ಬಿಜೆಪಿ ರಫೆಲ್ ಹಗರಣವನ್ನು ವಿರೋದ ಪಕ್ಷಗಳ ವಿರೋದಗಳ ನಡುವೆಯೂಅಧಿವೇಶನಕ್ಕೆತರದೇ ಮುಂಜೂರಾತಿ ನೀಡಿದ ಬಿಜೆಪಿಯವರಿಂದ ನಾವು ನೀತಿಪಾಠ ಕೇಳಬೇಕಿಲ್ಲ ಎಂದು ವ್ಯಂಗ್ಯವಾಡಿದರು.

      ರಪೆಲ್‍ ಯುದ್ದ ವಿಮಾನ ಹಗರಣ 30 ಸಾವಿರಕೋಟಿಗೂ ಹೆಚ್ಚು ಮೊತ್ತಾದ್ದಾಗಿದ್ದು ಇದರ ಬಗ್ಗೆ ರಾಹುಲ್‍ ಗಾಂಧಿ ತೀವ್ರ ವಿರೋದ ವ್ಯಕ್ತಪಡಿಸಿದರೂ ಲೆಕ್ಕಿಸದೇ ಅಧಿವೇಶನಕ್ಕೆ ತರದೇ ಮುಂಜೂರಾತಿ ಮಾಡಿಕೊಂಡಿರುವುದು ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಕಂಡರಿಯದ ಘಟನೆಯಾಗಿದ್ದು , ದೇಶದಲ್ಲಿ ಕೇಂದ್ರದಲ್ಲಾಗಿರಲಿ ಇಲ್ಲವೇರಾಜ್ಯ ಸರ್ಕಾರದಲ್ಲಾಗಲಿ ಯಾವುದೇ ಒಂದು ದೊಡ್ಡ ಮೊತ್ತದ ಖರೀದಿಗೆ ಸಂಬಂದಿಸಿದಂತೆ ಒಂದು ಒಪ್ಪಂದವನ್ನು ಅಧಿವೇಶನಕ್ಕೆತರದೇ ಮುಂಜೂರಾತಿ ತಂದಿರುವ ಮೋದಿಯವರ ಧೋರಣೆ ಖಂಡನೀಯ ಎಂದು ಅಸಮದಾನ ವ್ಯಕ್ತಪಡಿಸಿದರು.

      ಈ ಹಿಂದೆ ವಕ್ಕಲಿಗ ಹಾಗೂ ಲಿಂಗಾಯಿತ ಎರಡು ಪ್ರಬಲ ಸಮುದಾಯಗಳಿಗೆ ರಾಜಕೀಯ ಮತ್ತು ವಿವಿಧ ಸೌಲಭ್ಯಗಳು ದೊರೆಯುತ್ತಿತ್ತು  , ಅದರೆ ನಾನು ಪ್ರಧಾನಮಂತ್ರಿಯಾಗಿದ್ದ ಸಂದರ್ಬದಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೂ ಸಹ ಮೀಸಲಾತಿಯನ್ನು ನೀಡಿಸಿ ಸಾಮಾಜಿಕ ನ್ಯಾಯಕ್ಕೆ ಬದ್ದನಾಗಿ ಕೆಲಸ ಮಾಡಿದ್ದೇನೆ, ನಾಯಕ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಅಂದಿನ ಪ್ರಧಾನ ಮಂತ್ರಿಚಂದ್ರಶೇಖರ್‍ರವರಿಗೂ ಮನವಿ ನೀಡಿ ಹೋರಾಟ ಮಾಡಿ ಜಾರಿಗೊಳಿಸಲು ಪ್ರಮುಖ ಪಾತ್ರ ವಹಿಸಿಕೊಂಡದ್ದು ನೆನೆಸಿಕೊಳ್ಳಬೇಕು ಎಂದರಲ್ಲದೇ, ಬದಲಾದಂತರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲೂ ಮೈತ್ರಿಯ ಮೂಲಕ ಕೋಮುವಾದಿ ಬಿಜೆಪಿಯನ್ನುದೂರವಿಡುವಉದ್ದೇಶದಿಂದರಾಜ್ಯದಲ್ಲಿಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ಮೈತ್ರಿಅಭ್ಯರ್ಥಿಯನ್ನುಗೆಲ್ಲಿಸುವ ಮೂಲಕ ಬಿಜೆಪಿಗೆತಕ್ಕಉತ್ತರ ನೀಟಬೇಕುಎಂದರು.

       ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿತುಮಕೂರುಜಿಲ್ಲೆಸೇರಿದಂತೆರಾಜ್ಯದಲ್ಲಿ ಅನಿವಾರ್ಯವಾಗಿಜೆಡಿಎಸ್ ಮತ್ತುಕಾಂಗ್ರೆಸ್ ಪಕ್ಷಗಳು ಕೋಮುವಾದಿ ಬಿಜೆಪಿ ವಿರುದ್ದ ಹೋರಾಡಲುಒಂದಾಗಿದೆ, ಇದೇರೀತಿಯಾಗಿರಾಜ್ಯದಲ್ಲಿ 2018 ರ ವಿಧಾನ ಸಭಾಚುನಾವಣೆಯಲ್ಲಿಯಾವ ಪಕ್ಷಕ್ಕೂ ಬಹುಮತ ಬರದ ಹಿನ್ನೆಲೆಯಲ್ಲಿಕಾಂಗ್ರೆಸ್ ಮತ್ತುಜೆಡಿಎಸ್‍ಪಕ್ಷಗಳು ಸರ್ಕಾರರಚನೆ ಮಾಡಿ ಬಡವರ ಮತ್ತುರೈತರ ಪರ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ನೆರವಿಲ್ಲದೆ ಕೈಗೊಳ್ಳುತ್ತಿದ್ದೇವೆ, ತುಮಕೂರು ಲೋಕಸಭಾಕ್ಷೇತ್ರ ಕ್ಕೆ ರಾಜ್ಯದ ಎಕೈಕ ಮಾಜಿ ಪ್ರಧಾನಿಗಳಾದ ದೇವೇಗೌಡರವರು ನಮ್ಮೆಲ್ಲರಒತ್ತಡಕ್ಕೆ ಸ್ಪರ್ದಿಸಿದ್ದು ಒಬ್ಬ ಹಿರಿಯ ಮುಸ್ಸದಿ ರಾಜಕಾರಣಿಯನ್ನು ರೈತಪರ ಚಿಂತಕರನ್ನು ಹಾಗೂ ನೀರಾವರಿ ಹೋರಾಟಗಾರರನ್ನು ಲೋಕಸಭಾ ಸದಸ್ಯರನ್ನಾಗಿಆಯ್ಕೆಮಾಡುವಕರ್ತವ್ಯ ನಮ್ಮೆಲ್ಲರ ಮೇಲಿದೆಎಂದರು.

         ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ದೇವೇಗೌಡರು ತುಮಕೂರಿಗೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ, ಬಿಜೆಪಿ ರವರ ದುರಾಡಳಿತವನ್ನು ತಡೆಯಲು ದೇವೇಗೌರಂತಹ ಸಮರ್ಥ ಲೋಕಸಭಾ ಸದಸ್ಯರು ಅವಶ್ಯಕವಾಗಿದ್ದು ಅವರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸಬೇಕು ಮತ್ತುದಲಿತ, ಅಲ್ಪಸಂಖ್ಯಾತ ಹಾಗೂ ಸಂವಿದಾನ ವಿರೋದಿ ಪಕ್ಷವಾದ ಬಿಜೆಪಿ ಪರ ಅಭ್ಯರ್ಥಿ ಬಸವರಾಜುರವರನ್ನು ಸೋಲಿಸಬೇಕು ಎಂದರು.

       ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್‍ ಕಾಂತರಾಜು, ಮಾಜಿ ಶಾಸಕ ಆರ್,ನಾರಾಯಣ್, ಜಿ.ಪಂ ಸದಸ್ಯರುಗಳಾದ ಪ್ರೇಮಾ, ನಾರಾಯಣಮಾರ್ತಿ ಶಿವರಾಮಯ್ಯ, ಕೆ.ಪಿ.ಸಿ.ಸಿ ಸದಸ್ಯ ಜಿ.ವೆಂಕಟಾಚಲಯ್ಯ, ಜಿಲ್ಲಾಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಜಿಲ್ಲಾಕಾಂಗ್ರೆಸ್‍ಅಧ್ಯಕ್ಷರಾಮಕೃಷ್ಣ, ಕೆ.ಪಿ.ಸಿ.ಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷಅರಕೆರೆ ಶಂಕರ್, ಜೆಡಿಎಸ್‍ ಕಾಯಾದ್ಯಕ್ಷ ನರಸಿಂಹರಾಜು, ಯುವ ಅಧ್ಯಕ್ಷ ಕೊಡ್ಲಹಳ್ಳಿ ವೆಂಕಟೇಶ್, ಯಾದವ ಜಿಲ್ಲಾಧ್ಯಕ್ಷ ಚಂದ್ರಶೇಖರ್‍ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here