ಸಂವಿಧಾನ ದಿನಾಚರಣೆ

0
20

 ಹಾವೇರಿ 

           ಇಂದಿನ ಯುವ ಪೀಳಿಗೆಗೆ ಸಂವಿಧಾನದ ಸಂಪೂರ್ಣವಾದ ತಿಳುವಳಿಕೆಯ ಕೊರತೆ ಇದ್ದು, ಸಂವಿಧಾನ ಬಗ್ಗೆ ಆಳವಾದ ಅಧ್ಯಯನ ಮಾಡುವುದು ಅವಶ್ಯವಾಗಿದೆ ಎಂದು ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ಮಲ್ಲಿಕಾರ್ಜುನ ಮಠದ ಹೇಳಿದರು. ನೆಹರು ಯುವ ಕೇಂದ್ರ, ಆಶಾಕಿರಣ ರೂರಲ್‍ಡೆವಲ್ಪ್‍ಮೆಂಟ ಸೊಸೈಟಿ (ರಿ) ಚಿಕ್ಕಮುಗದೂರ ಹಾಗೂ ಪರಿವರ್ತನಾ ಪದವಿ ಪೂರ್ವ ಮಹಾವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನವನ್ನು ಆಚರಣೆಯ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

           ಸಂವಿಧಾನ ಸರ್ವ ಜನರ ಆಸ್ತಿ.ಅದನ್ನು ಉಳಿಸಿ ಬೆಳಸಬೇಕಾಗಿದೆ.ಭಾರತದಲ್ಲಿ ಸ್ವಾತಂತ್ರ, ಸಮಾನತೆ ಹಾಗೂ ಭಾತೃತ್ವ ಉಳಿಯಬೇಕಾದರೆ, ಸಂವಿಧಾನದ ತತ್ವಗಳನ್ನು ನಾವೇಲರೂ ಅಳವಡಿಸಿಕೊಳ್ಳಬೇಕಾಗಿದೆ.ಪ್ರಜಾಪ್ರಭುತ್ವದ ಯಶಸ್ಸು ಹಾಗೂ ಸಂವಿಧಾನದ ಉಳಿವು ನಮ್ಮೇಲ್ಲರ ಜವಾಬ್ದಾರಿ ಜೊತೆಗೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದು ಹೇಳಿದರು.

           ಆಶಾಕಿರಣ ಸಂಸ್ಥೆಯ ಅಧ್ಯಕ್ಷರಾದ ಮುತ್ತುರಾಜ ಮಾದರ ಪ್ರಾಸ್ತವಿಕವಾಗಿ ಮಾತನಾಡಿ, ನಾವು ಮೂಲಭೂತ ಹಕ್ಕುಗಳನ್ನು ಪಡೆಯುವುದರಜೊತೆಗೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕಾಗಿದೆ.ಭಾರತದ ನವ ನಿರ್ಮಾಣ ಹಾಗೂ ಅಭಿವೃದ್ಧಿದೃಷ್ಟಿಯಿಂದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ.ಯುವಕರು ಸಂವಿಧಾನವನ್ನು ಓದಿ, ಅರ್ಥೈಸಿಕೊಳ್ಳಬೇಕೆಂದು ಕರೆ ನೀಡಿದರು.
ವಕೀಲರಾದ ಶ್ರೀಮತಿ ಅನಿತಾ ಹೊನ್ನಪ್ಪನವರ ಇವರು ಉಪನ್ಯಾಸ ನೀಡಿ ನಮ್ಮ ಸಂವಿಧಾನ ಇಡೀ ವಿಶ್ವದಲ್ಲಿಯೇ ಅತಿದೊಡ್ಡದಾದ ಲಿಖಿತ ಸಂವಿಧಾನವಾಗಿದ್ದು, ವಿಶ್ವದ ಪ್ರಸಿದ್ಧ ರಾಜಕೀಯತಜ್ಞರಿಂದ ಅತ್ಯುತ್ತಮ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

          ಡಾ.ಬಿ.ಆರ್.ಅಂಬೇಡ್ಕರರವರಕರಡು ಸಮಿತಿಯ ಅಧ್ಯಕ್ಷರಾಗಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.ಡಾ.ಬಿ.ಆರ್. ಅಂಬೇಡ್ಕರರವರನ್ನು ಭಾರತ ಸಂವಿಧಾನ ಶಿಲ್ಪಿ, ಭಾರತ ಸಂವಿಧಾನ ಪಿತಾಮಹ ಎಂದು ಕರೆಯುತ್ತೇವೆಎಂದರು.ದಿನೇಶ ಸಂಯೋಜಕರು, ನೆಹರುಯುವಕೇಂದ್ರಇವರು ಮಕ್ಕಳೊಂದಿಗೆ ಸಂವಿಧಾನ ಕುರಿತು ಸಂವಾದ ನಡೆಸಿದರು.

           ಕೆ.ಜಿ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತಾಧಿಕಾರಿಗಳಾದ ಶ್ರೀಮತಿ ಸಿ.ಎನ್. ಮಾಳಿ, ಮಂಜುನಾಥ ಸಂಕಣ್ಣನವರ ,  ಪವಿತ್ರಾ ಹರಿಜನ ಶ್ರೀಮತಿ ಜಯಶ್ರೀ ಪವಾಡಿ ರಘುಕುಮಾರದೇವೂರ,ಸಿಬ್ಬಂದಿಯವರು ,ವಿದ್ಯಾರ್ಥಿಗಳು ಭಾಗವಹಿಸಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here