ಆರ್ಥಿಕ ನೀತಿಗಳ ಸಮರ್ಪಕ ಅನುಷ್ಠಾನದಿಂದ ಪ್ರಗತಿ

ದಾವಣಗೆರೆ:

    ರಾಷ್ಟ್ರೀಯ ಆರ್ಥಿಕ ನೀತಿಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಮಾತ್ರ ದೇಶವು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ದಾವಣಗೆರೆ ವಿವಿ ಕುಲಪತಿ ಎಸ್.ವಿ. ಹಲಸೆ ಅಭಿಪ್ರಾಯಪಟ್ಟರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ಆರ್ಥಿಕ ಒಕ್ಕೂಟಮ ದಾವಣಗೆರೆ ವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಸಂಯೋಜನೆಯೊಂದಿಗೆ ಅರ್ಥಶಾಸ್ತ್ರದ ಬೋಧನೆ ಮತ್ತು ಕಲಿಕೆ ವಿಷಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಆರ್ಥಿಕತೆಯ ಇತಿಹಾಸ, ತತ್ವಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದಲ್ಲದೇ, ಪ್ರಾದೇಶಿಕ, ರಾಷ್ಟ್ರೀಯ ಆರ್ಥಿಕ ನೀತಿ ಅರ್ಥ ಮಾಡಿಕೊಂಡಲ್ಲಿ ಅರ್ಥಶಾಸ್ತ್ರದ ಅಧ್ಯಯನ ಮಾಡುವುದಕ್ಕೆ ಸುಲಭವಾಗಲಿದೆ ಎಂದ ಅವರು, ದೇಶದಲ್ಲಿ ಕಿರು ಮತ್ತು ದೊಡ್ಡ ಆರ್ಥಿಕ ವಲಯಗಳಿದ್ದು, ಆರ್ಥಿಕ ಸ್ಥಿತಿಯಲ್ಲಿ ಸಣ್ಣ ವಲಯಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಉತ್ಪಾದನೆ, ಮಾರುಕಟ್ಟೆ, ಗ್ರಾಹಕರ ವಲಯ ಗುರುತಿಸುವ ಕಾರ್ಯ ನಡೆಯಬೇಕು ಎಂದರು.

     ವಿದ್ಯಾರ್ಥಿಗಳು ಆರ್ಥಶಾಸ್ತ್ರದ ತತ್ವ, ಅಂಶಗಳ ಜೊತೆಗೆ ಸದ್ಯದ ಸ್ಥಿತಿಗತಿ, ಯಾವ ರೀತಿಯಲ್ಲಿ ವಹಿವಾಟು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಹನ ಕೌಶಲ್ಯ ಹೊಂದಿ ಯಾವ ರೀತಿ ವ್ಯವಹಾರ ಮಾಡಬೇಕು. ಯಾವ ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ ಎನ್ನುವುದನ್ನು ತಿಳಿದುಕೊಂಡು ಭವಿಷ್ಯದ ಉಜ್ವಲದ ಕಡೆ ಸಾಗಬೇಕು ಎಂದು ಅವರು ಆಶಿಸಿದರು.

     ಕರ್ನಾಟಕ ಯೋಜನಾ ಮಂಡಳಿ ಸದಸ್ಯ ಪ್ರೊ.ಆರ್.ವಿ. ದಾಡಿಭಾವಿ ಮಾತನಾಡಿ, ವಿಶ್ವ ಬ್ಯಾಂಕ್ ಆರ್ಥಿಕ ಆಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ಶಾಲಾ, ಕಾಲೇಜು, ವಿವಿಯಲ್ಲಿ ಅರ್ಥಶಾಸ್ತ್ರ ಓದುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಿಕೊಡುವ ಮೂಲಕ ಅರ್ಥಶಾಸ್ತ್ರ ಹೆಚ್ಚಿನ ಸಂಖ್ಯೆಯಲ್ಲಿ ಓದುವಂತೆ ಮಾಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

     ಎಫ್‍ಸಿಯುಟಿಎಕೆ ಮಾಜಿ ಅಧ್ಯಕ್ಷ ಪ್ರೊ. ಸಿ.ಎಚ್. ಮುರುಗೇಂದ್ರಯ್ಯ ಮಾತನಾಡಿ, ಜಗತ್ತಿನಲ್ಲಿ ಆರ್ಥಿಕತೆ (ಹಣಕಾಸು)ಗೆ ಇರುವಷ್ಟು ಪ್ರಾಧಾನ್ಯತೆ ಬೇರಾವುದಕ್ಕೂ ಇಲ್ಲ. ಆದರೂ, ಅರ್ಥಶಾಸ್ತ್ರ ಬೋಧನೆ ಮತ್ತು ಕಲಿಕೆಗೆ ಇಂದಿನ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಆರ್ಥಶಾಸ್ತ್ರ ತುಸು ಕಷ್ಟದ ವಿಷಯವಾದರೂ ಅತ್ಯಂತ ಅವಶ್ಯವಾದದ್ದು. ಅಲ್ಲದೆ, ಅರ್ಥಶಾಸ್ತ್ರ ಪಠ್ಯ ಹಳೇ ಪದ್ದತಿಯಲ್ಲಿಯೇ ಇದ್ದು, ಕಾಲಮಾನಕ್ಕೆ ತಕ್ಕಂತೆ ಒಂದಿಷ್ಟು ಅಪ್‍ಡೆಟ್ ಆಗಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ಯುವಜನತೆಯ ಹೊಸ ಹೊಸ ಐಡಿಯಾ ಬಳಸಿಕೊಂಡು ಅರ್ಥಶಾಸ್ತ್ರದಲ್ಲಿ ಅಪ್‍ಡೆಟ್ ಮಾಡುವ ಮುಖೇನಾ ಅರ್ಥಶಾಸ್ತ್ರ ಜೀವಂತವಾಗಿರಿಸುವ ಕಾರ್ಯ ಮಾಡಬೇಕಿದೆ ಎಂದ ಅವರು, ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಭಾಗಗಳು ಒಂದಕ್ಕೊಂದು ಪೂರಕವಾಗಿವೆ. ಆದರೆ, ಅವುಗಳ ನಡುವಿನ ಭಿನ್ನಾಭಿಪ್ರಾಯ, ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯೋನ್ಮುಖರಾಗಬೇಕು ಎಂದರು.

     ಇಂದಿನ ದಿನಗಳಲ್ಲಿ ನಾವು ಕಲಿಯುವ ವಿಷಯವೇ ಬೇರೆ ನಾವು ಮಾಡುವ ಉದ್ಯೋಗವೇ ಬೇರೆ ಎಂಬಂತಾಗಿದೆ. ಆದ್ದರಿಂದ ಒಕ್ಕೂಟ ಇದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಶಾಸ್ತ್ರವನ್ನು ಉತ್ತನ ಮಟ್ಟಕ್ಕೆ ಕೊಂಡ್ಯೋಯ್ಯುವಂತಾಗಲಿ ಎಂದು ಅವರು ಆಶಿಸಿದರು.

    ನವದೆಹಲಿಯ ಐಇಎ ಉಪಾಧ್ಯಕ್ಷ ಪ್ರೊ.ಬಿ.ಪಿ. ಚಂದ್ರಮೋಹನ್ ಮಾತನಾಡಿದರು. ದಾವಣಗೆರೆ ವಿವಿ ಕಲಾನಿಕಾಯದ ಡೀನ್ .ಬಿ.ಪಿ. ವೀರಭದ್ರಪ್ಪ, ಶ್ರೀನಿವಾಸ ಗೌಡ, ಟಿ.ಆರ್. ಮಂಜುನಾಥ್, ಎಸ್.ಟಿ. ಬಾಗಲಕೋಟೆ, ಡಾ.ಕೆ. ಷಣ್ಮುಖ, ಡಾ.ಕೆ.ಆರ್. ಭೋಗೇಶ್ವರಪ್ಪ, ಡಾ. ಭೀಮಣ್ಣ ಬಿ. ಸುಣಗಾರ್, ಡಾ.ಆರ್. ತಿಪ್ಪಾರೆಡ್ಡಿ, ಶಶಿಕಲಾ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap