ಮತದಾನ ಜಾಗೃತಿಗಾಗಿ ಆಟೋ ಓಡಿಸಿದ ಡಿಸಿ!

ಬಳ್ಳಾರಿ

         ಮತದಾನ ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಹಾಗೂ ಮತದಾನದ ಮಹತ್ವ ಸಾರುವ ಉದ್ದೇಶದಿಂದ ನಗರದಲ್ಲಿ ಶುಕ್ರವಾರ ನಡೆದ ಆಟೋ ರ್ಯಾಲಿ ಗಮನಸೆಳೆಯಿತು.ಮತದಾನ ಮಾಡುವವನೇ ಮಹಾಶೂರ ಎನ್ನುವಂತೆ ಮತದಾನ ಮಹತ್ವ ಸಂದೇಶ ಸಾರುವ ಈ ಆಟೋ ರ್ಯಾಲಿಗೆ ಮುನ್ಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್‍ಮನೋಹರ್ ಅವರು ಚಾಲನೆ ನೀಡಿ ಸ್ವತಃ ಆಟೋವನ್ನು ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಓಡಿಸಿದರು. ಇವರಿಗೆ ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಸಾಥ್ ನೀಡಿದ್ದು ವಿಶೇಷವಾಗಿತ್ತು.

       ಈ ಆಟೋ ರ್ಯಾಲಿಯಲ್ಲಿ 70ಕ್ಕೂ ಹೆಚ್ಚು ಆಟೋಗಳು ಪಾಲ್ಗೊಂಡಿದ್ದವು. ಆಟೋಗಳಿಗೆ ಮತದಾನದ ಮಹತ್ವ ಸಾರುವ ಸ್ಟಿಕ್ಕರ್‍ಗಳನ್ನು ಅಂಟಿಸಲಾಗಿತ್ತು.

        ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಈ ಮತದಾನ ಜಾಗೃತಿ ಮೂಡಿಸುವ ಆಟೋ ರ್ಯಾಲಿಯು ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ನಡೆಯಿತು.ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ನೈತಿಕ ಮತದಾನಕ್ಕೆ ಒತ್ತು ನೀಡುವ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಈ ಆಟೋ ಜಾಗೃತಿ ರ್ಯಾಲಿ ಆಯೋಜಿಸಲಾಗಿದೆ ಎಂದರು.

       ಮತದಾನ ಮಹತ್ವ ಹಾಗೂ ಮತದಾರರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಳವಾಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಆರ್‍ಟಿಒ ಕಚೇರಿಯಲ್ಲಿ ಮತದಾನ ಜಾಗೃತಿ:

    ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಕೆಲಸದ ನಿಮಿತ್ತ ಆಗಮಿಸುವ ವಾಹನದ ಮಾಲೀಕರಿಗೆ ಹಾಗೂ ಅರ್ಜಿದಾರರಿಗೆ ಮತದಾನದ ಮಹತ್ವ ಕುರಿತು ಹಾಗೂ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ಶುಕ್ರವಾರ ನಡೆಯಿತು.ಈ ಕಚೇರಿಗೆ ಆಗಮಿಸಿದ ವಾಹನ ಮಾಲೀಕರಿಗೆ ಮತ್ತು ಅರ್ಜಿದಾರರಿಗೆ ಮತದಾನದ ಮಹತ್ವದ ಸಂದೇಶವಿರುವ ಕರಪತ್ರಗಳನ್ನು ವಿತರಿಸಲಾಯಿತು. ತಪ್ಪದೇ ಮತದಾನ ಮಾಡಿ ಎಂದು ಅವರಿಗೆ ತಿಳಿಹೇಳಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap