ಭಟ್ಟರಹಳ್ಳಿಯಲ್ಲಿ ದಸರಾ ಮಹೋತ್ಸವಕ್ಕೆ ಭಕ್ತ ಪೂರ್ವಕ ತೆರೆ

0
8

ಹುಳಿಯಾರು

        ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಕಳೆದವಾರ ಆರಂಭವಾದ ಶ್ರೀ ಗುರು ಸಿದ್ಧರಾಮೇಶ್ವರಸ್ವಾಮಿಯವರ ದಸರಾ ಮಹೋತ್ಸವಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಭಕ್ತಿ ಪೂರ್ವಕ ತೆರೆ ಎಳೆಯಲಾಯಿತು.

         ಯಳನಡು ಸಿದ್ಧರಾಮೇಶ್ವರಸ್ವಾಮಿ ಹಾಗೂ ಆ ಗ್ರಾಮದ ಗ್ರಾಮದೇವತೆ ಕರಿಯಮ್ಮ ದೇವರು ಹಾಗೂ ಶ್ರೀ ಬಂದಮ್ಮ ದೇವಿಗಳನ್ನು ಬರಮಾಡಿಕೊಂಡು ಹಣ್ಣುಕಾಯಿ ಸೇವೆ, ಗಂಗಮ್ಮನ ಕೆರೆ ಸೇವೆ, ಆರತಿ ಮಹೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಫಲಾಹಾರ ಸೇವೆ, ಬಿಲ್ವವೃಕ್ಷ ವಾಹನೋತ್ಸವ, ಚಂದ್ರಮಂಡಲೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನಡೆಸಲಾಯಿತು.

         ದಸರಾ ಮಹೋತ್ಸವದ ಅಂಗವಾಗಿ ಪ್ರತಿ ದಿನ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಸವನ ಉತ್ಸವ, ಫಲಾಹಾರ ಸೇವೆ ಅಂಗೀಕರಿಸುವುದು ಹಾಗೂ ಸಂಜೆ ಫಲಾಹಾರ ಸೇವೆ ನಂತರ ಅವಭೃತಸ್ನಾನ ನಡೆಮುಡಿ ಉತ್ಸವದೊಂದಿಗೆ ಮೂಲಸ್ಥಾನಕ್ಕೆ ಬಿಜಯಂಗೈಯುವ ಮೂಲಕ 5 ದಿನಗಳ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here