ಮೇಗಳಪಾಳ್ಯದಲ್ಲಿ ವಿಭಿನ್ನವಾದ ಆಕಳು ಹಬ್ಬ..!

0
29

ವೈ.ಎನ್.ಹೊಸಕೋಟೆ

           ತಾಲ್ಲೂಕಿನ ಮೇಗಳಪಾಳ್ಯ ಗ್ರಾಮದಲ್ಲಿ ಶನಿವಾರ ರೈತಾಪಿವರ್ಗ ಸಡಗರ ಸಂಭ್ರಮದಿಂದ ಆಕಳು ಹಬ್ಬ ಆಚರಿಸಿದರು.
ಹಬ್ಬದ ಭಾಗವಾಗಿ ಗ್ರಾಮದ ದೇವರುಗಳನ್ನು ಕೆರೆಯ ಅಂಗಳದಲ್ಲಿ ಕೂರಿಸಲಾಗಿತ್ತು. ದೇವರ ಸುತ್ತಲೂ ಪೂಜಿತ ಆಕಳನ್ನು ತಿರುಗಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಪ್ರತಿ ಮನೆಯ ರಾಸುಗಳನ್ನು ಸಿಂಗರಿಸಿಕೊಂಡು ಕರೆತಂದು ದೇವರ ಸುತ್ತ ಪ್ರದಕ್ಷಿಣೆ ನಡೆಸಿದರು. ಕುರಿ ಮತ್ತು ಮೇಕೆಗಳು ತಂಡೋಪತಂಡವಾಗಿ ಸುತ್ತು ತಿರುಗುತ್ತಿದ್ದ ವೇಳೆ ನೆರೆದಿದ್ದ ಜನತೆ ಕೇಕೆ ಹಾಕುತ್ತಾ ಅವುಗಳೊಂದಿಗೆ ತಾವು ಸುತ್ತುತ್ತಾ ಸಂಭ್ರಮಿಸಿದರು.

            ಮೇಗಳಪಾಳ್ಯ, ಲಂಬಾಣಿಹಟ್ಟಿಯ ಪ್ರತಿ ಮನೆಯ ಮಹಿಳೆಯರು ಕೆರೆಯಂಗಳದಲ್ಲಿದ್ದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆಯಿಂದ ಪ್ರಾರಂಭವಾಗಿದ್ದ ಹಬ್ಬ ರಾತ್ರಿಯವರೆಗೆ ಕಳೆಗಟ್ಟಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here