ಹಾನಗಲ್ 10 ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಅಗತ್ಯ

0
7
ಹಾನಗಲ್ಲ :
 
         ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಶಕ್ತಿ ಅಭಿಯಾನದಡಿ ಸದಸ್ಯತ್ವ ನೋಂದಣಿಗೆ ಡಿ. 10 ರ ವರೆಗೆ ಅವಕಾಶ ನೀಡಲಾಗಿದ್ದು, ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಲು ಕಾರ್ಯಕರ್ತರು ಶ್ರಮ ವಹಿಸುವಂತೆ ಅಕ್ಕಿಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್ ಮನವಿ ಮಾಡಿದರು.
 
         ಹಾನಗಲ್ ತಾಲೂಕಿನ ತಿಳವಳ್ಳಿ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಗೊಂದಿ, ಹಿರೇಕಾಂಶಿ, ಮಕರವಳ್ಳಿ ಸೇರಿದಂತೆ ಹಲವೆಡೆ ಶಕ್ತಿ ಅಭಿಯಾನದಡಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೆ ಮೂಲಾಧಾರ. ಕಾರ್ಯಕರ್ತರಿಗೆ ಧ್ವನಿ ನೀಡುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಶಕ್ತಿ ಅಭಿಯಾನ ರೂಪಿಸಿದ್ದಾರೆ. ಹಾನಗಲ್ ತಾಲೂಕಿನಾದ್ಯಂತ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದ್ದು, ಇನ್ನಷ್ಟು ಸಂಖ್ಯೆಯ ಕಾರ್ಯಕರ್ತರನ್ನು ಸಂಘಟನೆ ಜೊತೆ ಜೋಡಿಸಿಕೊಳ್ಳಲು ಗಮನ ಹರಿಸಬೇಕಿದೆ ಎಂದರು.
 
       ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗನಗೌಡ ಪಾಟೀಲ ಮಾತನಾಡಿ, ಹಾನಗಲ್, ಅಕ್ಕಿಆಲೂರ ಮತ್ತು ಹಾನಗಲ್ ನಗರ ಬ್ಲಾಕ್ ವ್ಯಾಪ್ತಿಗಳಲ್ಲಿ ಸದಸ್ಯತ್ವ ನೋಂದಣಿ ಕಾರ್ಯ ಚುರುಕಾಗಿ ನಡೆದಿದೆ. ಪ್ರತಿ ವಾರ್ಡು ವ್ಯಾಪ್ತಿಗಳಲ್ಲಿಯೂ ಜನಬೆಂಬಲ ವ್ಯಕ್ತವಾಗುತ್ತಿದೆ. ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಲು ಯುವಕರು ಕಾತರರಾಗಿದ್ದಾರೆ ಎಂದರು.
 
         ತಾಪಂ ಸದಸ್ಯ ದ್ಯಾವನಗೌಡ ಪಾಟೀಲ, ಅಭಿಯಾನದ ಸಂಚಾಲಕ ಸಂತೋಷ್ ಸುಣಗಾರ, ಮುಖಂಡರಾದ ಯಲ್ಲಪ್ಪ ಕಲ್ಲೇರ, ವಿರುಪಾಕ್ಷ, ಜಗದೀಶ್ ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here