ಕೌಶಲ್ಯ ತರಬೇತಿಯಿಂದಾಗಿ ಆದಿವಾಸಿಗಳ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ

0
9

ಬೆಂಗಳೂರು

       ಕೌಶಲ್ಯ ತರಬೇತಿಯಿಂದಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಆದಿವಾಸಿಗಳ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಯಾಗಿದೆ.

       ಇದುವರೆಗೂ ಜೀವನ ನಿರ್ವಹಣೆಗೆ ತೋಟ ಮತ್ತು ಅರಣ್ಯವನ್ನೇ ನಂಬಿಕೊಂಡಿದ್ದ, ಆದಿವಾಸಿ ಯುವಕ-ಯುವತಿಯರ ಬದುಕು ಬದಲಾಗಿದ್ದು, ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿದೆ. ಸ್ವಿರ್ಜರ್‍ಲ್ಯಾಂಡ್ ಮೂಲದ ಸ್ವಯಂ ಸೇವಾ ಸಂಸ್ಥೆ 30 ಆದಿವಾಸಿ ಯುವತಿಯರಿಗೆ ಹೊಲಿಗೆ ತರಬೇತಿ ಮತ್ತು 10 ಮಂದಿ ಯುವಕರಿಗೆ ಕಂಪ್ಯೂಟರ್ ತರಬೇತಿಯನ್ನು ನೀಡಿ ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದೆ.

       ಆದಿವಾಸಿ ಯುವಕ-ಯುವತಿಯರಲ್ಲಿ ಇದು ಹೆಚ್ಚಿನ ಪರಿಣಾಮ ಬೀರಿದ್ದು, ಕೌಶಲ್ಯ ತರಬೇತಿ ಪಡೆಯಲು ಹೆಚ್ಚಿನ ಆಸಕ್ತಿ ಕಂಡುಬಂದಿದ್ದು, 100 ಕ್ಕೂ ಹೆಚ್ಚು ಯುವಕ-ಯುವತಿಯರು ತರಬೇತಿಗಾಗಿ ಸ್ವಯಂ ಪ್ರೇರಣೆಯಿಂದ ನೋಂದಣೆ ಮಾಡಿಕೊಂಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here