ಪೊಲೀಸರನ್ನು ನಿಂದಿಸಿದ ಮಾದಕ ವ್ಯಸನಿ ಅಂದರ್

0
11

ಬೆಂಗಳೂರು

         ರಸ್ತೆಯಲ್ಲಿ ಗಲಾಟೆ ಮಾಡುತ್ತಾ ರಂಪಾಟ ಮಾಡುತ್ತಿದ್ದದ್ದನ್ನು ತಡೆಯಲು ಬಂದ ಪೆಲೀಸ್ ಸಬ್‍ಇನ್ಸ್‍ಪೆಕ್ಟರ್ ಸೇರಿ ಸಿಬ್ಬಂದಿಯನ್ನು ಅವಾಚ್ಯ ಶ್ಯಬ್ಧಗಳಿಂದ ನಿಂದಿಸಿದ ಮಾದಕ ವ್ಯಸನಿ ಯುವಕ ಮತ್ತವನ ಸ್ನೇಹಿತೆಯನ್ನು ಸುದ್ದಗುಂಟೆಪಾಳ್ಯ ಪೆಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

        ಮಾದಕ ವ್ಯಸನಿ ಯುವಕ ಪ್ರತೀಕ್ ಮತ್ತವನ ಸ್ನೇಹಿತೆ ಸುಪ್ರೀತಾರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರತೀಕ್ ಮಾದಕ ವ್ಯಸನಿಯಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಆತನನ್ನು ಬಂಧಿಸದೇ ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಿದ್ದಾರೆ.

       ಕಂಠಪೂರ್ತಿ ಕುಡಿದು ಪ್ರತೀಕ್ ಹಾಗೂ ಆತನ ಸ್ನೇಹಿತೆ ಸುಪ್ರಿತಾ ಬಿಟಿಎಂ 1ನೇ ಹಂತದ 9ನೇ ಡಿ ಮುಖ್ಯರಸ್ತೆಯಲ್ಲಿ ಕಳೆದ ನ.5 ರಂದು ರಾತ್ರಿ ಗಲಾಟೆಮಾಡುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾದ ಹಿನ್ನಲೆಯಲ್ಲಿ ಪೆಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ ಪೆಕ್ಟರ್ ಪ್ರಭುಗೌಡ ಪಾಟೀಲ್ ಹಾಗೂ ಎ ಎಸ್ ಐ ವೆಂಕಟರಮಣ, ಪ್ರತೀಕ್ ಹಾಗೂ ಸುಪ್ರಿತಾ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.ತಕ್ಷಣ ಇಬ್ಬರನ್ನು ಬಂಧಿಸಿದ ಪೆÇಲೀಸರು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.

           ಪ್ರತೀಕ್ ಮಾದಕ ವ್ಯಸನಿಯಾಗಿದ್ದು ಅದರ ಅಮಲಿನಲ್ಲಿ ರಂಪಾಟ ನಡೆಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಆತನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಲಾಗಿದೆ ವೈದ್ಯರ ತಪಾಸಣಾ ವರದಿ ಬಂದ ನಂತರ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

             ಘಟನೆ ನಡೆದ ಮರುದಿನ ಬೆಳಿಗ್ಗೆ ಠಾಣೆಗೆ ಆಗಮಿಸಿದ ಪ್ರತೀಕ್ ಚಿಕ್ಕಪ್ಪಯಾರಿರುವ ಎಸಿಪಿಯೊಬ್ಬರು ಪ್ರತೀಕ್ ಹಾಗೂ ಸುಪ್ರಿತಾ ಪರವಾಗಿ ಪೆಲೀಸರ ಬಳಿ ಕ್ಷಮೆಯಾಚಿಸಿದ್ದಾರೆ.ಸದ್ಯ ಪ್ರತೀಕ್ ಡಿ-ಎಡಿಕ್ಷನ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಾಗೂ ಆತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಡಿ-ಎಡಿಕ್ಷನ್ ಸೆಂಟರ್ ಗೆ ಕರೆದೊಯ್ಯುತ್ತಿರುವುದಾಗಿ ಹೇಳಿ ಕರೆದೊಯ್ದಿದ್ದಾರೆ.

             ಸುದ್ದಗುಂಟೆಪಾಳ್ಯ ಪೆಲೀಸರು ಪ್ರತೀಕ್ ಹಾಗೂ ಸುಪ್ರೀತಾ ವಿರುದ್ಧ ಐಪಿಸಿ ಸೆಕ್ಷನ್ 332, 353 ಹಾಗೂ 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here