ಡಿ.8-9ರಂದು ಡಿ-ಎಸ್4 ರಾಜ್ಯ ಅಧ್ಯಯನ ಶಿಬಿರ

ದಾವಣಗೆರೆ :

          ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ವತಿಯಿಂದ ಡಿ.8 ಮತ್ತು 9ರಂದು ಹರಿಹರದ ಹೊರ ವಲಯದಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಸಾಂಸ್ಕøತಿಕ ಭವನದಲ್ಲಿ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ ಎಂದು ಜಾನಪದ ತಜ್ಞ, ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಹೆಚ್.ವಿಶ್ವನಾಥ್ ತಿಳಿಸಿದರು.

         ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.8ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಶಿಬಿರ ಉದ್ಘಾಟಿಸಲಿದ್ದಾರೆ. ಡಿಎಸ್-4 ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವತಿ ಹಾಗೂ ಸದಸ್ಯ ಕೆ.ಎಸ್.ಬಸವಂತಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಘನೆಯ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ಪ್ರಾಸ್ತಾವಿಕ ಮಾತನಾಡಲಿದ್ದಾರೆ.

         ಮುಖ್ಯ ಅತಿಥಿಗಳಾಗಿ ಹರಿಹರ ನಗರಸಭಾ ಸದಸ್ಯ ಸೈಯದ್ ಎಜಾಜ್, ಹಿರಿಯ ಹೋರಾಟಗಾರ ಎಲ್.ನಿರಂಜನಮೂರ್ತಿ, ಹಾವೇರಿಯ ಡಿಡಿಪಿಯು ಗಣೇಶ್ ಪೂಜಾರ್ ಭಾಗವಹಿಸಲಿದ್ದಾರೆ. ಡಿ-ಎಸ್4 ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಬಸವರಾಜ್, ಉಪಾಧ್ಯಕ್ಷ ಮಾಡನಾಯಕನಹಳ್ಳಿ ರಂಗಪ್ಪ, ಬೆಲ್ಲದಮಡು ಕೃಷ್ಣಪ್ಪ, ಕೆ.ಬಾಬುರಾವ್ ಉಪಸ್ಥಿತರಿರಲಿದ್ದಾರೆಂದು ಮಾಹಿತಿ ನೀಡಿದರು.

       ಮಧ್ಯಾಹ್ನ 1 ಗಂಟೆಯಿಂದ ನಡೆಯುವ ಮೊದಲ ಗೋಷ್ಠಿಯಲ್ಲಿ “ಭಾರತದ ಸಂವಿಧಾನ ಮತ್ತು ಮನು ಸ್ಮøತಿಯ ಅವಲೋಕನ” ಕುರಿತು ಮೈಸೂರಿನ ವಿಚಾರವಾದಿ ಕೆ.ಎಸ್.ಭಗವಾನ್, 2ನೇ ಗೋಷ್ಠಿಯಲ್ಲಿ “ಡಾ.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ” ಕುರಿತು ಪ್ರಾಧ್ಯಾಪಕ ಪ್ರೊ.ಎ.ಬಿ.ರಾಮಚಂದ್ರಪ್ಪ, 3ನೇ ಗೋಷ್ಠಿಯಲ್ಲಿ “ಕ್ರಾಂತಿಕಾರಿ ಪ್ರೊ.ಬಿ.ಕೃಷ್ಣಪ್ಪ ಮತ್ತು ದಲಿತ ಚಳುವಳಿ ಹಾಗೂ ಸವಾಲುಗಳು” ಕುರಿತು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‍ನ ಹನಗವಾಡಿ ರುದ್ರಪ್ಪ, 4ನೇ ಗೋಷ್ಠಿಯಲ್ಲಿ “ಭಾರತದ ಪ್ರಾಚೀನ ಇತಿಹಾಸ ಮತ್ತು ಸಾಮಾಜಿಕ ಪರಿವರ್ತನಾಕಾರರ ಹೋರಾಟಗಳು” ಕುರಿತು ಸಹ ಪ್ರಾಧ್ಯಾಪಕ ಡಾ.ಎಂ.ಮಂಜಣ್ಣ ವಿಷಯ ಮಂಡಿಸಲಿದ್ದಾರೆಂದು ವಿವರಿಸಿದರು.

          ಡಿ.9ರಂದು ಬೆಳಿಗ್ಗೆ 9.30ರಿಂದ ನಡೆಯುವ 5ನೇ ಗೋಷ್ಠಿಯಲ್ಲಿ “ಭಗವಾನ್ ಬುದ್ಧರ ತತ್ವಗಳು ಮತ್ತು ನೈತಿಕ ಮೌಲ್ಯಗಳ ಮಹತ್ವ” ವಿಷಯ ಕುರಿತು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕಾರಾಂ, 6ನೇ ಗೋಷ್ಠಿಯಲ್ಲಿ “ಶೈಕ್ಷಣಿಕ ಅವಕಾಶಗಳ ವಂಚನೆ ಮತ್ತು ಸಮಾನ ಶಿಕ್ಷಣ ನೀಡುವ ಅನಿವಾರ್ಯತೆ” ಕುರಿತು ಪ್ರಾಧ್ಯಾಪಕ ಎಂ.ಟಿ.ಕೃಷ್ಣಮೂರ್ತಿ, 7ನೇ ಗೋಷ್ಠಿಯಲ್ಲಿ “ಸಮಾನತೆಯ ಹೋರಾಟದಲ್ಲಿ ವಚನ ಚಳವಳಿಯ ಮಹತ್ವ” ಕುರಿತು ವಿಚಾರವಾದಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, 8ನೇ ಗೋಷ್ಠಿಯಲ್ಲಿ “ರಾಜಕಾರಣ ಮತ್ತು ದಲಿತ ಚಳುವಳಿ” ಕುರಿತು ಮಾನಪ್ಪ ಕಟ್ಟಿಮನಿ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

          ಮಧ್ಯಾಹ್ನ 3.30ಕ್ಕೆ ಬೀದರ್‍ನ ಪೂಜ್ಯ ಭಂತೇಜಿ ಸಂಘ ರಕ್ಷಿತ ಅವರ ಸಾನಿಧ್ಯದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಾವೇರಿಯ ಕವಿ ಸತೀಶ್ ಕುಲ್ಕಣಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಎಂ. ಕುಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಷ್ಮ ಕೌಸರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

         ಸುದ್ದಿಗೋಷ್ಠಿಯಲ್ಲಿ ಡಿಎಸ್_4ನ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಬಸವರಾಜ್, ಎಲ್.ಜಯಪ್ಪ, ಡಿ.ಡಿ.ಹನುಮಂತಪ್ಪ, ಎಲ್.ನಿರಂಜನಮೂರ್ತಿ, ಕೆ.ಎಂ.ವಾಗೀಶ್ವರಯ್ಯ, ಗೋವಿಂದರಾಜ್, ಕೆ.ಸಿ.ಮೂರ್ತಿ ಬೆಳ್ಳಿಗನೂಡು, ಷಡಾಕ್ಷರಪ್ಪ, ಚಂದ್ರಪ್ಪ, ರಘು ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap