ಬಿಜೆಪಿಯಿಂದ “ಏಕತಾ ಓಟ”

0
9

ಹಾನಗಲ್ಲ :

      ಬ್ರಿಟೀಷರ ಬಂಧನದಲ್ಲಿದ್ದ ಭಾರತವನ್ನು ಬಿಡುಗಡೆಗೊಳಿಸಲು ಸರ್ದಾರ ವಲ್ಲಭಬಾಯ್ ಪಟೇಲ್ ಅವರ ಕೊಡುಗೆ, ತುಂಡು ತುಂಡಾಗಿ ಹರಿದು ಹಂಚಿದ್ದ ಭಾರತವನ್ನು ಒಂದು ಗೂಡಿಸುವ ಪ್ರಯತ್ನದಲ್ಲಿ ಸಫಲವಾಗಿತ್ತು ಎಂದು ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ತಿಳಿಸಿದರು.

      ಹಾನಗಲ್ಲಿನಲ್ಲಿ ಬುಧವಾರ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲರ 143 ಜನ್ಮ ದಿನ್ಮದಿನ ಹಾಗೂ ರಾಷ್ರೀಯ ಏಕತಾ ದಿವಸ ಅಂಗವಾಗಿ ಏರ್ಪಡಿಸಿದ “ಏಕತಾ ಓಟ” ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಭಾರತದ ವಿಶಾಲ ನೆಲದಲ್ಲಿ ಏಕೀಕೃತ ಭಾರತವನ್ನು ನಿರ್ಮಿಸಿದ ಮಹಾನ್ ನೇತಾರ ಪಟೇಲರಾಗಿದ್ದಾರೆ.

        ಸ್ವಾತಂತ್ಯ ಪೂರ್ವದಲ್ಲಿ ಬ್ರಿಟೀಷರ ಕುತಂತ್ರದಿಂದ 600 ಕ್ಕೂ ಅಧಿಕ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಂದುಗೂಡಿಸಿ ಇಂದು ನಾವು ನೋಡುತ್ತಿರುವ ಭಾರತವನ್ನು ಸೃಷ್ಟಿಸಿದ ಕೀರ್ತಿ ಸರ್ದಾರ ಪಟೇಲರಿಗೆ ಸಲ್ಲಲೇಬೇಕು ಎಂದ ಅವರು, ತಮಗೆ ದಕ್ಕಿದ್ದ ಪ್ರಧಾನಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ಸಿಕ್ಕ ಜವಾಬ್ದಾರಿಯನ್ನು ಸ್ವಾರ್ಥರಹಿತ ಸೇವೆ ಮಾಡಿದವರು ಸರ್ದಾರ ವಲ್ಲಭಬಾಯ್ ಪಟೇಲರು.

        ಅಂಥ ಮಹಾತ್ಮರನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡು, ಪಟೇಲರ 182 ಮೀಟರ್ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ರಾಷ್ಟ್ರಪಿತ ಸರ್ದಾರ ವಲ್ಲಭಬಾಯ್ ಪಟೇಲರಿಗೆ ಗೌರವ ಸಲ್ಲಿಸಿದ್ದಾರೆ ಎಂದರು.

ಏಕತಾ ಓಟ :

         ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿದಂತೆ ಎರಡುನೂರಕ್ಕು ಹೆಚ್ಚು ಜನ ಕಾರ್ಯಕರ್ತರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು. ಶ್ರೀಕುಮಾರೇಶ್ವರ ವಿರಕ್ತಮಠದಿಂದ ಹೊರಟ ಏಕತಾ ಓಟ ಸೋಮವಾರಪೇಟೆ, ಕಂಚಾಗರ ಓಣಿ, ಎಸ್‍ಬಿಐ ಬ್ಯಾಂಕ್ ಮೂಲಕ ಕನಕದಾಸ ವೃತದಿಂದ ಹಾಯ್ದು ಕೋರ್ಟ ಸರ್ಕಲ್‍ದಿಂದ ಹಳೆ ಬಸ್ಟ್ಯಾಂಡ ಮೂಲಕ ಪುನಃ ಕುಮಾರೇಶ್ವರ ಮಠ ತಲುಪಿತು.

         ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ತಾ ಪಂ ಸದಸ್ಯ ಬಸವರಾಜ ಬೂದಿಹಾಳ, ಪುರಸಭೆ ಸದಸ್ಯೆ ಹಸೀನಾಬಿ ನಾಯಕನವರ, ಮುಖಂಡರಾದ ಎ.ಎಸ್.ಬಳ್ಳಾರಿ, ಜಮೀರ್ ದರ್ಗಾ, ರವಿ ಕಲಾಲ, ಸಂತೋಷ ಟೀಕೋಜಿ, ಶಿವಯೋಗಿ ಹಿರೇಮಠ, ಕೊಟೇಪ್ಪ ಚಿಕ್ಕಣ್ಣನವರ, ಚಂದ್ರು ಉಗ್ರಣ್ಣನವರ, ಮಂಜು ಬಸವಂತಕರ, ಬಾಸ್ಕರ ಹುಲ್ಲಮನಿ, ರಮೇಶ ಚಿನ್ನಮುಳಗುಂದ, ಚಂದ್ರಪ್ಪ ಹರಿಜನ, ನಾಗೇಂದ್ರ ಬಂಕಾಪೂರ, ಈರಣ್ಣ ಗೌಳಿ ಮೊದಲಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here