ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ

0
17

ಚಿತ್ರದುರ್ಗ:

        ನಗರದ ಚೇಳುಗುಡ್ಡು ವಾರ್ಡ್ ನಂ.11 ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಸೋಮವಾರ ನಗರಸಭೆ ಸದಸ್ಯರುಗಳಾದ ಜಯಂತಿ ಮಂಜುನಾಥಗೊಪ್ಪೆ, ಶಕೀಲಾಭಾನು ಸೈಯದ್ ಸೈಫುಲ್ಲಾ ಇವರುಗಳು ಚಾಲನೆ ನೀಡಿದರು.

        ಪ್ರಜಾಪ್ರಭುತ್ವದಲ್ಲಿ ಹದಿನೆಂಟು ವರ್ಷ ತುಂಬಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಸರ್ವಶ್ರೇಷ್ಟವಾದ ಹಕ್ಕನ್ನು ಸಂವಿಧಾನ ನೀಡಿದೆ. ಹಾಗಾಗಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು 11 ನೇ ವಾರ್ಡ್‍ನ ನಗರಸಭೆ ಸದಸ್ಯೆ ಜಯಂತಿ ಮಂಜುನಾಥಗೊಪ್ಪೆ ಅಲ್ಲಿನ ನಿವಾಸಿಗಳಲ್ಲಿ ಮನವಿ ಮಾಡಿದರು.
12 ನೇ ವಾರ್ಡ್ ನಗರಸಭೆ ಸದಸ್ಯೆ ಶಕೀಲಾಭಾನು ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರುಗಳ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅವಕಾಶವಿದೆ ಹನ್ನೊಂದು ಮತ್ತು ಹನ್ನೆರಡನೆ ವಾರ್ಡ್‍ನ ನಿವಾಸಿಗಳು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದರು.

       ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೆಚ್.ಶಬ್ಬೀರ್‍ಭಾಷ, ಭಾಗದ ಸಂಖ್ಯೆ 129 ರ ಬಿ.ಎಲ್.ಓ. ಕೆ.ಆರ್.ಬಸವರಾಜ್, ಸೈಯದ್‍ಸೈಫುಲ್ಲಾ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here