ಜಾಹೀರಾತು ಫಲಕಗಳಲ್ಲಿ ವಿಜೃಂಭವಿಸುತ್ತಿರುವ ಇಂಗ್ಲೀಷ್

0
8

ದಾವಣಗೆರೆ:

          ಈ ನೆಲದ ಕನ್ನಡ ಭಾಷೆಯ ಬದಲು ಜಾಹೀರಾತು ಫಲಕಗಳಲ್ಲಿ ಆಂಗ್ಲಭಾಷೆ ವಿಜೃಂಭವಿಸುತ್ತಿರುವುದು ಅತ್ಯಂತ ವಿಷಾಧನೀಯವಾಗಿದೆ ಎಂದು ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‍ಶೆಣೈ ತಿಳಿಸಿದರು.

         ನಗರದ ಕಲಾಕುಂಚ ಸಾಂಸ್ಕತಿಕ ಸಂಸ್ಥೆ, ಎಸ್.ಎಸ್.ಎಂ.ಸರ್ಕಾರಿ ಉರ್ದು ಪ್ರೌಢಶಾಲಾ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ನಡೆದ ಕನ್ನಡ ನಿತ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ “ಕನ್ನಡ ನಾಡು ನುಡಿ ಇತಿಹಾಸ ಪರಂಪರೆ “ವಿಷಯದ ಕುರಿತು ಅವರು ಮಾತನಾಡಿದರು.

        ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದಂತೆ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಆ ಪ್ರಾಂತ್ಯದ ಭಾಷೆಗೆ ಮೊದಲ ಆದ್ಯತೆ ಕೊಡುವುದು ಶಿಷ್ಟಾಚಾರವಾಗಿದೆ. ಕರ್ನಾಟಕದ ಕೇಂದ್ರ ಸರ್ಕಾರದ ಅಂಚೆ, ರೈಲ್ವೇ ಇಲಾಖೆಗಳಲ್ಲಿ ಕನ್ನಡ ಭಾಷೆಗೆ ಮೊದಲ, ಹಿಂದಿಗೆ ಎರಡನೇ ಮತ್ತು ಆಂಗ್ಲ ಭಾಷೆಗೆ ಮೂರನೇ ಸ್ಥಾನವನ್ನು ನಾಮಫಲಕದಲ್ಲಿ ನೀಡಬೇಕು. ಆದರೆ, ಹಲವು ಮೊಬೈಲ್ ಕಂಪನಿಗಳ ಜಾಹೀರಾತು ಫಲಕಗಳಲ್ಲಿ ಆಂಗ್ಲ  ವೈಭವೀಕರಿಸುತ್ತಿದೆ. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಹೋರಾಡಿದರೂ ಯಾವುದೇ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಜಾತಿ, ಮತ, ಲಿಂಗ, ವರ್ಣ ಭೇದವಿಲ್ಲದೇ ನಮ್ಮ ಕನ್ನಡ ಭಾಷೆ ಒಂದು ಸಂಸ್ಕತಿಯಾಗಿ ವಿಶ್ವದಲ್ಲಿ ವಿಜೃಂಭಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಇದನ್ನು ಬದ್ಧತೆಯಿಂದ ಬೆಳೆಸಬೇಕು ಎಂದರು.

        ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ “ಮಾತೃ ಭಾಷೆಯಾವುದಾದರೂ ನಾಡ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕು. ಮನಸಾರೆ ನುಡಿಯಬೇಕು. ಶತಮಾನಗಳ ಇತಿಹಾಸ ಇರುವ ಈ ಕನ್ನಡ ಭಾಷೆ ಪ್ರೀತಿ. ಕೇವಲ ನವಂಬರ್‍ಗೆ ಅಷ್ಟೇ ಸೀಮಿತವಾಗದೆ ವರ್ಷಪೂರ್ತಿ ಈ ನಮ್ಮ ಸಂಸ್ಕತಿಗಳ ಚಟುವಟಿಕೆ ನಡೆಯುತ್ತಿರಬೇಕು ಎಂದರು.

        ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪ್ಯಾಯ ಟಿ.ಅಂಬಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರಲ್ಲಿ ಮಾನವೀಯ ಮೌಲ್ಯ ಮರೆಯಾಗುತ್ತಿರುವುದು ಬೇಸರದ ಸಂಗತಿ. ಈ ಭಾಗದ ಪೋಷಕರು ಹೆಣ್ಣು ಮಕ್ಕಳನ್ನು ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆ ವಿವಾಹ ಮಾಡುವುದರೊಂದಿಗೆ ವಿದ್ಯಾರ್ಥಿನಿಯ ಮಂದಿನ ಶಿಕ್ಷಣದ ಸಾಧನೆ ಕುಂಠಿತವಾಗುತ್ತದೆ. ಸರ್ಕಾರ ಇಲಾಖೆ ಪೋಷಕರಿಗೆ ಅದೆಷ್ಟೋ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೂ ಪೋಷಕರು ಕಿವಿಗೊಡದೇ ಹೆಣ್ಣು ಮಕ್ಕಳ ಭವ್ಯವಾದ ಭವಿಷ್ಯವನ್ನೇ ಬಲಿ ಕೊಡುತ್ತಿರುವುದು ದುರಂತ ಎಂದು ವಿಷಾಧಿಸಿದರು.

          ಕಾರ್ಯಕ್ರಮದಲ್ಲಿ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮ ಶಾಂತಪ್ಪ ಪೂಜಾರಿ, ಶೋಭಾ ಮಂಜುನಾಥ್, ವಸಂತಿ ಮಂಜು, ಪುಷ್ಪಾ ಮಂಜುನಾಥ್, ಗಿರಿಜಮ್ಮ ನಾಗರಾಜಪ್ಪ, ಬಿ.ಶಾಂತಪ್ಪ ಪೂಜಾರಿ ಶೈಲಾ ವಿಜಯಕುಮಾರ ಶೆಟ್ಟಿ, ವಿಜಯಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಬೀಬಿ ಆಯಿಷಾ ಮತ್ತು ಸಂಗಡಿಗರ ನಾಡಗೀತೆ ಹಾಡಿದರು. ಶಿಕ್ಷಕಿ ಮಹಬೂಬೀ ಸ್ವಾಗತಿಸಿದರು. ಶಿಕ್ಷಕಿ ಅಂಬುಜಾ ನಿರೂಪಿಸಿದರು. ಕೆ.ಬಿ.ಶೈಲಜಾ ಬಾಬು ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here