ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ:ಹೆಚ್.ಎನ್.ಕುಮಾರ್

ಹುಳಿಯಾರು

        ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ.ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಎನ್.ಕುಮಾರ್ ತಿಳಿಸಿದರು.

       ಕುವೆಂಪು ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಸಾಗರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹುಳಿಯಾರಿನ ಅಕ್ಷಯ ಐ ಕೇರ್ ಸೆಂಟರ್ ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

      ಕಲುಷಿತ ವಾತಾವರಣ ಹಾಗೂ ಆಹಾರ ಸೇವನೆಯಿಂದ ಕೂಡ ಆರೋಗ್ಯ ಏರುಪೇರು ಆಗುತ್ತಿದೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿಯಾಗಿದ್ದು ಶಿಬಿರವನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಆಯೋಜಕರ ಉದ್ದೇಶ ಕೂಡ ಸಾರ್ಥಕವಾಗುತ್ತದೆ ಎಂದರು.

      ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಆರೋಗ್ಯ ತಪಾಸಣೆ ಗಗನ ಕುಸುಮವಾಗಿದೆ.ಗ್ರಾಮೀಣ ಪ್ರದೇಶದ ಜನರು ತಮ್ಮ ಆರೋಗ್ಯ ತಪಾಸಣೆಗಾಗಿ ನಗರ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ನಗರ ಪ್ರದೇಶದ ವೈದ್ಯರೇ ಬಂದು ಉಚಿತ ಶಿಬಿರ ನಡೆಸಲು ಸಂಘ-ಸಂಸ್ಥೆಗಳೊಂದಿಗೆ ಮುಂದಾಗಿರುವುದು ಈ ಭಾಗದ ಜನತೆಗೆ ವರದಾನವಾಗಿದೆ .ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

       ಶಿಬಿರದಲ್ಲಿ ಹೃದಯ ತಜ್ಞ ಡಾ.ಕುಮಾರ್, ಮೂತ್ರಪಿಂಡ ತಜ್ಞ ಡಾ.ಶ್ರೀಕಾಂತ್, ಕಣ್ಣಿನ ತಜ್ಞರಾದ ಡಾ.ಎಂ.ಜಿ.ಶಿವರಾಮು, ಟಿ.ಎಂ.ಮನೋಹರ್, ಹುಳಿಯಾರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಪ್ರಕಾಶ್, ನೇತ್ರ ಪರೀಕ್ಷಕರಾದ ಪ್ರಸಾದ್, ಪ್ರಶಾಂತ್ ಸೇರಿದಂತೆ ವಿವಿಧ ಸಿಬ್ಬಂದಿ ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಣಾ ಕಾರ್ಯ ನಡೆಸಿದರು.ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 400ಕ್ಕೂ ಹೆಚ್ಚು ಸ್ತ್ರೀ ಪುರುಷರು ಹೃದಯ ಚಿಕಿತ್ಸೆ,ಮೂತ್ರಪಿಂಡ ಚಿಕಿತ್ಸೆ,ಕಣ್ಣಿನ ಚಿಕಿತ್ಸೆ ಗೆ ಒಳಪಟ್ಟರು.

        ಅಕ್ಷಯ ಐ ಕೇರ್ ಸೆಂಟರ್‍ನ ವಿವೇಕಾನಂದ, ವಿಸ್ಮಯ,ಪಂಚಾಯತ್ ಕಾವಲು ಸಮಿತಿ ಅಧ್ಯಕ್ಷ ನರಸಿಂಮೂರ್ತಿ (ಕೆಎಂಎಲ್), ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಚ್.ಎನ್.ವೆಂಕಟೇಶ್,ಜಲಾಲ್ ಸಾಬ್,ಬದ್ರೇಶ್, ಎಚ್.ಬಿ.ಬೈರೇಶ್, ಸನತ್, ಪ್ರದೀಪ್, ರಂಗನಾಥ್ (ಧನುಷ್),ಶಶಿಕಲಾ ಮತ್ತಿತರರು ಸೇರಿದಂತೆ ಕುವೆಂಪು ಸಂಸ್ಥೆ ಮತ್ತು ಪಂಚಾಯ್ತಿ ಕಾವಲು ಸಮಿತಿಯ ಪದಾಧಿಕಾರಿಗಳು ಇದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap