ಬಳ್ಳಾರಿ ಲೋಕಸಭಾ ಉಪಚುನಾವಣೆ : ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ

0
9

ಬಳ್ಳಾರಿ

          ಬಳ್ಳಾರಿ ಲೋಕಸಭಾ ಉಪಚುನಾವಣೆಯು ನ.03 ರಂದು ಬೆಳಗ್ಗೆ 7 ರಿಂದ ಸಂಜೆ 6.30 ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗಧಿ ಮಾಡಿದ್ದು, ಇದಕ್ಕಾಗಿ ಕ್ಷೇತ್ರ ವ್ಯಾಪ್ತಿಯ 1901 ಮತಗಟ್ಟೆಗಳಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

         ಬಳ್ಳಾರಿ ಗ್ರಾಮೀಣ, ನಗರ, ಸಂಡೂರು, ಕಂಪ್ಲಿ, ವಿಜಯನಗರ, ಹೆಚ್.ಬಿ.ಹಳ್ಳಿ, ಹಡಗಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ 8,55,194 ಪುರುಷರು ಮತ್ತು 8,57,944 ಮಹಿಳೆಯರು ಸೇರಿದಂತೆ ಒಟ್ಟು 17,13,354 ಮತದಾರರಿದ್ದಾರೆ. ಮತದಾರರಿಗೆ ಜಿಲ್ಲಾಡಳಿತ ವೋಟರ್ಸ್ ಸ್ವೀಪ್ ವಿತರಿಸಿದೆ.

          ಚುನಾವಣಾ ಆಯೋಗದ ಗುರುತಿನಿ ಚೀಟಿ (ಎಪಿಕ್ ಕಾರ್ಡ್) ಇಲ್ಲವೇ ರೇಷನ್ ಕಾರ್ಡ್, ಆಧಾರ್ ಕಾರ್ಡ್, ನರೇಗಾ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 12 ದಾಖಲೆಗಳಲ್ಲಿ ಒಂದನ್ನು ಪ್ರಸ್ತುತಪಡಿಸಿ ಮತದಾನ ಮಾಡಬಹುದಾಗಿದೆ.
ಇಂದು ನಗರದ ಮುನ್ಸಿಪಲ್ ಕಾಲೇಜು ಮೈದಾನ ಮತ್ತು ಸಂತಜಾನ್ ಹೈಸ್ಕೂಲ್ ಮೈದಾನದಲ್ಲಿ ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರದ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ ಮತದಾನಕ್ಕೆ ಅಗತ್ಯವಾದ ಮತಯಂತ್ರ, ವಿವಿ ಪ್ಯಾಟ್, ಇಂಕ್ ಮೊದಲಾದ ಸಾಮಾಗ್ರಿಗಳನ್ನು ಮತಗಟ್ಟೆಗೆ ನೇಮಕ ಮಾಡಿದ ಸಿಬ್ಬಂದಿಗೆ ವಿತರಿಸುವ ಕಾರ್ಯ ನಡೆಯಿತು.

        ಅವುಗಳನ್ನು ತೆಗೆದುಕೊಂಡು ಸಿಬ್ಬಂದಿ ಬಸ್, ಜೀಪ್ ಮೊದಲಾದ ವಾಹನಗಳಲ್ಲಿ ಮತಗಟ್ಟೆಗಳಿಗೆ ತೆರಳಿದ್ದು ಸಂಜೆರೊಳಗೆ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡಿದರು.

         418 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅವುಗಳಿಗೆ ಪ್ಯಾರಾಮಿಲ್ಟ್ರಿ ಪಡೆ ನಿಯೋಜನೆ ಸೇರಿದಂತೆ ವಿಶೇಷ ಭದ್ರತೆ ಒದಗಿಸಲಾಗುತ್ತಿದೆ. ಕ್ಷೇತ್ರದಲ್ಲಿ 16500 ವಿಕಲಚೇತರ ಮತದಾರರಿದ್ದು, ಅವರು ಮತಚಲಾಯಿಸಲು ಪ್ರತಿ ಗ್ರಾಪಂ ಒಂದು ವಾಹನದ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ನಿಮತ್ತ ಎಲ್ಲಾ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

         ಬೆಳಗ್ಗೆ ಮತದಾನ ಆರಂಭವಾಗುವ ಮುನ್ನ ಮಾರ್ಕ್ ಪೋಲಿಂಗ್ ಮತಗಟ್ಟೆಯ ಎಜೆಂಟರ ಸಮ್ಮುಖದಲ್ಲಿ ಆಯಾ ಮತಗಟ್ಟೆಯಲ್ಲಿ ನಡೆಯಲಿದೆ. ಚುನಾವಣಾ ಕಾರ್ಯಕ್ಕಾಗಿ 10450 ಸಿಬ್ಬಂದಿಯನ್ನು ನೇಮಕ ಮಾಡಿದೆ. ಚುನಾವಣಾ ಕಾರ್ಯಕ್ಕೆ 333 ಬಸ್‍ಗಳು, 98 ಮಿನಿಬಸ್‍ಗಳು ಹಾಗೂ 75 ಟ್ರಕ್‍ಗಳನ್ನು ಬಳಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here