ಡಿ ಆರ್ ಪಾಟೀಲ್ ಪರ ಮಾಜಿ ಸಚಿವರ ಪ್ರಚಾರ

0
8

ಹಾವೇರಿ :

      ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಗಲಿನಲ್ಲಿ ನಕ್ಷತ್ರ ತೋರಿಸುವಂತೆ ಭರವಸೆಗಳನ್ನು ನೀಡಿ ತಾವು ನೀಡಿದ ಭರವಸೆಗಳನ್ನು ಇಡೇರಿಸದೇ ಕಾಲಹರಣ ಮಾಡಿ ಭಾರತೀಯ ಜನರಿಗೆ ಅನ್ಯಾಯ ಮಾಡಿದ್ದಾರೆ.ಯುವಕರಿಗೆ ಪ್ರತಿ ವರ್ಷ ಎರಡು ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸುಳ್ಳು ಹೇಳಿ ಯುವ ಜನಾಂಗಕ್ಕೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಮನೋಹರ್ ತಹಶೀಲ್ದಾರ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

      ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲರ ಪರವಾಗಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯತರ್ಕರು ಹಾನಗಲ್ ತಾಲೂಕಿನ ಬೆಳಗಲಪೇಟಿ,ನೀರಲಗಿ,ಮಾಸನಕಟ್ಟಿ, ಇನಾಮ ದ್ಯಾಮನಕೊಪ್ಪ, ಹುಣಸಿಕಟ್ಟಿ, ಶಿರ್ಮಾಪುರ, ಸಾವಂಶಿಗಿ,ಕಾಡಶೆಟ್ಟಿಹಳ್ಳಿ,ಮಲ್ಲಿಗಾರ,ಸಾತೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆಯಲ್ಲಿ ಅವರು ಮಾತನಾಡಿದರು.

       ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಮಾತುನಾಡುವುದೇ ಅವರು ಸಾಧನೆಯಾಗಿದ್ದು, ಹೀಗೆ ಎಲ್ಲ ವರ್ಗದ ಜನರಿಗೆ ಅವರು ಕಳೆದ ಬಾರಿ ಹೇಳಿದ ಭರವಸೆ ಇಡೇಸುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಕಾಂಗ್ರೇಸ್ ಉತ್ತಮ ಅಭ್ಯರ್ಥಿ ಗಾಂಧಿವಾದಿ,ಗ್ರಾಮೀಣಾಭಿವೃದ್ಧಿ ಕನಸುಗಾರ ಡಿಆರ್ ಪಾಟೀಲ ಅವರಿಗೆ ಪಕ್ಷದ ಟಿಕೇಟ್ ನೀಡಿದ್ದು, 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾಗುವುದು ಖಚಿತ ಎಂದು ಹೇಳಿದರು.

       ಮುಖಂಡ ಶಿವಯೋಗಿ ಹಿರೇಮಠ ಹಾಗೂ ಪುರಸಭೆ ಸದಸ್ಯ ನಾಗಪ್ಪ ಸವದತ್ತಿ ಮಾತನಾಡಿ ಕಳೆದ ಎರಡು ಬಾರಿ ಜಯಗಳಿಸಿದ ಶಿವಕುಮಾರ ಉದಾಸಿ ಕ್ಷೇತ್ರಕ್ಕೆ ಏನು ಮಾಡಿದ್ದರೆ ? ಮೋದಿಗೆ ನೋಡಿ ಓಟು ಹಕಿ ಎನ್ನುವಂತಹ ಪರಸ್ಥಿತಿ ಹೇಗೆ ಬಂತ್ತು ? ಕೇವಲ ತನ್ನ ಸ್ವಂತ ವ್ಯವಹಾರಕ್ಕಾಗಿ ವಿದೇಶಕ್ಕೆ ಹಾರುವ ಕೆಲಸ ಮಾಡಿದ್ದಾರೆ.ಹಾವೇರಿ ಲೋಕಸಭೆಯ ಸದಸ್ಯರು ಯಾರು ಎಂಬುವುದೇ ಜನರಿಗೆ ಗೊತ್ತಿರಲಿಲ್ಲಾ. ಈ ಬಾರಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಕ್ರೀಯಾ ವ್ಯಕ್ತಿಗಳಾಗಿದ್ದು ಕ್ಷೇತ್ರದ ಹಾಗೂ ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ.

       ಹೀಗಾಗಿ ಅವರ ಆಯ್ಕೆ ನೂರಕ್ಕೆ ನೂರರಷ್ಟು ಖಂಡಿತ ಎಂದು ಹೇಳಿದರು. ಪ್ರಚಾರ ಕಾರ್ಯದಲ್ಲಿ ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ,ಮುಖಂಡರಾದ ಟಿಎಸ್ ಬಡಿಗೇರ,ಶಂಕರ ದೇಶಪಾಂಡೆ,ಹೊನ್ನಪ್ಪ,ಮಂಜು ಅಂಬಿಗೇರ ಸೇರಿದಂತೆ ಕಾಂಗ್ರೇಸ್ ಪಕ್ಷದ ತಾಲೂಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here