ಜನಮನ ಸೆಳೆದ ಜನಪದ ಕಲಾ ತಂಡಗಳ ಮೆರವಣಿಗೆ

ಹುಳಿಯಾರು:

     ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಸ್ಕತಿಕ ವೈಭವ ಕಾರ್ಯಕ್ರಮದ ಅಂಗವಾಗಿ ಹುಳಿಯಾರು ಪಟ್ಟಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜನಪದ ಕಲಾ ತಂಡಗಳ ಮೆರವಣಿಗೆ ಜನಮನ ಸೆಳೆಯಿತು.

     ಗುರುವಾರ ಮಧ್ಯಾಹ್ನ 12 ಗಂಟೆಗೆ ಕಲಾ ತಂಡಗಳ ಮೆರವಣಿಗೆಗೆ ಗೋಡೆಕೆರೆ ಮಹಾಸಂಸ್ಥಾನ ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಎಂಪಿಎಸ್ ಶಾಲಾ ಆವರಣದವರೆಗೆ ನಡೆಯಿತು.

     ಉತ್ಸವದಲ್ಲಿ ಪೂಜಾ ಕುಣಿತ, ವೀರಗಾಸೆ, ಪಟ್ಟಾ ಕುಣಿತ, ಡೊಳ್ಳಿನ ನೃತ್ಯ, ತತ್ವಪದ ಗಾಯನ, ಜಾನಪದ ಹಾಡುಗಳು, ಭಜನೆ ಹಾಡು, ಅರೆವಾದ್ಯ, ಸೋಮನ ಕುಣಿತ, ನಂದಿಧ್ವಜ, ನಾಸಿಕ್ ಡೋಲ್, ಚಿಟ್ಟಿಮೇಳ, ಕಹಳೆ, ಮಂಗಳ ವಾದ್ಯ, ತಮಟೆ ವಾದ್ಯ, ಹುಲಿವೇಷ, ಕೋಲಾಟ ಹೀಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ಹತ್ತಾರು ಕಲಾ ತಂಡಗಳು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದವು.

     ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯ ಅಧ್ಯಕ್ಷ ಗುಬ್ಬಿ ವೀರೇಶ್, ಚಿ.ನಾ.ಹಳ್ಳಿ ತಾಲೂಕು ಸಂಚಾಲಕ ರೇಣುಕಾಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಹುಳಿಯಾರಿನ ಸಂಚಾಲಕಿ ಕೆ.ಸಿ.ಗೌರಮ್ಮ, ಮಹೇಶ್, ಚಂದ್ರಶೇಖರ್, ಕಲ್ಲೂರು ಶ್ರೀನಿವಾಸ್, ಪಂಕಜ, ಹೆಚ್.ಎಸ್ ರಮೇಶ್, ಕಿರುತೆರೆ ಕಲಾವಿದ ಗೌಡಿ, ಸೀನ್ಸ್ ಬೋರಯ್ಯ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap