ಸಾಲಬಾದೆ:ರೈತ ಆತ್ಮಹತ್ಯೆ

0
15

ಶಿರಾ:

      ಸಾಲಬಾಧೆ ತಾಳಲಾರದೆ ರೈತನೊಬ್ಬ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ರಾಜಣ್ಣ(33) ಮೃತ ರೈತ.

      ಸರ್ವೆ ನಂ: 310/5 ರಲ್ಲಿ 1.10 ಎಕರೆ ಜಮೀನು ಹೊಂದಿದ್ದ ರೈತ ರಾಜಣ್ಣ ಕೃಷಿ ಮಾಡುವ ಉದ್ದೇಶದಿಂದ ತಡಕಲೂರು ವಿಎಸ್‍ಎಸ್‍ಎನ್‍ನಲ್ಲಿ 50.ಸಾವಿರ ರೂಪಾಯಿ ಬೆಳೆಸಾಲ, ಬರಗೂರು ಕೆನರಾ ಬ್ಯಾಂಕ್‍ನಲ್ಲಿ 50.ಸಾವಿರ ಬಂಗಾರ ಅಡಮಾನ ಸಾಲ, ಮುತ್ತೋಟ್ಟು ಫೈನಾನ್ಸ್‍ನಲ್ಲಿ 50.ಸಾವಿರ ರೂಪಾಯಿ ಸಾಲ.

       ಇದಲ್ಲದೇ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಇತರರಲ್ಲಿ ಕೈಸಾಲ ಸೇರಿದಂತೆ ಒಟ್ಟು 4.ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಕೈಕೊಟ್ಟ ಬೆಳೆ ರೈತ ರಾಜಣ್ಣ ನನ್ನು ಆತಂಕ ಪಡುವಂತೆ ಮಾಡಿದ್ದು, ಸಾಲಭಾದೆ ಸಹಿಸದೆ ತನ್ನ ಜಮೀನಿನಲ್ಲಿರುವ ಮರದ ಮೇಲೆ ಹತ್ತಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಮೃತ ರೈತ ರಾಜಣ್ಣನಿಗೆ ಹೆಂಡತಿ ಪ್ರತಿಭಾ ಸೇರಿದಂತೆ ಲೋಕೇಶ್ ಮತ್ತು ಸೃಷ್ಠಿ ಎಂಬ ಇಬ್ಬರು ಮಕ್ಕಳಿದ್ದರು ಎನ್ನಲಾಗಿದೆ. ಪಟ್ಟನಾಯಕನಹಳ್ಳಿ ಪೋಲೀಸ್ ಠಾಣಾ ಪಿಎಸ್‍ಐ ವಿ.ನಿರ್ಮಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here