ಹುಣಸೆ ಮರದಿಂದ ಬಿದ್ದು ರೈತ ಸಾವು

0
14

ಕೊರಟಗೆರೆ:-

         ಹುಣಸೆ ಮರದಲ್ಲಿ ಹುಣಸೆ ಹಣ್ಣು ಕೀಳುವ ಸಂದರ್ಭದಲ್ಲಿ ರೈತನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದುತಲೆಗೆತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ ಬುಧವಾರ ಸಂಜೆ ಕೊನೆಯುಸಿರೆಳೆದ ಘಟನೆಕೊರಟಗೆರೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿಜರುಗಿದೆ.

          ತಾಲೂಕಿನ ಅಕ್ಕಿರಾಂಪುರ ಬಳಿಯ ಸೋಂಪುರಗ್ರಾಮದಲ್ಲಿ ಈ ದುರ್ಘಟನೆಜರುಗಿದದ್ದು, ಇದೇಗ್ರಾಮದರೈತ ಭದ್ರಯ್ಯ(55 ವರ್ಷ) ಎಂಬುವರೇ ಹುಣಸೆ ಮರದಿಂದ ಜಾರಿ ಬಿದ್ದು ಕೊನೆಯುಸಿರೆಳೆದ ದುರ್ದೈವಿಯಾಗಿದ್ದಾನೆ.

          ಮರದಿಂದ ಜಾರಿ ಬಿದ್ದರೈತನನ್ನು ಹುಣಸೆ ಕಾಯಿ ಆಯಲು ಬಂದಇತರೆ ಮಹಿಳೆಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

           ಈ ಸಂಬಂಧ ಕೊರಟಗೆರೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಮಂಜುನಾಥ, ಎಎಸೈ ರಾಮಕೃಷ್ಣಯ್ಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here