ಸಾಲ್ವೆಂಟ್ ಫ್ಯಾಕ್ಟರಿ ಪಕ್ಕದ ತ್ಯಾಜ್ಯದಲ್ಲಿ ಬೆಂಕಿ: ಅಪಾಯ ತಪ್ಪಿಸಿದ ಅಗ್ನಿಶಾಮಕ ದಳದವರು

0
10

ಕುಣಿಗಲ್

      ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯ ಪಕ್ಕದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದುದನ್ನು ಅನಿರೀಕ್ಷಿತವಾಗಿ ನೋಡಿ ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.

       ತಾಲ್ಲೂಕಿನ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದಲ್ಲಿರುವ ಬೆಂಗಳೂರಿನ ಕೆಂಪ ಹನುಮನವರಿಗೆ ಸೇರಿದ ಸಾಲ್ವೆಂಟ್ ಫ್ಯಾಕ್ಟರಿಯ ಪಕ್ಕದಲ್ಲಿರುವ ಜಮೀನಿಗೆ ಸದರಿ ಕಾರ್ಖಾನೆಯವರು ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿದ್ದರೂ ಈ ತ್ಯಾಜ್ಯ ವಸ್ತು ಸುಮಾರು ಹತ್ತು ಟನ್ ಇತ್ತು ಎಂದು ಹೇಳಲಾಗುತ್ತಿದೆ. ಸುರಿಯುವ ತ್ಯಾಜ್ಯದಲ್ಲಿ ಕೆಲವು ಕೆಮಿಕಲ್ಸ್ ಮಿಶ್ರಣದ ಕೆಮಿಕಲ್ ವಸ್ತುಗಳನ್ನು ಸುರಿಯಲಾಗುತ್ತಿತ್ತು. ಕೆಲವು ಕೆಮಿಕಲ್ ವಸ್ತುಗಳಿಂದ ಅನಿರೀಕ್ಷಿತವಾಗಿ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ. ಭಾರತ್ ಬಂದ್ ಇದ್ದ ಕಾರಣದಿಂದ ಕಾರ್ಖಾನೆಯಲ್ಲಿ ಕಾರ್ಮಿಕರು ಇರದ ಕಾರಣ ಕಾರ್ಖಾನೆಯವರು ಬೆಂಕಿ ಹೊತ್ತಿ ಉರಿಯುವುದನ್ನು ವೀಕ್ಷಣೆ ಮಾಡಿರುವುದಿಲ್ಲ.

         ಸುಮಾರು ಹತ್ತು ಟನ್ ಇದ್ದ ತ್ಯಾಜ್ಯದಲ್ಲಿ ಕೆಮಿಕಲ್ ಮಿಶ್ರಣದ ವಸ್ತುಗಳು ಸೇರಿಕೊಂಡಿದ್ದ ಕಾರಣ ಬೆಂಕಿ ಜಾಸ್ತಿಯಾಗಿ ಹೊಗೆಯೂ ಬೃಹದಾಕಾರವಾಗಿ ಹೋಗುತ್ತಿತ್ತು. ಅಕ್ಕಪಕ್ಕ ಇದ್ದಂತಹ ಕೆಲವು ಮನೆ ಹಾಗೂ ಕಾರ್ಖಾನೆಗಳಿಗೆ ತಗುಲುವ ಮುಂಚೆ ಅಗ್ನಿ ಶಾಮಕ ಠಾಣೆಯ ಪೂರ್ಣ ಸಿಬ್ಬಂದಿ ವಿಷಯ ತಿಳಿದು ತಕ್ಷಣ ಕಾರ್ಖಾನೆಯ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿ ನಡೆಯಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಅನಾಹುತಕ್ಕೆ ಕಾರ್ಖಾನೆಯ ಮಾಲೀಕರ ಬೇಜವಾಬ್ದಾರಿ ಎದ್ದು ಕಾಣುತ್ತಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here