ಲೇಡೀಸ್ ಕ್ಲಬ್ ಹಣ ದುರುಪಯೋಗ ಬೇಡ

0
21

ದಾವಣಗೆರೆ: 

      ಸುವರ್ಣ ಲೇಡೀಸ್ ಕ್ಲಬ್‍ನ ಸದಸ್ಯತ್ವದ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕ್ಲಬ್‍ನ ಕೋ-ಆರ್ಡಿನೇಟರ್ ಅಮೀರಾ ಬಾನು ಸಲಹೆ ನೀಡಿದ್ದಾರೆ.

       ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುವರ್ಣ ಲೇಡೀಸ್ ಕ್ಲಬ್‍ಗೆ ಸದಸ್ಯತ್ವ ಶುಲ್ಕವಾಗಿ ಸುಮಾರು 20-25 ಸಾವಿರ ಹಣ ಸಂಗ್ರಹಿಸಿದ್ದು, ಸಧ್ಯ ಕ್ಲಬ್ ಅಧ್ಯಕ್ಷೆ ಸುಜಾತ ನಾಗೇಶ್, ಖಜಾಂಚಿ ಮೀನಾಕ್ಷಿ ವೆಂಕಟೇಶ್ ಜಂಟಿ ಬ್ಯಾಂಕ್ ಖಾತೆಯಲ್ಲಿ ಹಣವಿದೆ. ಈ ಹಣದಲ್ಲಿ 50 ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದೀಗ ಅಧ್ಯಕ್ಷೆ, ಖಜಾಂಚಿ ಏಕಪಕ್ಷೀಯವಾಗಿ ಟೀಮ್ ಲೀಡರ್ಸ್‍ಗೆ ಸ್ಪರ್ಧೆ ಏರ್ಪಡಿಸಿ, ಬೆಳ್ಳಿ ನಾಣ್ಯ ಹಂಚಲು ಮುಂದಾಗಿದ್ದಾರೆ. ಈ ರೀತಿ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.

        ಸುವರ್ಣ ಲೇಡೀಸ್ ಕ್ಲಬ್‍ನ್ನು ಲೇಡೀಸ್ ಕ್ಲಬ್, ದಾವಣಗೆರೆ ಎಂಬುದಾಗಿ ಹೆಸರು ಬದಲಾಯಿಸಲಾಗಿದೆ. ಆದ್ದರಿಂದ ಹಣವನ್ನು ದಾವಣಗೆರೆ ಲೇಡೀಸ್ ಕ್ಲಬ್ ಖಾತೆಗೆ ವರ್ಗಾಯಿಸಬೇಕು. ಇಲ್ಲವೇ ಮೊದಲಿನ ತೀರ್ಮಾನದಂತೆ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಬೇಕು. ಆಟ ಆಡಿಸುವುದಿದ್ದರೆ ಎಲ್ಲಾ 1500 ಜನ ಸದಸ್ಯೆಯರಿಗೆ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಬೇಕು. ಇದನ್ನು ಹೊರತುಪಡಿಸಿ ಬೇರೇನಾದರೂ ಉದ್ದೇಶಕ್ಕೆ ಹಣ ದುರುಪಯೋಗವಾದಲ್ಲಿ ಅಧ್ಯಕ್ಷೆ ಸುಜಾತ ನಾಗೇಶ್ ಅವರೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ವಿನೋದ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here