ನಕಲಿ ಐಟಿ ಅಧಿಕಾರಿಯ ಬಣ್ಣ ಬಯಲು ಮಾಡಿದ ಆತನ ಪತ್ನಿ

0
8

ಬೆಂಗಳೂರು

     ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೆಂದು ಪತ್ನಿಯನ್ನು ನಂಬಿಸಿದ್ದಲ್ಲದೇ, ಬೇರೆ ಯುವತಿಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೋರ್ವನ ಬಂಡವಾಳವನ್ನು ಪತ್ನಿಯೇ ಬಯಲು ಮಾಡಿದ್ದಾರೆ

       ನಕಲಿ ಐಟಿ ಅಧಿಕಾರಿಯಾಗಿದ್ದ ಚರಣ್ ರಾಜ್ ಎಂಬಾತ ಮಾಗಡಿ ರೋಡ್ ನಿವಾಸಿಯಾಗಿರುವ ಮಂಜುಳಾ ಎಂಬವರೊಂದಿಗೆ 7 ವರುಷದ ಹಿಂದೆಯೇ ಈತ ಮದುವೆಯಾಗಿದ್ದನು. ತಾನು ಐಟಿ ಅಧಿಕಾರಿಯಾಗಿರುವುದಾಗಿ ಹೇಳಿ ತೆರಿಗೆ ವಿಧಿಸಲು ಹೋಗಿ ಸಿಕ್ಕಿಬಿದ್ದು ಆರು ತಿಂಗಳು ಜೈಲಿಗೆ ಹೋದಾಗಲೇ ಮಂಜುಳಾ ಪತಿಯ ಅಸಲಿ ಮುಖವನ್ನು ನೋಡಿದ್ದಳು

      ಮದುವೆಯಾಗಿದೆಯಲ್ಲಾ ಇನ್ನಾದರೂ ನೆಟ್ಟಗಿದ್ರೆ ಸಾಕು ಅಂದುಕೊಂಡವಳಿಗೆ ಗಂಡನ ಒಂದೊಂದೆ ಅಸಲಿ ಬಂಡವಾಳ ತಿಳಿಯುತ್ತಾ ಹೋಗಿದೆ.ಮಂಜುಳಾ ತವರು ಮನೆಗೆ ಹೋದವಳು ಅಚಾನಕ್ ವಾಪಾಸ್ ಬಂದಾಗ ಚರಣ್‍ರಾಜ್, ಬೇರೆ ಯುವತಿಯ ಜೊತೆ ಇದ್ದಿದ್ದು ತಿಳಿದಿದೆ.

        ಇದನ್ನು ಪ್ರಶ್ನಿಸಿದ್ದಕ್ಕೆ ಅಮ್ಮ, ತಂಗಿಯ ಜೊತೆ ಸೇರಿಕೊಂಡು ಆಕೆಯ ಮೇಲೆ ಹಲ್ಲೆ ಕೂಡ ನಡೆಸಿದ್ದನು ಎಂದು ಮಂಜುಳಾ ಆರೋಪಿಸಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಎರಡು ಮಕ್ಕಳ ಜೊತೆ ಬೇರೆ ಮನೆಯಲ್ಲಿರುವ ಮಂಜುಳಾ, ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆದರೆ ಯಾರೊಬ್ಬರು ಈ ವರೆಗೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ತನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮದವರ ಜೊತೆ ಅಳಲು ತೊಡಿಕೊಂಡಿದ್ದಾಳೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here